ಗ್ರಾ.ಪಂ. ಮೂಲಕ ಮೊಬೈಲ್ ಸೇವಾದಾರರ ಮಾಹಿತಿ
Team Udayavani, May 25, 2017, 2:50 PM IST
ಮಂಗಳೂರು: ದೇಶದ ಪ್ರತಿ ಗ್ರಾಮ ವ್ಯಾಪ್ತಿಯಲ್ಲೂ ಮೊಬೈಲ್ ಸಂಪರ್ಕ ಕಲ್ಪಿಸುವ ಜತೆಗೆ ಮಾಹಿತಿ ತಂತ್ರ ಜ್ಞಾನದ ಸೌಲಭ್ಯವನ್ನು ಗ್ರಾಮಾಂತರ ಭಾಗಕ್ಕೆ ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರತೀ ಗ್ರಾ.ಪಂ.ಗಳಿಗೆ ಪತ್ರ ಬರೆದು ಆಯಾ ಗ್ರಾಮದ ಮೊಬೈಲ್ ಸೇವಾದಾರರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಸೇವಾದಾರರ ಮಾಹಿತಿ ನೀಡುವಂತೆ ಕೇಂದ್ರ ದೂರ ಸಂಪರ್ಕ ಇಲಾಖೆ ರಾಜ್ಯ ಸರಕಾರಕ್ಕೆ ಕಳೆದ ವರ್ಷವೇ ಪತ್ರ ಬರೆದು ಕೋರಿತ್ತು. ಅದರಂತೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆ ಯಿಂದ ಎಲ್ಲ ಜಿ.ಪಂ.ನ ಯೋಜನಾ ವ್ಯವಸ್ಥಾಪಕರಿಗೆ/ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಗಳಿಗೆ/ ಗ್ರಾ.ಪಂ.ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ರವಾನೆಯಾಗಿದೆ.
ಪ್ರತೀ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ವ್ಯಾಪ್ತಿಯಲ್ಲಿರುವ ಬಿಎಸ್‌ಎನ್‌ಎಲ್, ಏರ್‌ಟೆಲ್ ಸೇರಿದಂತೆ ಮೊಬೈಲ್ ಸೇವಾದಾರರ ಮೂಲಕ ಅಥವಾ ಮೊಬೈಲ್ ಹೊಂದಿರುವವರಿಂದಲೇ ಮಾಹಿತಿ ಸಂಗ್ರಹಿಸಬೇಕಾಗಿದೆ. ಪ್ರತಿ ಗ್ರಾಮದಿಂದ ಸಂಗ್ರಹಿಸುವ ಮೊಬೈಲ್ ಸಂಖ್ಯೆಗಳನ್ನು ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಪಾಡ ಬೇಕಾಗಿದೆ. ಇದಕ್ಕಾಗಿ ಪ್ರತ್ಯೇಕ ವೆಬ್‌ಪೋರ್ಟಲ್ ಕೂಡ ರಚಿಸಲಾಗಿದೆ. ಜಿಲ್ಲಾ ಮಾಹಿತಿ ಅಧಿಕಾರಿ (ಡಿಐಒ)ಯಲ್ಲಿ ಇದರ ಪಾಸ್‌ವರ್ಡ್ ಇರಲಿದೆ. ಪ್ರತೀ ಪಂಚಾಯತ್‌ನಿಂದ ಸಂಗ್ರಹಿಸುವ ಮೊಬೈಲ್ ಸಂಖ್ಯೆಗಳನ್ನು ತಾಲೂಕು ಇಒ (ತಾ.ಪಂ. ಕಾರ್ಯನಿರ್ವಹಣಾಧಿಕಾರಿ)ಗಳು ಡಿಐಒ ಅವರಿಂದ ಪಾಸ್‌ವರ್ಡ್ ಕೇಳಿ, ವೆಬ್‌ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು.
ದೇಶದ ಗ್ರಾಮಾಂತರ ಭಾಗಕ್ಕೂ ಸರಕಾರದ ಎಲ್ಲ ಯೋಜನೆಗಳ ಮಾಹಿತಿಗಳು ಮೊಬೈಲ್ ಮೂಲಕ ದೊರೆಯುವಂತಾಗಬೇಕು ಹಾಗೂ ಮಾಹಿತಿ ತಂತ್ರಜ್ಞಾನದ ಸೇವೆ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ನೆಲೆಯಲ್ಲಿ ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿವೆ. ಇದರಂತೆ ಪ್ರತೀ ಪಂಚಾಯತ್‌ನವರು ತಮ್ಮ ವ್ಯಾಪ್ತಿಯ ಮೊಬೈಲ್ ಬಳಕೆದಾರರ ಸಂಖ್ಯೆ ನೀಡಬೇಕಿದೆ.
