ಬಲವಂತದ ಮದುವೆ; ಪಾಕ್ ನಿಂದ ಭಾರತಕ್ಕೆ ಮರಳಿದ ಉಜ್ಮಾ, ತಾಯ್ನಾಡಿಗೆ ನಮನ
Team Udayavani, May 25, 2017, 1:44 PM IST
ನವದೆಹಲಿ: ಪಾಕಿಸ್ತಾನದಲ್ಲಿ ಬಲವಂತವಾಗಿ ವಿವಾಹ ಬಂಧನಕ್ಕೊಳಗಾಗಿದ್ದ ಭಾರತೀಯ ಮಹಿಳೆ ಉಜ್ಮಾ ಗುರುವಾರ ಬೆಳಗ್ಗೆ ವಾಘಾ ಗಡಿ ದಾಟಿ ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಭೂಮಿಗೆ ಕೈಯನ್ನು ಸ್ಪರ್ಶಿಸುವ ಮೂಲಕ ನಮನ ಸಲ್ಲಿಸಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇಂದು ಸಂಜೆ ಉಸ್ಮಾ ದೆಹಲಿಗೆ ಆಗಮಿಸಿ ಮನೆಗೆ ತೆರಳಲಿದ್ದಾರೆ ಎಂದು ವರದಿ ವಿವರಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮೂಲಕ ಉಜ್ಮಾ ಅವರನ್ನು ಸ್ವಾಗತಿಸಿದ್ದು, ಭಾರತದ ಮಗಳು ಎಂದು ಹೇಳಿದ್ದಾರೆ. ನಿಮಗಾಗಿರುವ ತೊಂದರೆಗೆ ಬಗ್ಗೆ ನನಗೆ ಬೇಸರವಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಹೋಗಲು ಅನುವು ಮಾಡಿ ಎಂದು ಪಾಕಿಸ್ತಾನದ ಭಾರತೀಯ ಹೈಕಮಿಷನರ್ ಕಚೇರಿ ಯಲ್ಲೇ ಆಶ್ರಯ ಪಡೆದಿದ್ದ ದೆಹಲಿ ಮಹಿಳೆ ಉಜ್ಮಾಗೆ ತವರಿಗೆ ಮರಳಲು ಇಲ್ಲಿನ ಹೈಕೋರ್ಟ್ ಅನುಮತಿ ನೀಡಿತ್ತು. ಜೊತೆಗೆ ವಾಘಾ ಗಡಿವರೆಗೂ ಅವರಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿತ್ತು.
ರಜೆಯ ಹಿನ್ನೆಲೆಯಲ್ಲಿ ಉಜ್ಮಾ ಮೆ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದಳು ಮೇ 3 ರಂದು ಪಾಕಿಸ್ತಾನದ ತಾಹಿರ್ ಅಲಿ ಇವರನ್ನು ವಿವಾಹವಾಗಿದ್ದರು. ಆದರೆ ತಾಹಿರ್ ಬಂದೂಕು ತೋರಿಸಿ ಮದುವೆಯಾದರು ಎಂದು ಉಸ್ಮಾ ಆರೋಪಿಸಿದ್ದರು. ಜೊತೆಗೆ ಭಾರತ ದಲ್ಲಿರುವ ತನ್ನ ಮಗು ಥಾಲಸ್ಸೇಮಿಯಾ ಎಂಬ ಖಾಯಿಲೆ ಯಿಂದ ಬಳಲುತ್ತಿದೆ. ಮಗುವಿಗೆ ನನ್ನ ಅಗತ್ಯವಿರುವುದರಿಂದ ನನಗೆ ಭಾರತಕ್ಕೆ ಮರಳಲು ಅನುಮತಿ ನೀಡಿಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಕೋರ್ಟ್ ಉಜ್ಮಾ ಪರವಾಗಿ ತೀರ್ಪು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
Uttar Pradesh: ಹಳಿ ಮೇಲೆ ಸಿಮೆಂಟ್ ಕಲ್ಲಿಟ್ಟು ರೈಲು ಹಳಿತಪ್ಪಿಸಲು ಪ್ರಯತ್ನ
MUST WATCH
ಹೊಸ ಸೇರ್ಪಡೆ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.