ಸಸಿಹಿತ್ಲು: ಇಂಡಿಯನ್ ಓಪನ್ ಆಫ್ ಸರ್ಫಿಂಗ್
Team Udayavani, May 27, 2017, 11:12 AM IST
ಮಂಗಳೂರು: ಸಸಿಹಿತ್ಲು ಕಡಲ ತೀರದಲ್ಲಿ ಮೇ 28ರ ವರೆಗೆ ನಡೆಯಲಿರುವ “ಇಂಡಿಯನ್ ಓಪನ್ ಆಫ್ ಸರ್ಫಿಂಗ್’-ಕರ್ನಾಟಕ ಸರ್ಫಿಂಗ್ ಫೆಸ್ಟಿವಲ್‌ಗೆ ಶುಕ್ರವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.
ವಿದೇಶದಲ್ಲಿ ಪ್ರಚಲಿತದಲ್ಲಿರುವ ಸರ್ಫಿಂಗ್ ಕ್ರೀಡೆ ಕಳೆದ ವರ್ಷದಿಂದ ಕರಾಳಿಯ ಸಸಿಹಿತ್ಲು ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ ನಡೆಯುವ ಮೂಲಕ ಪ್ರಸಿದ್ಧಿ ಪಡೆಯುತ್ತಿದೆ. ಸರ್ಫಿಂಗ್ ಮೂಲಕ ಸಸಿಹಿತ್ಲು ಬೀಚ್ ಆಕರ್ಷಣೀಯ ತಾಣವಾಗುವಲ್ಲಿಯೂ ಸರಕಾರ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಸಸಿಹಿತ್ಲು ಬೀಚನ್ನು ಪ್ರವಾಸೋದ್ಯಮ ಕೇಂದ್ರವಾಗಿಸುವ ಅಪೇಕ್ಷೆ ಸರಕಾರ ಹೊಂದಿದ್ದು, ಸರ್ಫಿಂಗ್ ಕ್ರೀಡೆಗೆ ಯೋಗ್ಯ ಸ್ಥಳ ಇದಾಗಿದೆ ಎಂದರು.
ಸಸಿಹಿತ್ಲು ದೇಶದ ಉತ್ಕೃಷ್ಟ ಬೀಚ್: ಅಭಯಚಂದ್ರ
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಸರ್ಫಿಂಗ್ ಕ್ರೀಡೆಗೆ ಒತ್ತು ನೀಡುವ ಜತೆಗೆ ಜಲ ಸಾಹಸ ಕ್ರೀಡೆಗಳಿಗೆ ಪೂರಕವಾಗಿರುವ ಸಸಿಹಿತ್ಲು ಬೀಚನ್ನು ಭಾರತದ ಉತ್ಕೃಷ್ಟ ಬೀಚ್ ಆಗಿ ಪರಿವರ್ತಿಸುವ ಸಲುವಾಗಿ ರಾಜ್ಯ ಸರಕಾರ ವಾರ್ತಾ ಇಲಾಖೆಯಿಂದ 1 ಕೋ.ರೂ. ಮೊತ್ತದಲ್ಲಿ ಪ್ರಚಾರ ಕಾರ್ಯ ನಡೆಸಿದೆ ಎಂದರು.
ಸರ್ಫಿಂಗ್‌ಗೆ 400 ವರ್ಷಗಳ ಇತಿಹಾಸ!
ಮಂತ್ರ ಕ್ಲಬ್‌ನ ಸ್ಥಾಪಕ ಅಮೆರಿಕದ ಜ್ಯಾಕ್ ಎಬ್ನೇರ್ ಮಾತನಾಡಿ, ಕರಾವಳಿ ತೀರ ಹೊಂದಿರುವ ಕರ್ನಾಟಕಕ್ಕೆ ಸರ್ಫಿಂಗ್ ಹೊಸತೇನೂ ಅಲ್ಲ. ಇಂದು ಸರ್ಫಿಂಗ್ ಕಡಲ ಅಲೆಗಳ ನಡುವೆ ಸಾಹಸ ಕ್ರೀಡೆಯಾಗಿ ಬಹುವಾಗಿ ಯುವಕರನ್ನು ಆಕರ್ಷಿಸುತ್ತಿದೆ ಎಂದರು.
ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮನಪಾ ಮೇಯರ್ ಕವಿತಾ ಸನಿಲ್, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ, ಪೊಲೀಸ್ ಆಯುಕ್ತ ಚಂದ್ರಶೇಖರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ ಅಶೋಕ್ ಕುಮಾರ್ ದಾಸ್, ಕೆನರಾ ವಾಟರ್ ನ್ಪೋರ್ಟ್ಸ್ ಮತ್ತು ಪ್ರಮೋಷನ್ ಕೌನ್ಸಿಲ್ ಅಧ್ಯಕ್ಷ ಮನೋಹರ್ ಶೆಟ್ಟಿ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕಿಶೋರ್ ಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಸದಸ್ಯ ಪಿಯುಸ್ ರಾಡ್ರಿಗಸ್, ಪ್ರಮುಖರಾದ ವಸಂತ್ ಬರ್ನಾರ್ಡ್ ಮೊದಲಾದವರು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಸ್ವಾಗತಿಸಿದರು. ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ಡಾನಾ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.