ಉ.ಪ್ರದೇಶದ ಬೀದಿಯಲ್ಲೇ ನಡೀತು ಲೈಂಗಿಕ ದೌರ್ಜನ್ಯ
Team Udayavani, May 29, 2017, 12:28 PM IST
ಲಕ್ನೋ: ಉತ್ತರಪ್ರದೇಶದಲ್ಲಿ 14 ಜನರ ಗುಂಪು ಇಬ್ಬರು ಯುವತಿಯರನ್ನು ಬೀದಿಯಲ್ಲಿ ತಳ್ಳಾಡಿ, ಮನಬಂದಂತೆ ಎಳೆದಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅದನ್ನು ಮೊಬೈಲ್ ಕೆಮರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ನಡೆದಿದೆ. ರೋಮಿಯೋ ನಿಗ್ರಹ ಪಡೆ ಕಾರ್ಯಾಚರಿಸುತ್ತಿರುವ ನಡುವೆಯೇ ಮಹಿಳೆಯರ ಮೇಲೆ ದಬ್ಟಾಳಿಕೆ, ದೌರ್ಜನ್ಯ ಮುಂದುವರಿದಿರುವುದು ಅಚ್ಚರಿಗೆ ಕಾರಣವಾಗಿದೆ. ರಾಂಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ವರದಿಯಾಗಿದೆ. ‘ದಯವಿಟ್ಟು ನಮಗೇನೂ ಮಾಡಬೇಡಿ’ ಎಂದು ಬೇಡಿಕೊಂಡರೂ ಕೇಳದ ಪುಂಡರ ಗುಂಪು ಕೀಚಕರಂತೆ ವರ್ತಿಸಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಲೂಸ್ಟಾಕ್: ಈ ಬಗ್ಗೆ ಮಾತನಾಡಿದ ಎಸ್ಪಿ ನಾಯಕ ಅಜಂ ಖಾನ್, ಮಹಿಳೆಯರು ಅಂಥ ಕೆಟ್ಟ ಕೆಲಸ ನಡೆಯುವಲ್ಲಿಗೆ ಹೋಗಲೇಬಾರದು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಯೋಗಿ ಸರಕಾರ ಬಂದ ಬಳಿಕ ಇಂಥ ಘಟನೆಗಳು ಹೆಚ್ಚಾಗಿವೆ. ಪುರುಷರು ತಮ್ಮ ಮಹಿಳೆಯರನ್ನು ಮನೆಯೊಳಗೇ ಇರುವಂತೆ ನೋಡಿಕೊಳ್ಳಬೇಕಾದ ಸ್ಥಿತಿಯಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.