ವೈಮಾನಿಕ ಪರೀಕ್ಷಾ ಕೇಂದ್ರ ಇಂದು ಲೋಕಾರ್ಪಣೆ
Team Udayavani, May 28, 2017, 10:11 AM IST
ನಾಯಕನಹಟ್ಟಿ: ಕುದಾಪುರ ಸಮೀಪದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ)
ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವೈಮಾನಿಕ ಪರೀಕ್ಷಾ ಕೇಂದ್ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ.
ಸಂಶೋಧನಾ ಕ್ಷೇತ್ರದಲ್ಲಿ ಈಗಾಗಲೇ ರುಸ್ತುಂ-1 ಹಾಗೂ ರುಸ್ತುಂ-2 ಡ್ರೋಣ್ ಮಾದರಿಯ ಲಘುವಿಮಾನಗಳ
ಪ್ರಯೋಗಾರ್ಥ ಹಾರಾಟ ಇಲ್ಲಿ ಯಶಸ್ವಿಯಾಗಿದೆ. 6 ತಿಂಗಳ ಹಿಂದೆ ವೈಮಾನಿಕ ಕೇಂದ್ರದ ಉದ್ಘಾಟನೆಯನ್ನು
ನೆರವೇರಿಸಬೇಕಾಗಿತ್ತು. ಆದರೆ, ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಉದ್ಘಾಟನೆ ನೆರವೇರಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಬದಲಾದ
ರಾಜಕೀಯ ಪರಿಸ್ಥಿತಿಯಿಂದಾಗಿ ಅವರು ಗೋವಾ ಮುಖ್ಯಮಂತ್ರಿಯಾದರು. ಹೀಗಾಗಿ ಉದ್ಘಾಟನೆ ನನೆಗುದಿಗೆ ಬಿದ್ದಿತ್ತು. ಎರಡು ಬಾರಿ ಸಂಶೋಧನಾ ಕೇಂದ್ರದ ಉದ್ಘಾಟನೆ ಮುಂದೂಡಲಾಗಿತ್ತು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ.
200 ಎಕರೆ ಪ್ರದೇಶದಲ್ಲಿ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ:
ವರವು ಹಾಗೂ ಕುದಾಪುರ ಕಾವಲು ಪ್ರದೇಶದಲ್ಲಿ ಡಿಆರ್‌ಡಿಒಗೆ 4200 ಎಕರೆ ಜಾಗ ನೀಡಲಾಗಿದೆ. ಇದರಲ್ಲಿ 4 ಸಾವಿರ
ಎಕರೆ ಪ್ರದೇಶವನ್ನು ಸಂಶೋಧನಾ ಕ್ಷೇತ್ರಕ್ಕೆ ಅಗತ್ಯವಿರುವ ಕಟ್ಟಡ ಹಾಗೂ ಇತರ ಕಾರ್ಯಗಳಿಗೆ ಮೀಸಲಿಡಲಾಗಿದೆ.
ಇನ್ನುಳಿದ 200 ಎಕರೆಯನ್ನು ಸಿಬ್ಬಂದಿ ನಿವಾಸ ಹಾಗೂ ಸಾರ್ವಜನಿಕರ ಬಳಕೆಗೆ ಕಾಯ್ದಿರಿಸಲಾಗಿದೆ. ಸಂಶೋಧನಾ
ಪ್ರದೇಶದ ಸುತ್ತ 20 ಕಿಮೀ ಉದ್ದದ ಕಾಂಪೌಂಡ್ ಹಾಗೂ ಪ್ರತಿ ಒಂದು ಕಿಮೀ ದೂರದಲ್ಲಿ ವೀಕ್ಷಣಾ ಗೋಪುರಗಳನ್ನು
ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ 3.5 ಕಿಮೀ ರನ್‌ವೇ ನಿರ್ಮಾಣಗೊಂಡಿದೆ. ವಿಮಾನಗಳ
ನಿರ್ವಹಣೆಗಾಗಿ ಎರಡು ಹ್ಯಾಂಗರ್, ವಿಮಾನಗಳ ಹಾರಾಟ ನಿಯಂತ್ರಣಕ್ಕಾಗಿ ವಾಯು ನಿಯಂತ್ರಣ ಕೇಂದ್ರ (ಎಟಿಸಿ) ನಿರ್ಮಿಸಲಾಗಿದೆ. ಇವುಗಳ ಜತೆಗೆ ರಾಡಾರ್ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಸಂಶೋಧನಾ ಕ್ಷೇತ್ರವನ್ನು ಸಂಪೂರ್ಣವಾಗಿ ರಕ್ಷಣಾ ಪಡೆಗಳಿಗೆ ವಹಿಸಲಾಗಿದೆ. ಹೀಗಾಗಿ ಇಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಲ್ಲಿ ತಲೆ ಎತ್ತಿದೆ.
