ತಾರಕಾಸುರನಿಗೆ ವಿದೇಶಿ ವಿಲನ್ ಡ್ಯಾನಿ ಸಪಾನಿ ಎಂಟ್ರಿ
Team Udayavani, May 31, 2017, 11:59 AM IST
ಕನ್ನಡ ಚಿತ್ರವೊಂದಕ್ಕೆ ವಿದೇಶಿ ನಟನ ಆಗಮನವಾಗಿದೆ. ಅದು “ತಾರಕಾಸುರ’ ಚಿತ್ರಕ್ಕೆ. ಹೌದು, ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ “ತಾರಕಾಸುರ’ ಚಿತ್ರಕ್ಕೆ ಲಂಡನ್ ಮೂಲದ ಡ್ಯಾನಿ ಸಪಾನಿ ವಿಲನ್ ಆಗಿ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಖಡಕ್ ವಿಲನ್ ಒಬ್ಬನ ಎದುರು ಹೊಸ ನಟ ವೈಭವ್ ಹೊಡೆದಾಡಲಿದ್ದಾರೆ. ಅಷ್ಟಕ್ಕೂ ಡ್ಯಾನಿಯೇ ಯಾಕೆ ಎಂಬ ಪ್ರಶ್ನೆ ಬರಬಹುದು.
“ಚಿತ್ರದಲ್ಲಿನ ವಿಲನ್ ಪಾತ್ರ ರಾಕ್ಷಸನಂತ ಬಲಿಷ್ಠವಾದ ಪಾತ್ರ. ಆ ಪಾತ್ರಕ್ಕೆ ಅಷ್ಟೇ ಖಡಕ್ ಆದ ಹಾಗೂ ಕಟ್ಟುಮಸ್ತಾದ ವಿಲನ್ ಬೇಕಿತ್ತು. ಆಗ ನಮ್ಮ ಕಣ್ಣಿಗೆ ಬಿದ್ದಿದ್ದು ಡ್ಯಾನಿ. ಅವರನ್ನು ಸಂಪರ್ಕಿಸಿ, ಅವರ ಪಾತ್ರದ ಬಗ್ಗೆ ವಿವರಿಸಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇಡೀ ಸಿನಿಮಾದಲ್ಲಿ ಅವರ ಗೆಟಪ್ ಕೂಡಾ ವಿಭಿನ್ನವಾಗಿರುತ್ತದೆ’ ಎಂದು ವಿವರ ಕೊಡುತ್ತಾರೆ ಚಂದ್ರಶೇಖರ್.
ಸುಮಾರು 20 ದಿನಗಳ ಕಾಲ ಡ್ಯಾನಿ “ತಾರಕಾಸುರ’ ಚಿತ್ರದಲ್ಲಿ ನಟಿಸಲಿದ್ದು, ಜೂನ್ 4ರಂದು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವೈಭವ್ ನಾಯಕರಾಗಿ ನಟಿಸುತ್ತಿದ್ದಾರೆ. ಇಲ್ಲಿ ಅಳಿವಿನಂಚಿನಲ್ಲಿರುವ ಜಾನಪದ ಕಲೆಯೊಂದರ ಸುತ್ತ ಕಥೆ ಮಾಡಿಕೊಂಡಿರುವ ಬಂಡಿಯಪ್ಪ ಅದನ್ನು ಕಮರ್ಷಿಯಲ್ ಆಗಿ ಹೇಳಲು ಹೊರಟಿದ್ದಾರಂತೆ. ಹೀರೋ ಇಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಶೇಡ್ನಲ್ಲಿ ಗಡ್ಡ ಬಿಟ್ಟು ಸಖತ್ ರಗಡ್ ಆಗಿ ಕಾಣಿಸಿಕೊಂಡರೆ, ಎರಡನೇ ಶೇಡ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು, ಮೂರನೇ ಶೇಡ್ನಲ್ಲಿ ಹೈಸ್ಕೂಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವೈಭವ್, ಆ ಪಾತ್ರಕ್ಕಾಗಿ 15 ಕೆ.ಜಿ. ತೂಕ ಕೂಡಾ ಇಳಿಸಿಕೊಳ್ಳಲಿದ್ದಾರಂತೆ. ನರಸಿಂಹಲು ಈ ಸಿನಿಮಾದ ನಿರ್ಮಾಪಕರು. ಅಂದಹಾಗೆ, ಡ್ಯಾನಿ ಸಪಾನಿ ಈಗಾಗಲೇ ತಮಿಳಿನ “ಸಿಂಗಂ-2′ ನಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.