ದೇಶದ ಕೀರ್ತಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿ ಮವ್ವಾರಿನ ದೀಪಿಕಾ


Team Udayavani, May 31, 2017, 12:26 PM IST

throw-ball.jpg

ಮುಳ್ಳೇರಿಯ: ನೇಪಾಳದಲ್ಲಿ ಜುಲೈ ತಿಂಗಳಾಂತ್ಯ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸೀನಿಯರ್‌ ತ್ರೋಬಾಲ್‌ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ದೀಪಿಕಾ ಎಂ. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್‌ ಸೆಕೆಂಡರಿ ಶಾಲೆಗೆ ಹಿರಿಮೆಯ ಗರಿ ಮೂಡಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಏಶ್ಯನ್‌ ಮಟ್ಟದ ಜೂನಿಯರ್‌ ತ್ರೋಬಾಲ್‌ ಪಂದ್ಯಾಟದಲ್ಲಿ ಪೈನಲ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿದ ತಂಡದಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿ ಯಶ್ಮಿತಾ ಎಂ. ಪ್ರತಿನಿಧಿಸಿದ್ದಳು.

ಕುಂಬಾxಜೆ ಗ್ರಾಮ ಪಂಚಾಯತ್‌ನ ಮವ್ವಾರು ಸಮೀಪದ ಗ್ರಾಮೀಣ ಪ್ರದೇಶ ಮುಕ್ಕೂರು ನಿವಾಸಿ ಶಶೀಂದ್ರ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿಯಾಗಿರುವ ದೀಪಿಕಾ ಎಂ. ಪ್ರಸ್ತುತ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್‌ ಸೆಕೆಂಡರಿ ಪ್ರಾಢಶಾಲೆಯ ಪ್ಲಸ್‌ ಟು ವಿದ್ಯಾರ್ಥಿನಿಯಾಗಿದ್ದಾಳೆ. ಸಹೋದರ ದೀಕ್ಷಿತ್‌ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಓದಿನಲ್ಲೂ ಪ್ರತಿ ಭಾನ್ವಿತೆಯಾಗಿರುವ ದೀಪಿಕಾ ಕಳೆದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶೇ. 89 ಅಂಕಗಳನ್ನು ಪಡೆದಿದ್ದಾರೆ. ಜತೆಗೆ ಶಟಲ್‌, ಟೆನ್ನಿಸ್‌, ಬಾಲ್‌ಬಾÂಡ್‌ಮಿಂಟನ್‌ ಪಂದ್ಯದಲ್ಲೂ ತನ್ನದೇ ಛಾಪು ಮೂಡಿಸಿದ್ದಾಳೆ.

