ಆಯ್ಕೆ ಮಂಡಳಿ ವಿರುದ್ಧ ಹರ್ಭಜನ್ ಆಕ್ರೋಶ
Team Udayavani, May 27, 2017, 10:52 AM IST
ಹೊಸದಿಲ್ಲಿ: ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿಯೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಆಯ್ಕೆಯಾಗದ ಬಗ್ಗೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಆಕ್ರೋಶಗೊಂಡಿದ್ದಾರೆ.
ಜತೆಗೆ ಎಡಗೈ ಆರಂಭಕಾರ ಗೌತಮ್ ಗಂಭೀರ್ ಅವರನ್ನು ಕೈಬಿಟ್ಟದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ಡಿ ಟಿವಿ ಸಂದರ್ಶನದ ವೇಳೆ ಭಜ್ಜಿ ತಮ್ಮ ನೇರ ಮಾತುಗಳ ಮೂಲಕ ಆಯ್ಕೆ ಮಂಡಳಿ ಮೇಲೆ ಹರಿಹಾಯ್ದರು.
“ಐಪಿಎಲ್ನಂಥ ಪಂದ್ಯಾವಳಿಗಳಲ್ಲಿ ನಾವು ಆಡುವುದಾದರೂ ಏಕೆ? ಇಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಬೇಕು ಎಂದ ಲ್ಲವೇ? ನನ್ನ ನಿರ್ವಹಣೆ ಆಯ್ಕೆ ಮಂಡಳಿಗೆ ಸಮಾ ಧಾನ ತರಲಿಲ್ಲ ಎಂದೇ ಭಾವಿಸೋಣ. ಆದರೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತ ಬಂದ ಗೌತಮ್ ಗಂಭೀರ್ ಅವರನ್ನಾದರೂ ಆರಿಸ ಬಹುದಿತ್ತಲ್ಲ?’ ಎಂದು ಹರ್ಭಜನ್ ಪ್ರಶ್ನಿಸಿದರು.
“ನನ್ನ ಆಯ್ಕೆ ಅಶ್ವಿನ್ ಅವರ ಫಿಟ್ನೆಸ್ ಅವಲಂಬಿಸಿರುತ್ತಿತ್ತು. ಅಶ್ವಿನ್ ಫಿಟ್ ಆದಲ್ಲಿ ಮೊದಲ ಆಯ್ಕೆ ಅವ ರದೇ ಆಗಿರುತ್ತಿತ್ತು. ಅಕಸ್ಮಾತ್ ಅಶ್ವಿನ್ ಲಭ್ಯರಾಗದೇ ಹೋದರಷ್ಟೇ ನಾನು ತಂಡದಲ್ಲಿರುತ್ತಿದ್ದೆ ಎಂದು ಭಾವಿಸಿದ್ದೆ. ಅಶ್ವಿನ್ ಫಿಟ್ ಆದುದರಿಂದ ನನ್ನ ಅವಕಾಶ ತಪ್ಪಿತು…’ ಎಂದೂ ಹರ್ಭಜನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.