ಬಣ್ಣ ಬಣ್ಣದ ಭರವಸೆಯಷ್ಟೇ ಕೇಂದ್ರದ ಸಾಧನೆ: ಸಚಿವ ರೈ
Team Udayavani, May 28, 2017, 4:16 PM IST
ಮಂಗಳೂರು: ಬಣ್ಣ ಬಣ್ಣದ ಭರವಸೆಗಳ ಬೆಲೂನುಗಳನ್ನು ಜನರ ಕೈಗಿಡುತ್ತಾ 3 ವರ್ಷಗಳನ್ನು ಕಳೆದಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಬರೇ ಭಾಷಣ ಮಾತ್ರ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಟೀಕಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮೋದಿ ಸರಕಾರದ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ ಸಚಿವ ರೈ, ಕಳೆದ 3 ವರ್ಷಗಳಲ್ಲಿ ಕೇಂದ್ರ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ಕಳಪೆ ಸಾಧನೆ ಮಾಡಿದೆ. ಹಿಂದಿನ ಯುಪಿಎ ಸರಕಾರದ ಸಾಧನೆಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿರುವುದೇ ಔದರ ಸಾಧನೆ. ಯುಪಿಎ ಸರಕಾರ ಜಿಎಸ್‌ಟಿ ಕಾಯ್ದೆ ರೂಪಿಸಿದಾಗ ಅದನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ಈಗ ನಾವೇ ಅದನ್ನು ಜಾರಿಗೊಳಿಸಿರುವುದಾಗಿ ಕೊಚ್ಚಿಕೊಳ್ಳು ತ್ತಿದೆ. ಆಧಾರ್ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಕಡ್ಡಾಯ ಮಾಡಿದೆ ಎಂದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಲಾಯಿತು. ಆದರೆ ಉದ್ಯೋಗ ಸೃಷ್ಟಿಯ ಬದಲು ಇದ್ದ ಉದ್ಯೋಗ ನಾಶವಾಗುತ್ತಿದೆ. 2015ರಲ್ಲಿ ಮೋದಿ ಅವ ರಿಗೆ ಕೇವಲ 1.35 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯ ವಾಗಿದೆ. ಆದರೆ 2011ರಲ್ಲಿ ಯುಪಿಎ ಸರಕಾರ 9.30 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತ್ತು. ಸಮೀಕ್ಷೆಯೊಂದರ ವರದಿ ಪ್ರಕಾರ ಮುಂದಿನ 3 ವರ್ಷಗಳಲ್ಲಿ 6 ಲಕ್ಷ ಉದ್ಯೋಗ ಕಡಿತವಾಗಲಿದೆ. ಕೇಂದ್ರ ಸರಕಾರ ರೈತರ ಹಿತವನ್ನು ಸಂಪೂರ್ಣ ಅವಗಣಿಸಿದೆ ಎಂದವರು ವಿವರಿಸಿದರು.
