ಬಾಂಗ್ಲಾ: ಮೋರಾ ಚಂಡಮಾರುತಕ್ಕೆ ಆರು ಬಲಿ; 3 ಲಕ್ಷ ಜನರ ಸ್ಥಳಾಂತರ
Team Udayavani, May 30, 2017, 3:35 PM IST
ಢಾಕಾ: ಗಂಟೆಗೆ 150 ಕಿ.ಮೀ. ವೇಗದಲ್ಲಿ ಮುನ್ನುಗ್ಗಿ ಬಂದ ಮೋರಾ ಚಂಡಮಾರುತ ಇಂದು ಬಾಂಗ್ಲಾದೇಶದ ಮೇಲೆ ಅಪ್ಪಳಿಸಿತು. ವಿನಾಶಕಾರಿಯಾಗಿರುವ ಮೋರಾ ಚಂಡಮಾರುತದ ಮಾರಕ ಹೊಡೆತಕ್ಕೆ ನೂರಾರು ಮನೆಗಳು ಹಾನಿಗೀಡಾಗಿವೆ; ಕರಾವಳಿ ಪ್ರದೇಶಗಳ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ತನಕ ಆರು ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.
ಬಾಂಗ್ಲಾದೇಶದ ಹವಾಮಾನ ಇಲಾಖೆಯ ವಿಶೇಷ ಬುಲೆಟಿನ್ ಪ್ರಕಾರ ಮೋರಾ ಚಂಡಮಾರುತ ಉತ್ತರ ಕೊಲ್ಲಿಯ ಉತ್ತರಕ್ಕೆ ಸಾಗುತ್ತಿದ್ದು ಅದು ಚಿತ್ತಗಾಂಗ್ – ಕೋಕ್ಸ್ ಬಜಾರ್ ಕರಾವಳಿಯನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಟಿದೆ. ಇಲ್ಲಿಂದ ಅದು ಉತ್ತರಾಭಿಮುಖವಾಗಿ ಸಾಗುತ್ತಿದೆ ಎಂದು ಬುಲೆಟಿನ್ ತಿಳಿಸಿದೆ.
ಪ್ರಬಲವಾದ ಗಾಳಿಯೊಂದಿಗೆ ಮೋರಾ ಚಂಡಮಾರುತವು ಉತ್ತರ ಕೊಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಬಾಂಗ್ಲಾದೇಶದ ಸಾಗರ ಬಂದರುಗಳ ಉದ್ದಕ್ಕೂ ಜಡಿ ಮಳೆಯನ್ನು ಉಂಟು ಮಾಡಲಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಗಾಳಿಯ ವೇಗವು ಗಂಟೆಗೆ 130ರಿಂದ 150 ಕಿ.ಮೀ. ವೇಗದಲ್ಲಿದ್ದು ವ್ಯಾಪಕ ಹಾನಿ ಉಂಟುಮಾಡುವಷ್ಟು ಅದು ಪ್ರಬಲವಾಗಿರುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಚಿತ್ತಗಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಾಕ್ಸ್ ಬಜಾರ್ ವಿಮಾನ ನಿಲ್ದಾಣಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.