ಯಕ್ಷ ದಶಾವತಾರಿ ಮುಡಿಯೇರಿದ ಕೇಂದ್ರ ಗೌರವ
Team Udayavani, May 28, 2017, 4:08 PM IST
ಬೆಳ್ತಂಗಡಿ: ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಲಿರುವ ಸೂರಿಕುಮೆರಿ ಕಿನಿಲ ಗೋವಿಂದ ಭಟ್ (78) ಅವರು ಧರ್ಮಸ್ಥಳ ಮೇಳದಲ್ಲಿ 50 ವರ್ಷ, ಕೂಡ್ಲು, ಮೂಲ್ಕಿ, ಸುರತ್ಕಲ್, ಕುಂಡಾವು ಮೇಳಗಳಲ್ಲಿ 16 ವರ್ಷದ ತಿರುಗಾಟ ನಡೆಸಿದ್ದು ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಹಿಮ್ಮೇಳ ಮುಮ್ಮೇಳದ ಪಠ್ಯಕ್ರಮವನ್ನು ನೆಡೆಯವರ ಜತೆಗೂಡಿ ರಚಿಸಿದವರು. ಬಡಗಿನಲ್ಲಿ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ, ತೆಂಕಿನಲ್ಲಿ ಕೋಳ್ಯೂರು ರಾಮಚಂದ್ರ ರಾವ್ ಅವರು ಈ ಪ್ರಶಸ್ತಿಗಳಿಂದ ಪುರಸ್ಕೃತರು.
ಸವ್ಯಸಾಚಿ: 1938ರಲ್ಲಿ ವಿಟ್ಲ ಸಮೀಪದ ಕಿನಿಲದಲ್ಲಿ ಶಂಕರನಾರಾಯಣ ಭಟ್ ಲಕ್ಷ್ಮೀ ಅಮ್ಮ ದಂಪತಿಯ ಮಗನಾಗಿ ಜನಿಸಿ, ತೆಂಕುತಿಟ್ಟಿನ ಸಾಂಪ್ರದಾಯಿಕ ಕಲಾವಿದ ಯಕ್ಷದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ಟರು ಸವ್ಯಸಾಚಿ ಕಲಾವಿದ. ಸ್ವಯಾರ್ಜಿತ ಪ್ರಬುದ್ಧ ಪ್ರತಿಭೆಯಿದ್ದರೂ ಎಂದಿಗೂ ದೇಹಿ ಎಂದು ಅವರು ಕಲೆಯನ್ನು ಅಡವಿಟ್ಟವರಲ್ಲ. ನಾಟ್ಯ ಗುರು, ದಶಾವತಾರಿ ಗೋವಿಂದ ಭಟ್ ಸರಿ ಸುಮಾರು 66 ವರುಷಗಳಿಂದ ಯಕ್ಷರಂಗದಲ್ಲಿ ವ್ಯವಸಾಯಿಯಾಗಿದ್ದು ತನ್ನ ಸಹಜ ಅಭಿನಯ, ಶಿಸ್ತುಬದ್ಧ ನಾಟ್ಯ ಮತ್ತು ಚುಟುಕಾದ ಸಮಯಪ್ರಜ್ಞೆಯಿಂದ ಕೂಡಿದ ಪಾಂಡಿತ್ಯಪೂರ್ಣ ವಾಕ್ ವೈಖರಿಯಿಂದ ತಮ್ಮದೇ ಆದ ಛಾಪನ್ನು ಒತ್ತಿ ಜನಮಾನಸದಲ್ಲಿ ಪ್ರೀತಿಯನ್ನು ಗಳಿಸಿದವರು.
ಸಂಸ್ಕೃತ ಹಾಗೂ ಹಳಗನ್ನಡದ ಅತ್ಯಂತ ಉತ್ಕೃಷ್ಟ ಶಬ್ದ ಸಾಹಿತ್ಯ ಅವರಲ್ಲಿದೆ. ಇಂದಿಗೂ ಅವರ ಧ್ವನಿಯ ಏರಿಳಿತ, ಶಬ್ದ ಸಂಪತ್ತನ್ನು ಅನುಕರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಭಾರತೀಯ ಅನ್ಯರಂಗಭೂಮಿಯ ನೃತ್ಯಪ್ರಕಾರಗಳಾದ ಕಥಕ್, ಭರತನೃತ್ಯ ಸಮ್ಮಿಳಿತ ಗೊಂಡ ಅವರ ನಾಟ್ಯವನ್ನು ಯಥಾವತ್ ಯಕ್ಷ ರಂಗಕ್ಕಿಳಿಸಿ ಆವರಣದ ವಿಸ್ತರಣೆ ಮಾಡಿದ ತೆಂಕು, ಬಡಗು, ಬಡಾಬಡಗು ತಿಟ್ಟುಗಳಲ್ಲಿ ಮಾನ್ಯತೆ ಪಡೆದವರು. ಯಾವುದೇ ಪಾತ್ರ ಮಾಡಿದರೂ ಶ್ರುತಿಬದ್ಧ ಅರ್ಥಗಾರಿಕೆಯ ಜತೆಗೆ ಅವರು ಬಳಸುವ ರೂಪಕಗಳು, ಪೌರಾಣಿಕ ಹಿನ್ನೆಲೆಯ ಪದಹಾರಗಳು ಅವರ್ಣನೀಯ.