ಅಗಲ್ಪಾಡಿ ಶಾಲೆಯ ಕ್ರೀಡಾ ಅಧ್ಯಾಪಕ ಶಶಿಕಾಂತ್‌ ಬಲ್ಲಾಳ್‌ ಅವರು, ತಾನು 8ನೇ ತರಗತಿಯಲ್ಲಿ ಓದುತ್ತಿರುವಾಗಲೇ ತನ್ನಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಯನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಿದ್ದನ್ನು ಅಭಿಮಾನದಿಂದ ನೆನೆಯುತ್ತಾ ಕೃತಜ್ಞತೆ ಸಲ್ಲಿಸುತ್ತಿರುವ ಈಕೆ, ಜಿಲ್ಲೆ, ರಾಜ್ಯ ಮಟ್ಟದ ಪಂದ್ಯಾಟದಲ್ಲಿ 3 ವರ್ಷದಿಂದೀಚೆ ಸತತವಾಗಿ ಶಾಲಾ ತಂಡವನ್ನು ಪ್ರತಿನಿಧಿಸಿ ತನ್ನ ಕೈ ಚಳಕವನ್ನು ಪ್ರದರ್ಶಿಸಿದ್ದಾಳೆ. ಕಳೆದ ವರ್ಷದಿಂದೀಚೆಗೆ ದೇಶೀಯ ಮಟ್ಟದ ಪಂದ್ಯಾಟದಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿ ತನ್ನ ಕೈ ಚಳಕವನ್ನು ಪ್ರದರ್ಶಿಸಿದ್ದಾಳೆ. ಹಲವು ಬಾರಿ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನೂ
ಮುಡಿಗೇರಿಸಿಕೊಂಡಿರುವ ದೀಪಿಕಾ ಹಲವು ಬಾರಿ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾಳೆ. 2014 ಡಿಸೆಂಬರ್‌ನಲ್ಲಿ ಕೋಟ್ಟೆಯಂನಲ್ಲಿ ನಡೆದ 13ನೇ ರಾಜ್ಯ ಮಟ್ಟದ ಸೀನಿಯರ್‌ ತ್ರೋಬಾಲ್‌ ಪಂದ್ಯ, 2015 ಜುಲೆ„ ತಿಂಗಳಲ್ಲಿ ಎರ್ನಾಕುಳಂನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಸೀನಿಯರ್‌ ತ್ರೋಬಾಲ್‌ ಪಂದ್ಯ, 2016 ಎಪ್ರಿಲ್‌ನಲ್ಲಿ ಎರ್ನಾಕುಳಂನಲ್ಲಿ ನಡೆದ 15ನೇ ರಾಜ್ಯ ಮಟ್ಟದ ಜೂನಿಯರ್‌ ತ್ರೋಬಾಲ್‌ ಪಂದ್ಯ, 2016 ಎಪ್ರಿಲ್‌ನಲ್ಲಿ ಎರ್ನಾಕುಳಂನಲ್ಲಿ ನಡೆದ 15ನೇ ರಾಜ್ಯ ಮಟ್ಟದ ಸೀನಿಯರ್‌ ತ್ರೋಬಾಲ್‌ ಪಂದ್ಯ, ಅಗಸ್ಟ್‌ 2015ರಲ್ಲಿ ನಡೆದ 26ನೇ ದೇಶೀಯ ಜೂ. ತ್ರೋಬಾಲ್‌ ಪಂದ್ಯ, ಚೆನ್ನೈನಲ್ಲಿ ನಡೆದ 22ನೇ ಸಬ್‌ಜೂನಿಯರ್‌ ರಾಷ್ಟ್ರೀಯ ಪಂದ್ಯ ಹಾಗೂ ಇನ್ನಿತರ ಪಂದ್ಯಗಳಲ್ಲಿ ಆಟವಾಡಿದ ಅನುಭವವಿದ್ದು ದೇಶೀಯ ಮಟ್ಟದ ಪಂದ್ಯದಲ್ಲಿ ಕೇರಳ ತಂಡವನ್ನು ಮತ್ತು ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿದ ಕೀರ್ತಿಯೂ ದೀಪಿಕಾಳಿಗೆ ಸಲ್ಲುತ್ತದೆ. 2016
ಅಕ್ಟೋಬರ್‌ನಲ್ಲಿ ನಡೆದ “11ನೇ ಸೀನಿಯರ್‌ ಸೌತ್‌ ಝೋನ್‌’ ನೇಶನಲ್‌ ಚಾಂಪ್ಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಸಬ್‌ಜ್ಯೂನಿಯರ್‌ ವಿಭಾಗದಲ್ಲಿ ಪ್ರತಿನಿಧಿಸಿರುವ ದೀಪಿಕಾ ಎಂ. ತನ್ನ ಚುರುಕಿನ ಆಟದ ಮೂಲಕ ತಂಡಕ್ಕೆ ದ್ವಿತೀಯ ಸ್ಥಾನವನ್ನು ದೊರಕಿಸಿಕೊಡುವಲ್ಲಿ ಭಾರೀ ಶ್ರಮವನ್ನೇ ಪಟ್ಟಿದ್ದಳು.

ಅಂತಾರಾಷ್ಟ್ರೀಯ ಸೀನಿಯರ್‌ ತ್ರೋಬಾಲ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮೇ 22ರಂದು ಹೆ„ದರಬಾದ್‌ನಲ್ಲಿ ಭಾರತೀಯ ತಂಡದ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಈಗಾಗಲೇ ದೇಶೀಯ ಮಟ್ಟದ ಹಲವಾರು ಪಂದ್ಯಾಟಗಳಲ್ಲಿ ತನ್ನ ಮಿಂಚಿನ ಆಟದಿಂದಾಗಿ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದಿದ್ದು, ಭಾರತೀಯ ತಂಡಕ್ಕೆ ಕೇರಳದಿಂದ ಆಯ್ಕೆಯಾದ ಇಬ್ಬರಲ್ಲಿ ದೀಪಿಕಾ ಎಂ. ಮತ್ತು ಎರ್ನಾಕುಳಂ ಜಿಲ್ಲೆಯ ಮಟ್ಟಾಂಚ್ಚೇರಿಯ ಮಹೇಶ್ವರಿ. ಅಂತಾರಾಷ್ಟ್ರೀಯ ಮಟ್ಟದ ತ್ರೋಬಾಲ್‌ ಚಾಂಪಿಯನ್‌ಶಿಪ್‌ ಪಂದ್ಯಾಟದ ಅತಿಥ್ಯವನ್ನು ನೇಪಾಳವು ವಹಿಸಿಕೊಂಡಿದ್ದು, ಜುಲೆ„ ತಿಂಗಳಾಂತ್ಯಕ್ಕೆ ಪಂದ್ಯಾಟವು ನಡೆಯಲಿದೆ.

