ಗರುಡ ಜೊತೆ ಐಂದ್ರಿತಾ
Team Udayavani, May 29, 2017, 12:03 PM IST
ಇತ್ತೀಚೆಗಷ್ಟೇ “ಗರುಡ’ ಎಂಬ ಹೊಸ ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಚಿತ್ರ ಮುಹೂರ್ತ ಕೂಡ ಕಂಡಿತ್ತು. ಈಗ ಹೊಸ ಸುದ್ದಿ ಎಂದರೆ, ಆ ಚಿತ್ರದಿಂದ ನಟಿ ದೀಪಾ ಸನ್ನಿಧಿ ಔಟ್ ಆಗಿದ್ದಾರೆ. ಆ ಜಾಗಕ್ಕೆ ಐಂದ್ರಿತಾ ರೇ ಎಂಟ್ರಿಯಾಗಿದ್ದಾರೆ!
ಹೌದು, ಸಿದ್ಧಾರ್ಥ್ ಮಹೇಶ್ ನಾಯಕರಾಗಿದ್ದ “ಗರುಡ’ ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿ ಅಂತಾನೇ ಜೋರಾಗಿ ಸುದ್ದಿಯಾಗಿತ್ತು. ಮುಹೂರ್ತ ನಡೆಯುವವರೆಗೂ ದೀಪಾ ಸನ್ನಿಧಿ ನಾಯಕಿಯಾಗಿದ್ದರು. ಆದರೆ, ಅದೇನಾಯೊ¤à, ಏನೋ, ದೀಪಾ ಸನ್ನಿಧಿ ಆ ಚಿತ್ರದಿಂದ ಹೊರ ನಡೆದಿದ್ದಾರೆ.
ಹೊರ ಹೋಗಲು ಏನು ಕಾರಣ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಡೇಟ್ ಸಮಸ್ಯೆಯಿಂದಾಗಿಯೇ “ಗರುಡ’ ಸಿನಿಮಾದಲ್ಲಿ ನಟಿಸಲು ಆಗುತ್ತಿಲ್ಲ ಎಂಬ ಕಾರಣ ಕೊಡಲಾಗುತ್ತಿದೆಯಂತೆ. ಅದೇನೆ ಇರಲಿ, ಒಂದು ಚಿತ್ರಕ್ಕೆ ಆಯ್ಕೆಯಾಗಿ, ಮುಹೂರ್ತ ಆಗುವವರೆಗೂ ಡೇಟ್ ಸಮಸ್ಯೆ ಕಂಡಿರಲಿಲ್ಲ.
ಈಗ ಡೇಟ್ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣದಿಂದ ದೀಪಾ ಸನ್ನಿಧಿ ಹೊರಹೋಗಿದ್ದಾರೆನ್ನಲಾಗಿದೆ. ದೀಪಾ ಹೊರನಡೆದ ಮೇಲೆ, ಆ ಜಾಗಕ್ಕೆ ಯಾರು ಸೂಕ್ತ ಅಂತ ಚಿತ್ರತಂಡ ತಲೆಕೆಡಿಸಿಕೊಂಡಾಗ, ಅವರ ಎದುರಿಗೆ ಬಂದದ್ದೇ ಐಂದ್ರಿತಾ ರೇ. ಈಗ ಅವರೇ ನಾಯಕಿಯಾಗಿದ್ದಾರೆ.
ಇನ್ನು, ಈ ಚಿತ್ರದಲ್ಲಿ ಆಶಿಕಾ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಸಾದ್ ರೆಡ್ಡಿ ನಿರ್ಮಾಪಕರು. ನಿರ್ದೇಶಕ ಧನಕುಮಾರ್‌ಗೆ ಇದು ಚೊಚ್ಚಲ ಸಿನಿಮಾ. ಅಂದಹಾಗೆ, “ಗರುಡ’ ಎಂದರೇನು ಎಂಬ ಪ್ರಶ್ನೆ ಮೂಡುವುದು ಸಹಜ. ಕಥೆಗೂ ಶೀರ್ಷಿಕೆಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
“ಇದೊಂದು ಫ್ಯಾಮಿಲಿ ಡ್ರಾಮಾ. ಆರಾಮವಾಗಿ ಓಡಾಡಿಕೊಂಡಿರುವ ಹುಡುಗನೊಬ್ಬನ ಫ್ಯಾಮಿಲಿಗೆ ಏನಾದರೂ ತೊಂದರೆಯಾದರೆ ಆತ ಯಾವ ರೀತಿ ರೆಬೆಲ್ ಆಗುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗಲಿದೆಯಂತೆ. ಇಲ್ಲಿ ನಾಯಕನ ಆ್ಯಟಿಟ್ಯೂಡ್‌ಗೂ ಗರುಡದ ವರ್ತನೆಗೂ ಸಾಮ್ಯತೆ ಇದೆಯಂತೆ.
ಹಾಗಾಗಿ, “ಗರುಡ’ ಎಂಬ ಟೈಟಲ್ ಇಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಆದಿ ಲೋಕೇಶ್, ರಂಗಾಯಣ ರಘು, ಮುಖ್ಯಮಂತ್ರಿ ಚಂದ್ರು, ಆನಂದ್, ಸುಜಯ್, ಭರತ್ ಸಿಂಗ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ರಘು ದೀಕ್ಷಿತ್ ಸಂಗೀತವಿದೆ. ಜೈ ಆನಂದ್ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.