ಶೇ.99.4 ಅಂಕ ಪಡೆದ ಅಶ್ವಿನ್ ಮೊದಲ ಸ್ಥಾನ
Team Udayavani, May 30, 2017, 11:29 AM IST
ಬೆಂಗಳೂರು: ಐಸಿಎಸ್‌ಇ-10ನೇ ತರಗತಿ ಹಾಗೂ ಐಎಸ್‌ಸಿ-12ನೇ ತರಗತಿಯ ಕರ್ನಾಟಕದ ಫಲಿತಾಂಶದಲ್ಲಿ ಹೆಣ್ಣು
ಮಕ್ಕಳೇ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಬೆಂಗಳೂರು ನಗರದ ಶಾಲೆಯ ವಿದ್ಯಾರ್ಥಿಗಳು ಈ ಎರಡೂ ವಿಭಾಗದಲ್ಲೂ
ಮೊದಲ ಮೂರು ಟಾಪರ್ ಆಗಿದ್ದಾರೆ. ಜೆಪಿ ನಗರದ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆ ಅಶ್ವಿನ್ ರಾವ್ ಶೇ.99.4 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದ 289
ಐಸಿಎಸ್‌ಇ ಶಾಲೆಯಿಂದ 15,370 ವಿದ್ಯಾರ್ಥಿಗಳು ಹಾಗೂ 28 ಐಎಸ್‌ಸಿ ಶಾಲೆಯಿಂದ 1,356 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಐಸಿಎಸ್‌ಇಯಲ್ಲಿ ಶೇ.99.80ರಷ್ಟು ಹಾಗೂ ಐಎಸ್‌ಸಿಯಲ್ಲಿ ಶೇ.99.04ರಷ್ಟು ಫಲಿತಾಂಶ ಬಂದಿದೆ.
ಐಸಿಎಸ್‌ಇ ಪರೀಕ್ಷೆ ಬರೆದವರಲ್ಲಿ 7,790 ಹುಡುಗರು ಹಾಗೂ 7,580 ಹುಡುಗಿಯರು ಸೇರಿದ್ದು, ಬಾಲಕರು ಶೇ.99.71ರಷ್ಟು ಫಲಿತಾಂಶ ಪಡೆದರೆ, ಬಾಲಕಿರು ಫಲಿತಾಂಶ ಶೇ.99.92ರಷ್ಟಿದೆ. ಹಾಗೆಯೇ ಐಎಸ್‌ಸಿ ಪರೀಕ್ಷೆ
ಬರೆದವರಲ್ಲಿ 667 ಹುಡುಗರು ಮತ್ತು 689 ಹುಡುಗಿಯರು ಸೇರಿದ್ದು, ಫಲಿತಾಂಶ ಕ್ರಮವಾಗಿ ಶೇ.98.35ರಷ್ಟು ಹಾಗೂ
ಶೇ.99.71ರಷ್ಟಿದೆ. ಐಸಿಎಸ್‌ಇ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 25 ಹುಡುಗರು ಹಾಗೂ 6 ಹುಡುಗಿಯರು ಅನುತ್ತೀರ್ಣರಾಗಿದ್ದಾರೆ. ಹಾಗೆಯೇ ಐಎಸ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ 11 ಬಾಲಕರು ಹಾಗೂ 2 ಬಾಲಕಿಯರು ಫೇಲ್ ಆಗಿದ್ದಾರೆ.
ಬಾಲಕಿಯರದ್ದೇ ಮೇಲುಗೈ
ನವದೆಹಲಿ: ಐಎಸ್‌ಸಿ ಹಾಗೂ ಐಸಿಎಸ್‌ಇ ಪಠ್ಯಕ್ರಮದ ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 12ನೇ ತರಗತಿಯಲ್ಲಿ ಸರಾಸರಿ ಶೇಕಡಾ 96.47ರಷ್ಟು, 10ನೇ ತರಗತಿಯಲ್ಲಿ ಶೇಕಡಾ 98.53ರಷ್ಟು
ಒಟ್ಟಾರೆ ಫಲಿತಾಂಶ ಲಭಿಸಿದೆ. 10ನೇ ತರಗತಿಯಲ್ಲಿ ಬೆಂಗಳೂರಿನ ಅಶ್ವಿನ್ ರಾವ್ ಮತ್ತು ಪುಣೆಯ ಮಸ್ಕಾನ್ ಸಬ್ದುಲ್ಲಾ ಪಠಾಣ್ ಜಂಟಿಯಾಗಿ ಶೇ. 99.4 ಅಂಕಗಳಿಸುವುದರೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ. 12ನೇ ತರಗತಿಯಲ್ಲಿ ಕೋಲ್ಕತಾದ ಗಿರ್ಲ ಅನನ್ಯಾ ಮೈತಿ ಶೇ. 99.5 ಅಂಕಗಳಿಸಿ ಟಾಪರ್ ಎನಿಸಿಕೊಂಡಿದ್ದಾರೆ. ಕಳೆದ
ವರ್ಷದ ಫಲಿತಾಂಶಕ್ಕೆ ಹೋಲಿಸಿಕೊಂಡರೆ, ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಫಲಿತಾಶದಲ್ಲಿ ಸಣ್ಣ ಪ್ರಮಾಣದ ಸುಧಾರಣೆ ಕಾಣಬಹುದಾಗಿದೆ ಎಂದು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿμಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ)ನ ಸಿಇಒ ಗೆರ್ರಿ ಆಥೂìನ್ ತಿಳಿಸಿದ್ದಾರೆ.
ಇಂದು ಸಿಇಟಿ ಫಲಿತಾಂಶ
ಎಂಜಿನಿಯರಿಂಗ್ ಕೋರ್ಸ್‌ನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಮೇ 30ರ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಪ್ರಕಟವಾಗಲಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿ ಸಿಇಟಿ ಫಲಿತಾಂಶ ಘೋಷಣೆ ಮಾಡಲಿದ್ದಾರೆ.
ವಿದ್ಯಾರ್ಥಿಗಳು ಫಲಿತಾಂಶವನ್ನು http://kea. kar.nic.in ಅಥವಾ http://cet.kar.nic.in ಅಥವಾ http://karresults.nic.in ಮೂಲಕ ಪಡೆಯಬಹುದು.
ಶೇ.98ರಷ್ಟು ಫಲಿತಾಂಶ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ. ರಾಷ್ಟ್ರಮಟ್ಟದಲ್ಲೇ ಮೊದಲ ಸ್ಥಾನ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಪಾಲಕರು ಹಾಗೂ ಶಾಲಾ ಶಿಕ್ಷಕರ ಪ್ರೋತ್ಸಾಹ ಚೆನ್ನಾಗಿತ್ತು. ಯಾವುದೇ ಟ್ಯೂಷನ್‌ಗೂ
ಹೋಗುತ್ತಿರಲಿಲ್ಲ. ಶಾಲೆಯಲ್ಲಿ ಮಾಡಿದ ಪಾಠವೇ ಸಾಕಾಗುತ್ತಿತ್ತು. ನನಗೆ ಯಾವುದು ಇಷ್ಟವೋ ಅದನ್ನು ಹೆಚ್ಚು
ಓದುತ್ತಿದ್ದೆ. ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ.
– ಅಶ್ವಿನ್ ರಾವ್, ಐಸಿಎಸ್‌ಇ ಟಾಪರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.