ಅದ್ಭುತ ನಿರ್ವಹಣೆ: ನೋಡುಗರನ್ನು ಬೆರಗು ಗೊಳಿಸುವ ಬಾಹುಬಲಿ, ಸುಂದರ ರಾಯರ ಭರತ ಪ್ರಸಿದ್ಧ ಜೋಡಿ ಪಾತ್ರ
ಗಳು. ಬಾಹು ಬಲಿಯ ಅಧಟು ಬಾಹು ಬಲಿಯ ತ್ಯಾಗ ಒಂದೇಪಾತ್ರದ ಎರಡು ವಿಭಿನ್ನಸ್ವರೂಪದ ಬಾಹು ಬಲಿ ಪಾತ್ರ ನಿರ್ವಹಣೆಹಾಗಿ ಗೋವಿಂದ ಭಟ್ಟರಿಗೆ ಚಿನ್ನದ ಕಡಗ ತೊಡಿಸಿ ಸಮ್ಮಾನ ನಡೆದಿತ್ತು. ವಸ್ತ್ರಾಪಹಾರ ಮತ್ತು ಗದಾಯುದ್ಧದ ಕೌರವ ತೆಂಕುತಿಟ್ಟಿಗೆ ಭಟ್ಟರದ್ದೇ ಮಾದರಿ. ಕಲಾವಿದನ ಬದುಕಿನ ಜೀವನದ ನಡೆ ಸಾಮಾನ್ಯವಾಗಿ ಪಾತ್ರದಲ್ಲಿ ಅಭಿವ್ಯಕ್ತಿಯಾಗುತ್ತದೆ. ಆದರೆ ಬದುಕಿನಲ್ಲಿ ಶೃಂಗಾರವೇ ಇಲ್ಲದ ಭಟ್ಟರ ವಿಕಟವಿಟ ಮದಿರಾಕ್ಷ ಪಾತ್ರದ ಪ್ರಸ್ತುತಿ ಅದ್ಭುತ. ಕ್ಷತ್ರಿಯತ್ವದಿಂದ ಸಾಧನಾ ಪಥದೆಡೆಗೆ ಹೋಗುವ ಕೌಶಿಕ ಪಾತ್ರದ ನಿರ್ವಹಣೆ ದೇವುಡು ಕಾದಂಬರಿಯ ಕಲ್ಪನೆಯಂತಿದೆ. ಮಹಾಕಲಿ ಮಗಧೇಂದ್ರ ಮಗಧನ ಪಾತ್ರದಲ್ಲಿ ಗಂಭೀರ, ಮನಸ್ಸಿನ ತುಮುಲ, ಭರತಾಗಮನದ ರಾಮನ ನಿರಾಳಭಾವ, ಧರ್ಮೋಹಿ ಪರಮೋಲೋಕೇ ಎಂದಾಗ ಶಾಂತರಸಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.
