ಏಶ್ಯ ತಂಡಗಳಿಗೆ ಕಠಿನ ಸವಾಲು: ದಿಲ್ಶನ್
Team Udayavani, May 31, 2017, 10:54 AM IST
ಕೊಲಂಬೊ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಯಲ್ಲಿ ಏಶ್ಯದ ತಂಡಗಳು ಬೆಚ್ಚಿಬೀಳಿಸುವ ಆಟವಾಡಬೇಕು, ಆಗಷ್ಟೇ ಪ್ರಶಸ್ತಿ ಮೇಲೆ ಕಣ್ಣಿಡ ಬಹುದು ಎಂದಿದ್ದಾರೆ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ತಿಲಕರತ್ನ ದಿಲ್ಶನ್.
“ಈ ಪಂದ್ಯಾವಳಿ ಇಂಗ್ಲೆಂಡಿನಲ್ಲಿ ನಡೆ ಯುವುದರಿಂದ ಏಶ್ಯದ ಹೊರಗಿನ ತಂಡ ಗಳು ಸಹಜವಾಗಿಯೇ ಉತ್ತಮ ಪ್ರದರ್ಶನ ನೀಡಲಿವೆ. ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ತಂಡಗಳಿಗೆ ಇದು ಹೇಳಿ ಮಾಡಿಸಿದ ವಾತಾವರಣ. ಏಶ್ಯದ ತಂಡಗಳಿಗಿಂತ ಮಿಗಿಲಾಗಿ ಇವು ಪರಿಸ್ಥಿತಿಯ ಲಾಭವೆತ್ತ ಬಲ್ಲವು. ಹೀಗಾಗಿ ಭಾರತೀಯ ಉಪಖಂಡದ 4 ತಂಡಗಳು ಸಾಮರ್ಥ್ಯ ಕ್ಕೂ ಮೀರಿದ ಬೆಚಿÌಬೀಳಿಸುವ ಆಟವಾಡ ಬೇಕಾದ ಅಗತ್ಯವಿದೆ…’ ಎಂದು ದಿಲ್ಶನ್ ಅಭಿಪ್ರಾಯಪಟ್ಟರು.
“ಶ್ರೀಲಂಕಾ ವಿಷಯದಲ್ಲಿ ಹೇಳುವುದಾದರೆ ಇದೊಂದು ಯುವ ಪಡೆ. ಹೆಚ್ಚಿನ ಅನುಭವವಿಲ್ಲ. ಆದರೆ ಪ್ರತಿಭಾನ್ವಿತರ ತಂಡ. ಏಶ್ಯದ ಹೊರಗೆ, ಅದರಲ್ಲೂ ಇಂಗ್ಲೆಂಡಿನಲ್ಲಿ ಆಡುವುದು ಭಾರೀ ಸವಾಲು…’ ಎಂಬುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.