ಉತ್ಪಾದನ ವಲಯ ಕುಸಿತ: 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಸಂದರ್ಭ ಹಲವು ಘೋಷಣೆಗಳನ್ನು ಮಾಡಲಾಯಿತು. ರದ್ದಾಗಿ ಆರು ತಿಂಗಳು ಕಳೆದರೂ ಉತ್ಪಾದನ ವಲಯ ಇನ್ನೂ ಚೇತರಿಸಿಕೊಂಡಿಲ್ಲ. ಬದಲಾಗಿ ಇನ್ನಷ್ಟು ಕುಸಿತದತ್ತ ಸಾಗುತ್ತಿದೆ. ಕೈಗಾರಿಕಾ ಉತ್ಪಾದನ ಕೋಷ್ಠಕದ ಅಂಕಿ-ಅಂಶಗಳ ಪ್ರಕಾರ ಜನವರಿಯಲ್ಲಿ ಶೇ. 3 ಇದ್ದ ಸಾಂಪ್ರದಾಯಿಕ ಉತ್ಪಾದನ ವಲಯದ ವೃದ್ಧಿ ದರ, ಫೆಬ್ರವರಿಯಲ್ಲಿ ಶೇ. 1.4ಕ್ಕೆ ಇಳಿಯಿತು. ಮಾರ್ಚ್‌ನಲ್ಲಿ ಇದು ಶೇ. 1.2ಕ್ಕೆ ಇಳಿಕೆಯಾಗಿದೆ. ಕಾಶ್ಮೀರ ಸಮಸ್ಯೆಗೂ ನೋಟು ರದ್ದತಿಯಿಂದ ಪರಿಹಾರ ದೊರಕಲಿದೆ ಎಂದು ಹೇಳಿಕೊಳ್ಳಲಾಯಿತು. ಆದರೆ ಕಳೆದ ಎರಡು ದಶಕಗಳಲ್ಲಿ ಕಾಣದ ಪ್ರಕ್ಷುಬ್ಧ ಪರಿಸ್ಥಿತಿ ಕಾಶ್ಮೀರದಲ್ಲಿದೆ. ನೋಟು ರದ್ದತಿಯಿಂದ ನಕ್ಸಲಿಸಂ ನಾಶವಾಗಲಿದೆ ಎಂದು ಹೇಳಲಾಯಿತು. ಆದರೆ ಇತ್ತೀಚೆಗೆ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭೀಕರ ದಾಳಿಯಲ್ಲಿ 25 ಮಂದಿ ಸಾವಿಗೀಡಾದರು. ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಮೇಲೆ ಕೋಮುವಾದಿ ಶಕ್ತಿಗಳಿಂದ ನಿರಂತರ ದಾಳಿ, ಹಲ್ಲೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ದೇಶದ ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿ ಸುತ್ತಿದೆ. ಬರ ಪರಿಹಾರ, ಮಹಾದಾಯಿ ನದಿ ನೀರು ಹಂಚಿಕೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಕರ್ನಾಟಕವನ್ನು ಅವಗಣಿಸಿದೆ. ದಲಿತ, ಕಾರ್ಮಿಕ ಸಮುದಾಯವನ್ನು ನಿರ್ಲಕ್ಷಿಸಿರುವ ಕೇಂದ್ರ ಸರಕಾರ, ಮಹಿಳಾ ಮೀಸಲಾತಿ ಮಸೂದೆ ಕುರಿತಂತೆಯೂ ನಿರಾಸಕ್ತಿ ವಹಿಸಿದೆ ಎಂದು ಸಚಿವ ರೈ ಹೇಳಿದರು.
ಶಾಸಕ ಜೆ.ಆರ್. ಲೋಬೋ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಹರಿನಾಥ್, ಸದಾಶಿವ ಉಳ್ಳಾಲ, ಸೇವಾದಳದ ಅಶ್ರಫ್, ಟಿ.ಕೆ. ಸುಧೀರ್, ನಜೀರ್ ಬಜಾಲ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ನೆರೆ ದೇಶಗಳು ದೂರ
ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಮೋದಿ ಕೇವಲ ವಿದೇಶಗಳಲ್ಲಿ ತನ್ನ ವರ್ಚಸ್ಸು ಹೆಚ್ಚಿಸುವುದರಲ್ಲೇ ಗಮನ ಹರಿಸಿದ್ದಾರೆ. ಸಾರ್ಕ್ ರಾಷ್ಟ್ರಗಳ ಜತೆಗಿನ ಸ್ನೇಹ ವೃದ್ಧಿಸುವಲ್ಲಿ ವಿಫಲವಾಗಿದೆ. ಇದರಿಂದ ನೇಪಾಲ ಕೂಡ ಇಂದು ಚೀನದತ್ತ ಮುಖ ಮಾಡಿದೆ. ಮೋದಿ ಅವರ ಅಮೆರಿಕವನ್ನು ಓಲೈಸುವ ನೀತಿಯಿಂದ ರಷ್ಯಾ ಭಾರತದಿಂದ ದೂರವಾಗುತ್ತಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ರಷ್ಯಾ ಪಾಕಿಸ್ಥಾನದ ಜತೆ ಜಂಟಿ ಸಮರಾಭ್ಯಾಸ ನಡೆಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.