ಅಂಬೇಡ್ಕರ ಆಧುನಿಕ ಭಾರತದ ಪಿತಾಮಹ
Team Udayavani, May 27, 2017, 3:21 PM IST
ಕಾಳಗಿ: ಭಾರತ ದೇಶಕ್ಕೆ ಸಂವಿದಾನ ರಚಿಸಿಕೊಟ್ಟ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ ಆಗಿದ್ದಾರೆ ಎಂದು ಕೌಂಠಾ (ಬಿ) ಬೀದರನ ಪೂಜ್ಯ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.
ಇಲ್ಲಿಯ ಪೊಲೀಸ್ ಮೈದಾನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಡಾ| ಬಿ.ಆರ್. ಅಂಬೇಡ್ಕರ್ ರ 126 ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಎಲ್ಲರಿಗೂ ಪ್ರೇರಣೆ ಪ್ರತೀಕ.
ಅವರನ್ನು ವಿಶ್ವಸಂಸ್ಥೆ ವಿಶ್ವಜ್ಞಾನಿ ಎಂದು ಗೌರವಪೂರ್ವಕವಾಗಿ ಕರೆದಿದೆ ಎಂದು ಹೇಳಿದರು. ಅಂಬೇಡ್ಕರರವರು ಕೇವಲ ಒಂದು ಜಾತಿಗೆ ಸೀಮಿತರಲ್ಲ ಅವರು ಇಡೀ ಮಾನವ ಕುಲಕ್ಕೆ ಸೇರಿದವರಾಗಿದ್ದಾರೆ, ಅವರ ತತ್ವ , ಆದರ್ಶ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು, ಯುವಕರು ದುಶ್ಚಟಗಳಿಗೆ ಬಲಿಯಾಗಕೂಡದು ಎಂದರು.
ಯಾವುದೇ ಸಮಾಜವಾಗಲಿ ಬೇರೆ ಸಮಾಜದೊಂದಿಗೆ ವಿರೋಧ ಕಟ್ಟಿಕೊಳ್ಳದೆ ಸೌಹಾರ್ದತೆ, ಪ್ರೀತಿಯಿಂದ ಒಡನಾಟ ಹೊಂದಬೇಕು ಎಂದು ನುಡಿದರು. ಶಾಸಕ ಡಾ| ಉಮೇಶ ಜಾಧವ ಮಾತನಾಡಿ, ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ.
ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನಿಡಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನ 125 ಶಾಲೆಗಳನ್ನು ಆರಂಭಿಸುತ್ತಿದೆ. ಅಲ್ಲದೆ ಚಿಂಚೋಳಿ ಮತಕ್ಷೇತ್ರದಲ್ಲಿ 76 ಅಂಬೇಡ್ಕರ್ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಸದಸ್ಯ ಮಾಪಣ್ಣಾ ಗಂಜಗಿರಿ ಮಾತನಾಡಿದರು.
ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಜಿಪಂ ಸದಸ್ಯ ರಾಜೇಶ ಗುತ್ತೇದಾರ, ಸುರೇಖಾ ನಿಂಬೆಣಪ್ಪ ಸಾಹು, ಮಾಜಿ ಜಿಪಂ ಸದಸ್ಯ ಜಗದೇವ ಗುತ್ತೇದಾರ, ಮಾಜಿ ಜಿ ಪಂ ಅಧ್ಯಕ್ಷ ಭೀಮರಾವ್ ಟಿ.ಟಿ, ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ,
ಸುನೀಲ ದೊಡ್ಮನಿ, ತಾಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಾಬುರಾವ್ ಡೊಣ್ಣುರ, ಕಲ್ಯಾಣರಾವ್ ಡೊಣ್ಣೂರ, ಮನ್ಸೂರ್ ಪಟೇಲ್, ಪರಮೇಶ್ವರ ಮಡಿವಾಳ, ವಿಶ್ವನಾಥ ವನಮಾಲಿ, ಶಿವಶರಣಪ್ಪ ಕಮಲಾಪುರ, ನಿಂಬೆಣ್ಣಪ್ಪ ಸಾಹು ಕೋರವಾರ,
ರಾಜಶೇಖರ ತಿಮ್ಮನಾಯಕ, ಜಿಯಾವೋದ್ದಿನ ಸೌದಾಗಾರ, ಚಂದ್ರಕಾಂತ ಜಾಧವ, ನಾರಯಣರಾವ ಕುಲಕರ್ಣಿ ಭರತನೂರ, ಕೊಡದೂರ ಗ್ರಾಮ ಪಂಚಾಯತ ಅಧ್ಯಕ್ಷೆ ವಿಜಯಲಕ್ಷಿ ಮೂಲಿಮನಿ, ರಾಘವೇಂದ್ರ ಗುತ್ತೇದಾರ, ಭರತ ಬುಳ್ಳ, ಬಾಬುರಾವ ಶೆಳ್ಳಗಿ, ಕಾಶಿನಾಥ ಶೆಳ್ಳಗಿ, ಶಂಕರ ಹೇರೂರ, ಧರ್ಮರಾವ ಪಾಟೀಲ,
ಸಂತೋಷ ನರನಾಳ, ಶಿವಕುಮಾರ ಚಿಂತಕೋಟಾ, ಇಮಿಯಾಜ ಅಲಿ, ಗಣಪತಿ ಹಾಳಕಾಯಿ, ಪರಮೇಶ್ವರ ಕಟ್ಟಿಮನಿ, ಮಹೇಂದ್ರ ಸೂಗೂರ ಹಾಗೂ ಇತರರು ಇದ್ದರು. ಸಿದ್ಧಾರ್ಥ ಚಿಮ್ಮಾಇದ್ಲಾಯಿ ಹಾಗೂ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಿಕಾರ್ಜುನ ಗವಾರ ಸ್ವಾಗತಿಸಿದರು. ಸಿದ್ದಣ್ಣಾ ಶೆಟ್ಟಿ ನಿರೂಪಿಸಿದರು. ನಾಗರಾಜ ಸಜ್ಜನ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.