ಎಲ್ಲರಿಗೂ ಆಯುರ್ವೇದ ಅರಿವು ಅಗತ್ಯ: ಡಾ| ವಲಿಯತ್ತಾನ್‌

Team Udayavani, May 25, 2017, 3:16 PM IST

240517Astro04.jpg

ಉಡುಪಿ: ಅಥರ್ವ ವೇದ ದಲ್ಲಿರುವ ಉಲ್ಲೇಖಗಳಿಂದ ಹಿಡಿದು ಚರಕ, ಸುಶ್ರುತ, ಅವರ ವರೆಗಿನ ಆಯುರ್ವೇದ ಶಾಸ್ತ್ರದ ಕೊಡುಗೆಗಳನ್ನು ಜನಸಾಮಾನ್ಯರೂ ಅರಿಯಬೇಕಾಗಿದೆ ಎಂದು ರಾಷ್ಟ್ರೀಯಸಂಶೋಧನ ಪ್ರಾಧ್ಯಾಪಕ, ಮಣಿಪಾಲ
ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಎಂ.ಎಸ್‌. ವಲಿಯತ್ತಾನ್‌ ಅವರು ಕರೆ ನೀಡಿದರು.

ಮಣಿಪಾಲದ ಗಂಗೂಬಾಯಿ ಹಾನಗಲ್‌ ಸಭಾಂಗಣದಲ್ಲಿ ಬುಧವಾರ ನಡೆದ ಮಣಿಪಾಲ ವಿ.ವಿ. ಪ್ರಸ್‌ (ಎಂಯುಪಿ) 100ನೇ ಪ್ರಕಾಶನ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ಕೇವಲ ಸಂಪ್ರದಾಯವಾಗಿರದೆ ಪ್ರಾಯೋಗಿಕ ಪ್ರಯೋಜನವನ್ನು ಒಳಗೊಂಡಿದೆ. ಬುದ್ಧನಿಗೆ ಚಿಕಿತ್ಸೆ ನೀಡಿದ ಜೀವಕ ಆಯುರ್ವೇದಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾನೆ. ಬ್ರಿಟಿಷರು ಕೇವಲ ಔಷಧೀಯ ಸಸ್ಯಗಳ ಕುರಿತು ಮಾತ್ರ ಗಮನ ಹರಿಸಿದರು ಎಂದರು.

ಕೆಲವೇ ವರ್ಷಗಳ ಇತಿಹಾಸವಿರುವ ಪಾಶ್ಚಾತ್ಯ ಔಷಧ ಕ್ರಮ ಜನಜನಿತ ವಾಗಿ, ಆಯುರ್ವೇದ, ಯುನಾನಿ ಪರ್ಯಾಯ ಕ್ರಮಕ್ಕೆ ಸರಿಯಿತು. ಆದರೆ ಈಗ ಸಾಂಕ್ರಾಮಿಕ ರೋಗ ಗಳನ್ನು ತಡೆಗಟ್ಟಲು ಬಂದ ಪಾಶ್ಚಾತ್ಯ ಔಷಧ ಅಡ್ಡಪರಿಣಾಮದಿಂದ ಕ್ಯಾನ್ಸರ್‌, ಮಾನಸಿಕ ಕಾಯಿಲೆಗಳೇ ಮೊದಲಾದ ರೋಗಗಳು ಹರಡುತ್ತಿವೆ. ಔಷಧ ಉತ್ಪಾದಕರಿಗೂ ವೈದ್ಯರಿಗೂ ಸಂಬಂಧವಿಲ್ಲವಾಗಿದೆ. ಅಸಾಂಕ್ರಾಮಿಕ ರೋಗಗಳಿಗೂ ಆಯುರ್ವೇದದಲ್ಲಿ ಪರಿಹಾರವಿದೆ ಎಂದು ಡಾ| ವಲಿಯತ್ತಾನ್‌ ಹೇಳಿದರು.