ಈಗಾಗಲೇ ಸಂಶೋಧನಾ ಪ್ರದೇಶದಲ್ಲಿರುವ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ: 200 ಎಕರೆ ಪ್ರದೇಶದಲ್ಲಿ ಸಿಬ್ಬಂದಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 100 ವಿಜ್ಞಾನಿಗಳಿಗೆ, 350 ಸೈನಿಕರಿಗೆ ತಂಗಲು ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿಗೆ ಪ್ರತ್ಯೇಕ ವಸತಿಗೃಹಗಳಿವೆ. ಇಲ್ಲಿ ಸಂಶೋಧನೆ ಕೈಗೊಳ್ಳುವ ವಿಜ್ಞಾನಿಗಳಿಗೆ ಎರಡು ಬೃಹತ್
ವಸತಿಗೃಹಗಳು ಹಾಗೂ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಹಿರಿಯ ಹಾಗೂ ಕಿರಿಯ ವಿಜ್ಞಾನಿಗಳಿಗೆ ಅತ್ಯಾಧುನಿಕ
ತಂತ್ರಜ್ಞಾನದ ನಿವಾಸ ನಿರ್ಮಿಸಿರುವುದು ವಿಶೇಷ.
ಜೇಟ್ಲಿಯಿಂದ ಉದ್ಘಾಟನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ತಲೆ ಎತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ
ಸಂಸ್ಥೆಯ ವೈಮಾನಿಕ ಪರೀûಾ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ರಕ್ಷಣೆ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಭಾನುವಾರ ನೆರವೇರಿಸಲಿದ್ದಾರೆ. 4200 ಎಕರೆ ಪ್ರದೇಶದಲ್ಲಿ ವೈಮಾನಿಕ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ 3.5 ಕಿಮೀ ಉದ್ದದ ರನ್ ವೇ, ಇಡೀ ಪ್ರದೇಶದ ವಾಯುಯಾನವನ್ನು ನಿಯಂತ್ರಿಸುವ ವ್ಯಾಪ್ತಿ ನಿಯಂತ್ರಣ ಕೇಂದ್ರ (ಆರ್‌ಸಿಸಿ), ವಿಮಾನದ ದುರಸ್ತಿ ಕಾರ್ಯ ನಡೆಸುವ ಎರಡು ಹ್ಯಾಂಗರ್‌ಗಳು ಹಾಗೂ ರಾಡಾರ್ ಕೇಂದ್ರಗಳು
ಇಲ್ಲಿವೆ. ಇವೆಲ್ಲವೂ ರಕ್ಷಣಾ ಇಲಾಖೆಗೆ ಭಾನುವಾರ ಸಮರ್ಪಣೆಯಾಗಲಿವೆ. ಸಂಜೆ 5 ಗಂಟೆಗೆ ರಕ್ಷಣಾ ಸಚಿವರು ಬೆಂಗಳೂರಿನಿಂದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಮೂಲಕ ಇಲ್ಲಿನ ವೈಮಾನಿಕ ನೆಲೆಗೆ ಆಗಮಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.