ಭ್ರಷ್ಟಾಚಾರ ರಹಿತ ಮೋದಿ ಸರ್ಕಾರ
Team Udayavani, May 30, 2017, 1:00 PM IST
ಮೈಸೂರು: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರ ಹಗರಣ ಮುಕ್ತ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಿ, ಹಲವು ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಕೃಷ್ಣಪಾಲ್ ಗುಜಾìರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಜಿಟಲ್ ಇಂಡಿಯಾ, ಸ್ಕಿಲ್‌ಇಂಡಿಯಾ ಮಾತ್ರವಲ್ಲ, ಸ್ಕ್ಯಾಮ್ ಫ್ರೀ ಇಂಡಿಯಾ ಕೂಡ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಗಳಲ್ಲಿ ಒಂದು, ಈ ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣ, ಭ್ರಷ್ಟಾಚಾರ ನಡೆದಿಲ್ಲ. ಆ ಮೂಲಕ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಿದ ಹಿರಿಮೆ ಮೋದಿ ಅವರದು ಎಂದರು.
ಪ.ಜಾತಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಜನಧನ್ ಯೋಜನೆಯಡಿ ಸ್ವಾತಂತ್ರ್ಯ ನಂತರದ ಈ 70 ವರ್ಷಗಳಲ್ಲಿ ಬ್ಯಾಂಕ್ ಖಾತೆಯನ್ನೇ ತೆರೆಯದ ಸುಮಾರು 5 ರಿಂದ 6 ಕೋಟಿ ಬಡ ಜನರಿಗೆ ಜನ್‌ಧನ್ ಖಾತೆ ತೆರೆಸಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸೂರಿಲ್ಲದವರಿಗೆ ಸೂರು ಕಲ್ಪಿಸಿದ್ದು,
ದೇಶಾದ್ಯಂತ 2 ಕೋಟಿ ಶೌಚಾಲಯ ನಿರ್ಮಾಣ, ಗರ್ಭೀಣಿಯರಿಗೆ 6 ಸಾವಿರ ರೂ. ಪ್ರೋತ್ಸಾಹ ಧನ ನೀಡಿಕೆ, ಹೆರಿಗೆ ರಜೆ ಅವಧಿ ಹೆಚ್ಚಳ ಹೀಗೆ ಸಣ್ಣ ಸಣ್ಣ ಕೆಲಸಗಳ ಮೂಲಕ ಕೇಂದ್ರಸರ್ಕಾರ ಸಾಧನೆಗಳನ್ನು ಮಾಡಿದೆ ಎಂದು ಪಟ್ಟಿ ಮಾಡಿದರು. ಒಂದು ದೇಶ-ಒಂದು ತೆರಿಗೆ ಕಾರ್ಯಕ್ರಮದಡಿ ಜಿಎಸ್‌ಟಿ ಜಾರಿಯಿಂದ ವ್ಯವಹಾರದಲ್ಲಿ ಪಾರದರ್ಶಕತೆ ಬರುವುದಲ್ಲದೆ, ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದು ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನೋಟು ಅಮಾನ್ಯಿàಕರಣ, ಪ್ರಧಾನಮಂತ್ರಿ ವಿಮೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ, ಒನ್ ರ್‍ಯಾಂಕ್ ಒನ್ ಪೆನÒನ್, ಅಟಲ್ ಪಿಂಚಿಣಿ ಯೋಜನೆ, ಸ್ಟಾರ್ಟ್ ಅಫ್ ಇಂಡಿಯಾ, ಬೇಟಿ ಬಚಾವೋ- ಬೇಟಿ ಪಡಾವೋ, ಸಾಮಾನ್ಯ ಆಯವ್ಯಯದ ಜತೆಗೆ ರೈಲ್ವೆ ಯೋಜನೆಗಳ ವಿಲೀನದಂತಹ ಕಾರ್ಯ ಕ್ರಮಗಳು ಸಣ್ಣದಾಗಿ ಕಂಡರೂ ಅವುಗಳ ಪರಿಣಾಮ ಬಹಳ ಇದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೆ, ನೇರವಾಗಿ ಫಲಾನುಭವಿಯ ಖಾತೆಗೆ ಸರ್ಕಾರದ ಹಣ ಜಮೆಯಾಗಲಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಬದಲಾಗುತ್ತಿದ್ದು, ಕೇಂದ್ರಸರ್ಕಾರದ ಮೂರು ವರ್ಷಗಳ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು 15 ದಿನಗಳ ಕಾಲ ಬಿಜೆಪಿ ಮಹಾ ಅಭಿಯಾನ ಕೈಗೊಂಡಿದ್ದು, ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನಗರ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ಪ್ರೀತಂ, ಎಚ್.ವಿ.ರಾಜೀವ್, ಎಲ್.ನಾಗೇಂದ್ರ, ಫಣೀಶ್, ಪ್ರಭಾಕರ ಶಿಂಧೆ ಉಪಸ್ಥಿತರಿದ್ದರು.
ಜಾನುವಾರುಗಳ ಮಾರಾಟ- ಖರೀದಿ ಸಂಬಂಧ ರೂಪಿಸಲಾಗಿರುವ ಹೊಸ ನಿಯಮಾವಳಿಯಿಂದ ಯಾವುದೇ ವಿವಾದ ವಿಲ್ಲ. ಬಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ತಾವು ಸಾರ್ವಜನಿಕವಾಗಿ ಮಾತನಾಡುವುದಿಲ್ಲ.
-ಕೃಷ್ಣಪಾಲ್ ಗುಜಾರ್, ಕೇಂದ್ರ ಸಚಿವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.