ಮೊಬೈಲ್ ಸಂಖ್ಯೆಗಳನ್ನು ಪ್ರತೀ ಜಿಲ್ಲೆಯಲ್ಲಿ ಸಂಗ್ರಹ ಮಾಡುವ ಉದ್ದೇಶದಿಂದ ಪ್ರತ್ಯೇಕ ವೆಬ್ ಪೋರ್ಟ್‌ಲ್ ರಚಿಸಲಾಗಿದೆ. ಇದಕ್ಕೆ ಜಿಲ್ಲಾ ಮಾಹಿತಿ ಅಧಿಕಾರಿ (ಡಿಐಒ)ಯಲ್ಲಿ ಪಾಸ್‌ವರ್ಡ್ ಇರಲಿದೆ. ಪ್ರತೀ ಪಂಚಾಯತ್‌ನಿಂದ ಸಂಗ್ರಹಿಸುವ ಮೊಬೈಲ್ ಸಂಖ್ಯೆಗಳನ್ನು ಪ್ರತೀ ತಾಲೂಕು ಇಒ (ತಾ.ಪಂ. ಕಾರ್ಯನಿರ್ವಹಣಾಧಿಕಾರಿ)ಗಳು ಡಿಐಒ ಅವರಿಂದ ಪಾಸ್‌ವರ್ಡ್ ಕೇಳಿ, ವೆಬ್‌ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು.
ಮಾಹಿತಿ ಸಂಗ್ರಹಣೆಗೆ ಮಾಹಿತಿಯ ಕೊರತೆ…!
ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೊಬೈಲ್ ಸೇವಾದಾರರ ಮಾಹಿತಿ ನೀಡುವಂತೆ ಕಳೆದ ವರ್ಷವೇ ಕೇಂದ್ರ ಸರಕಾರ
ದಿಂದ ಪತ್ರ ರವಾನೆಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಪೂರಕ ಕೆಲಸ ನಡೆಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎರಡನೇ ಬಾರಿಗೆ ಜಿ.ಪಂ./ತಾ.ಪಂ. ಹಾಗೂ ಗ್ರಾ.ಪಂ.ಗೆ ಪತ್ರ ಬರೆದು ವಿಳಂಬವಿಲ್ಲದೆ ಮೊಬೈಲ್ ಸೇವಾದಾರರ ಮಾಹಿತಿ ನೀಡುವಂತೆ ಸೂಚಿಸಿದೆ. ಎರಡನೇ ಪತ್ರ ಬಂದು ವಾರ ಎರಡಾಗುತ್ತಿದ್ದರೂ ಜಿಲ್ಲೆಯ ಬಹುತೇಕ ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಗೆ, ಕೆಲವು ಪಂಚಾಯತ್‌ನವರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದಂತಿಲ್ಲ. ವಿಚಾರಿಸಿದಾಗ, ಈ ಬಗ್ಗೆ ಪರಿಶೀಲಿಸುವುದಾಗಿಯೇ ಉತ್ತರ ನೀಡುತ್ತಿದ್ದಾರೆ.
ಎಲ್ಲ ಪಂಚಾಯತ್‌ಗೆ ಸೂಚನೆ ರವಾನೆ
ಮೊಬೈಲ್ ಸೇವಾದಾರರ ಮಾಹಿತಿ ನೀಡುವಂತೆ ಸರಕಾರದಿಂದ ಈಗಾಗಲೇ ಪತ್ರ ಬಂದಿದೆ. ಎಲ್ಲ ತಾಲೂಕು ಇ.ಒ. ಅವರಿಗೆ ಇದನ್ನು ಕಳುಹಿಸಲಾಗಿದೆ. ಅವರು ಪಂಚಾಯತ್‌ಗಳಿಗೆ ಸೂಚಿಸಿದ್ದಾರೆ. ಮಾಹಿತಿ ಸಂಗ್ರಹಿಸುವ ಕೆಲಸವನ್ನು ತುರ್ತಾಗಿ ಮಾಡುವಂತೆ ಸೂಚನೆ ನೀಡಲಾಗಿದೆ.
– ಎನ್.ಆರ್. ಉಮೇಶ್,
ಉಪಕಾರ್ಯದರ್ಶಿ ದ.ಕ. ಜಿ.ಪಂ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.