ಅನನ್ಯ ಕಲಾವಿದ: ಅಂಗೋಪಾಂಗ ಸಮನ್ವಯ, ದೃಷ್ಟಿ ಚಲನೆ, ಆಳ್ತನ ಎಲ್ಲವೂ ಭಟ್ಟರದ್ದು ಮಾದರಿಯೇ. ಕುರಿಯ ವಿಠಲ ಶಾಸ್ತ್ರಿಗಳ ಮುಂದುವರಿದ ಭಾಗವಾಗಿ ತೆಂಕುತಿಟ್ಟಿಗೆ ನೃತ್ಯ, ರಂಗನಡೆ, ಅಂಗೋಪಾಂಗ ಸಮನ್ವಯತೆಯಲ್ಲಿ ಆವಿಷ್ಕಾರದ ಕೊಡುಗೆ ನೀಡಿದ ಭಟ್ಟರು ತೆಂಕು, ಬಡಗು, ಬಡಾಬಡಗು ತಿಟ್ಟಿನಲ್ಲಿ ಮನಃಕಷಾಯ ಇಲ್ಲದೆ ಸೀÌಕಾರಾರ್ಹ, ಮಾನ್ಯರಾದ ಕಲಾವಿದ. ಭಾರ
ತೀಯ ಅನ್ಯರಂಗಭೂಮಿಯ ಉತ್ತಮ ಅಂಶಗಳನ್ನು ಯಕ್ಷಗಾನಕ್ಕೆ ಅಳವಡಿಸಿದ್ದಾರೆ. ಹರಿದಾಸರೂ ಆಗಿರುವ ಭಟ್ಟರು ಪ್ರಸಂಗಕರ್ತರಾಗಿ ಮಣಿಮೇಖಲೆ ರತ್ನಕಂಕಣ,ಯಕ್ಷಪ್ರಶ್ನೆ ಪ್ರಸಂಗ, ನಚಿಕೇತ, ಸಾಮ್ರಾಟ್ ನಹುಷೇಂದ್ರ, ಮೂರೂವರೆ ವಜ್ರಗಳು ಪ್ರಸಂಗಗಳನ್ನು ರಚಿಸಿದ್ದಾರೆ. ಈಚೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಗೋವಿಂದ ಕಲಾಭಾವಾರ್ಪಣಂ ಕಾರ್ಯ ಕ್ರಮ ನಡೆದಿದ್ದು ಜೂನ್‌ನಲ್ಲಿ ಕುರಿಯ ಪ್ರತಿಷ್ಠಾನ ಸಹಯೋಗದಲ್ಲಿ ಪಾವಂಜೆಯಲ್ಲಿ ಗೋವಿಂದ ಕೇಂದ್ರಿತ ಸಪ್ತಾಹ ನಡೆಯಲಿದೆ.
ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಪರ್ಯಾಯಾವಧಿಯಲ್ಲಿ ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ಬೆಂಬಲದೊಂದಿಗೆ ಗೋವಿಂದ ವೈಭವ ಎಂಬ ಗೋವಿಂದ ಭಟ್ಟರ ಅಭಿನಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿವಾನಂದ ಹೆಗೆಡೆಯವರು ದೂರವಾಣಿ
ಮೂಲಕ ಪ್ರಶಸ್ತಿ ಕುರಿತು ಮಾಹಿತಿ ನೀಡಿದರು. ಪ್ರಶಸ್ತಿಗಳ ಬಗೆಗೆ ನಾನು ಮೊದಲಿನಿಂದಲೇ ಆಸಕ್ತನಲ್ಲ; ಕರ್ತವ್ಯನಿಷ್ಠೆ ಮಾತ್ರ. ಪ್ರಶಸ್ತಿ ಸಿಗದಿದ್ದರೂ ನನಗೇನೂ ಬೇಸರವಿಲ್ಲ. ಹಾಗಂತ ಸಿಕ್ಕಿದ್ದಕ್ಕೆ ಸಂತೋಷವಿದೆ.
– ಗೋವಿಂದ ಭಟ್ಟ
ಖ್ಯಾತಿಯ
ಪಾತ್ರಗಳು
ಭಟ್ಟರ ಪ್ರಸಿದ್ಧ ಪಾತ್ರಗಳ ಜತೆಗೆ ಅವರ ದೇವಿ, ಶ್ರೀರಾಮ , ಕೌಶಿಕ , ಭಸ್ಮಾಸುರ, ಹಿರಣ್ಯ ಕಶಿಪು, ಇಂದ್ರಜಿತು, ಶೂರ್ಪನಖಾ, ಭೀಷ್ಮ, ದುರ್ಯೋಧನ, ಬಾಹುಬಲಿ ಮೊದಲಾದ ಅನೇಕ ಪಾತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟಿವೆ ಎನ್ನುವುದಕ್ಕಿಂತ ನೋಡುಗನ ಜ್ಞಾನ ಭಂಡಾರಕ್ಕೆ ನೆರವಾಗಿದೆ.ಭಟ್ಟರ ಪ್ರಸಿದ್ಧ ಪಾತ್ರಗಳ ಜತೆಗೆ ಅವರ ದೇವಿ, ಶ್ರೀರಾಮ , ಕೌಶಿಕ , ಭಸ್ಮಾಸುರ, ಹಿರಣ್ಯ ಕಶಿಪು, ಇಂದ್ರಜಿತು, ಶೂರ್ಪನಖಾ, ಭೀಷ್ಮ, ದುರ್ಯೋಧನ, ಬಾಹುಬಲಿ ಮೊದಲಾದ ಅನೇಕ ಪಾತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟಿವೆ ಎನ್ನುವುದಕ್ಕಿಂತ ನೋಡುಗನ ಜ್ಞಾನ ಭಂಡಾರಕ್ಕೆ ನೆರವಾಗಿದೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.