ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ
Team Udayavani, May 29, 2017, 1:30 PM IST
ಹುಬ್ಬಳ್ಳಿ: ಸಮಾಜದ ಅಭಿವೃದ್ಧಿಗೆ ಸದಾ ಮುಂದಾಗುವ ಮೂಲಕ ಸಮಾಜವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಬಾಲೆಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ರವಿವಾರ ಬಣಗಾರ ಹಿತೋದ್ಧಾರಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಬಣಗಾರ ಬಂಧುಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಬಂದರೆ ನಮ್ಮೊಂದಿಗೆ, ಬಾರದಿದ್ದರೆ ನಿಮ್ಮನ್ನು ಬಿಟ್ಟು, ನಾವು ಮಾಡುವ ಕೆಲಸಕ್ಕೆ ಅಡ್ಡಿ ಪಡಿಸಿದರೇ ನಿಮ್ಮನ್ನೆ ಮೆಟ್ಟಿ ಮುಂದುವರಿಯುತ್ತೇವೆ ಎನ್ನುವ ಮಾತಗಳನ್ನು ಮನದಲ್ಲಿಟ್ಟುಕೊಂಡು ಎಲ್ಲರು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಸಮಾಜ ಬಾಂಧವರಲ್ಲಿ ಹೊಟ್ಟೆ ಹಸಿವಿಗಿಂತ ಸಮಾಜದ ಅಭಿವೃದ್ಧಿ, ಸಮಾಜದ ಉನ್ನತಿ ಸಮಾಜದ ಶ್ರೇಯೋಭಿವೃದ್ಧಿಯ ಹಸಿವು ಹೆಚ್ಚಾಗಿರಬೇಕು. ಅಂದಾಗ ಮಾತ್ರ ಸಮಾಜದ ಬೆಳವಣಿಗೆ ಆಗುತ್ತದೆ. ಇದನ್ನು ಮನದಲ್ಲಿಟ್ಟುಕೊಂಡು ಮುನ್ನೆಡದರೆ ಎಲ್ಲವೂ ಕ್ಷೇಮವಾಗಿರುತ್ತದೆ.
ಇಂತಹ ಸಮಾವೇಶ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಿ ಎಂದರು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಬಣಗಾರ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆಯಬೇಕು. ಸಮಾಜದ ಬೆಳವಣಿಗೆಗೆ ನಮ್ಮ ಯುವ ಪೀಳಿಗೆ ಸೇರಿದಂತೆ ಎಲ್ಲರೂ ಮುಂದಾಗಬೇಕು.
ಸಮಾಜದಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಎಲ್ಲರು ಮುಂದಾಗಬೇಕು. ಈ ಸಮಾವೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದರು. ಸಮ್ಮೇಳನಾಧ್ಯಕ್ಷ ಪ್ರೊ| ಬಿ.ಸಿ. ಗೌಡರ ಮಾತನಾಡಿ, ಬಣಗಾರ ಸಮಾಜದವರು ಎಲ್ಲೆಡೆ ಇದ್ದು ಸುಮಾರು 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಹೊಂದಿದೆ.
ವಿವಿಧ ಪ್ರದೇಶಗಳಲ್ಲಿ ಬೇರೆ-ಬೇರೆ ನಾಮಾಂಕಿತದಿಂದ ಕರೆಯಿಸಿಕೊಳ್ಳುವ ಬಣಗಾರರು ಶಿಂಪಿ, ನಾಗಲಿಮಕ ಶಿಂಪಿ, ದರ್ಜಿ, ರಂಗಾರಿ, ಬಣಗಾರ, ಚಿಪ್ಪಿಗಾ ಜವಳಿ ಸೇರಿದಂತೆ ಇನ್ನು ಹಲವಾರು ಹೆಸರುಗಳಿಂದ ಬಣಗಾರರನ್ನು ಗುರುತಿಸಲಾಗುತ್ತದೆ. ನಮ್ಮ ಮುಖ್ಯ ಉದ್ಯೋಗ ನೂಲುವುದು. ನೂಲಿಗೆ ಬಣ್ಣ ಹಾಕುವುದು, ನೇಯ್ಯುವುದು, ಹೊಲೆಯುವುದು ಕಸಬು ಆಗಿದೆ.
ಅದರಂತೆ ಸಮಾಜದವರು ಇಂದಿಗೂ ಕುಲಕಸಬು ಮಾಡುತ್ತಿದ್ದಾರೆ ಎಂದರು. ನಿವೃತ್ತ ನ್ಯಾಯಾಧೀಶ ಮಲ್ಲಿಕಾರ್ಜುನ ಗದಗ, ಗುರುಸಿದ್ದಪ್ಪ ಗಾಡದ ಇನ್ನಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿವಕುಮಾರ ಕೊಡೇಕಲ್ಲ, ಮಹಾದೇವಪ್ಪ ಈಚಗೇರಿ, ಶಂಭುಲಿಂಗಪ್ಪ ಟೊಪಗಿ, ವಿರೂಪಾಕ್ಷ ಅರಳಿಮರದ, ಮಹಾಬಳೇಶ ಮುದುಗಲ್ಲ, ಶ್ರೀಶೈಲ ಜೋಡಳ್ಳಿ, ಈರಣ್ಣಾ ಕುರ್ಲಿ, ವಿರೂಪಾಕ್ಷ ಕಿನ್ನಾಳ, ನಟರಾಜ ಕುರ್ಲಿ ಇದ್ದರು. ಶಿವಪ್ಪ ಚೆನ್ನಿಮಾಸ್ತರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದಕ್ಕೂ ಪೂರ್ವದಲ್ಲಿ ಹೊಸೂರ ಮಾರುತಿ ದೇವಸ್ಥಾನದಿಂದ ಸಮ್ಮೇಳನ್ನಾಧ್ಯಕ್ಷ ಪ್ರೊ| ಬಿ.ಸಿ. ಗೌಡರ ಅವರನ್ನು ಮೆರವಣಿಯೊಂದಿಗೆ ಕರೆ ತರಲಾಯಿತು. ಸಂಜೀವ ಅಣ್ಣಿಗೇರಿ ಸ್ವಾಗತಿಸಿದರು. ಮೂರುಸಾವಿರಪ್ಪ ಚೆನ್ನಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್
Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Kaup: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಭೆ
Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು
Mangaluru: ಡಿ.28; ಮಂಗಳೂರು ಕಂಬಳ; ಪೂರ್ವಭಾವಿ ಸಭೆ
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.