ಅಥರ್ವವೇದದಿಂದ ಹಿಡಿದು ಈಗಿನ ವರೆಗಿನ ಇತಿಹಾಸವನ್ನು “ಆಯುರ್ವೇದಿಕ್‌ ಇನ್‌ಹೆರಿಟೆನ್ಸ್‌: ಎ ರೀಡರ್ ಕಂಪಾನಿಯನ್‌’ ಪುಸ್ತಕದಲ್ಲಿ ಬರೆದಿದ್ದೇನೆ. ಇದನ್ನು ಪಿಯುಸಿ ಅನಂತರದ ವಿದ್ಯಾರ್ಥಿಗಳು ಓದಬೇಕಾದ ಅಗತ್ಯವಿದೆ ಎಂದರು. ಈ ಪುಸ್ತಕವನ್ನು ವಿ.ವಿ. ಕುಲಪತಿ, ಪ್ರಕಾಶನ ವಿಭಾಗದ ರೂವಾರಿ ಡಾ| ಎಚ್‌. ವಿನೋದ ಭಟ್‌ ಬಿಡುಗಡೆಗೊಳಿಸಿದರು. 

ಇದೇ ಸಂದರ್ಭ ಶೀತಲಾ ಭಟ್‌ ಬರೆದ “ಪರ್ಫಾರ್ಮಿಂಗ್‌ ಸೆಲ್ಫ್, ಪರ್ಫಾರ್ಮಿಂಗ್‌ ಜೆಂಡರ್‌’, ನಾಗಾ ಲ್ಯಾಂಡ್‌ನ‌ ಶಾಲಾ ಪ್ರಾಂಶುಪಾಲೆ, ಮಣಿಪಾಲದ ಪ್ರಾಕ್ತನ ವಿದ್ಯಾರ್ಥಿನಿ ತೊನಾಲಿ ಸೇಮಾ ಬರೆದ “ಸುಮಿ ಆ್ಯಂಡ್‌ ದಿ ಡಾನ್ಸ್‌ ಆಫ್ ದಿ ಡಾರ್ಕ್‌ ಸ್ಪಿರಿಟ್ಸ್‌’ ಪುಸ್ತಕವನ್ನು ಡಾ| ಎಂ.ಎಸ್‌. ವಲಿಯತ್ತಾನ್‌ ಬಿಡುಗಡೆಗೊಳಿಸಿದರು. ಕೋಲ್ಕತಾದ ಅನುಶ್ವಾ ಚಕ್ರವರ್ತಿ ಬರೆದ “ಇಫ್ ವಿ ಮೀಟ್‌ ಅಗೈನ್‌, ವಿ ಶಲ್‌ ಸೆ¾„ಲ್‌’ ಪುಸ್ತಕವನ್ನು ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಎಂಯುಪಿ ಮುಖ್ಯ ಸಂಪಾದಕಿ, ಯೂರೋಪಿಯನ್‌ ಸ್ಟಡೀಸ್‌ ವಿಭಾಗ ಮುಖ್ಯಸ್ಥೆ ಡಾ| ನೀತಾ ಇನಾಂದಾರ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಮಣಿಪಾಲ್‌ ಸೆಂಟರ್‌ ಫಾರ್‌ ಫಿಲಾಸಫಿ ಆ್ಯಂಡ್‌ ಹ್ಯುಮಾನಿಟೀಸ್‌ ಪ್ರಾಧ್ಯಾಪಕಿ ಗಾಯತ್ರಿ ಪ್ರಭು ಶುಭಕೋರಿದರು. ಪ್ರಭಾಕರ ಶಾಸಿŒ ಉಪಸ್ಥಿತರಿದ್ದರು. ಎಂಯುಪಿ ಸಂಗ್ರಹ ಸಂಪಾದಕಿ ಅನಿತಾ ನಿರ್ವಹಿಸಿ ವಂದಿಸಿದರು.

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.