ಇದೀಗ ಅಂತಾರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ದೇಶವನ್ನು ಪ್ರತಿನಿಧಿಸುವ ಸಿದ್ಧತೆಯಲ್ಲಿರುವ ಈ ಬಾಲೆಗೆ ಕಾಸರಗೋಡು ಜಿಲ್ಲಾಧಿಕಾರಿ ಜೀವನ್‌ಬಾಬು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್‌, ಕೇರಳ ತ್ರೋಬಾಲ್‌ ಅಸೋಸಿಯೇಶನ್‌ನ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಬಲ್ಲಾಳ್‌, ಯುವ ಬ್ರಿಗೇಡ್‌
ಕಾಸರಗೋಡು ಜಿಲ್ಲಾ ಸಮಿತಿ, ಸೋದರಿ ನಿವೇದಿತಾ ಪ್ರತಿಷ್ಠಾನ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಯ
ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗ, ರಕ್ಷಕ-ಶಿಕ್ಷಕರ ಸಂಘ, ಶ್ರೀ ಪೂಮಾಣಿ-ಕಿನ್ನಿಮಾಣಿ ಯುವಕೇಂದ್ರ ಬೆಳಿಂಜ ಹಾಗೂ
ಇನ್ನಿತರ ಸಂಘ ಸಂಸ್ಥೆಯವರು ಶುಭ ಹಾರೈಕೆಯೊಂದಿಗೆ ತುಂಬು ಹƒದಯದ ಅಭಿನಂದನೆಯನ್ನು ಸಲ್ಲಿಸಿದೆ.

ಪ್ರೋತ್ಸಾಹದ ಅಗತ್ಯವಿದೆ
ಅಂತಾರಾಷ್ಟ್ರ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ಹುಮ್ಮಸಿನಲ್ಲಿರುವ ಈ ಗ್ರಾಮೀಣ ಪ್ರತಿಭೆಯು
ಕೇವಲ ಜಿಲ್ಲೆಯದ್ದು ಮಾತ್ರವಲ್ಲ ರಾಜ್ಯ ಮತ್ತು ದೇಶದ ಕೂಡಾ ಆಸ್ತಿಯಾಗಿದ್ದಾಳೆ. ಆದುದರಿಂದ ಈ ಕ್ರೀಡಾ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ನೆರವಿನ ಕೊರತೆಯಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯು ಈ ಪ್ರತಿಭೆಯ ಕುರಿತಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ.

ಅಭಿನಂದನೆ : ಅಂತಾರಾಷ್ಟ್ರೀಯ ಪಂದ್ಯಾಟವೊಂದರಲ್ಲಿ ನಮ್ಮೂರಿನ ದೀಪಿಕಾ ಪ್ರತಿನಿಧಿಸುತ್ತಿದ್ದಾಳೆ ಎಂಬುದು
ಗಡಿನಾಡು ಕಾಸರಗೋಡಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಧಾರ್ಮಿಕ ಮುಂದಾಳು
ಬ್ರಹ್ಮಶ್ರೀ ರವೀಶ ತಂತ್ರಿ, ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್‌, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ,
ಪ್ರಧಾನ ಕಾರ್ಯದರ್ಶಿ ಹರೀಶ್‌ ನಾರಂಪಾಡಿ, ಬಿಜೆಪಿ ಕುಂಬಾxಜೆ ಪಂಚಾಯತ್‌ ಸಮಿತಿಯ ಅಧ್ಯಕ್ಷ ರಾಜೇಶ್‌ ಶೆಟ್ಟಿ ಬಲೆಕ್ಕಳ, ವಾರ್ಡು ಸದಸ್ಯ ರವೀಂದ್ರ ರೈ ಗೋಸಾಡ ಮೊದಲಾದವರು ಅಭಿನಂದಿಸಿದ್ದಾರೆ.

“ದೈ.ಶಿ. ಶಿಕ್ಷಕ ಶಶಿಕಾಂತ್‌ ಬಲ್ಲಾಳ್‌ ತರಬೇತಿಯಿಂದ ಸಾಧ್ಯವಾಯಿತು’
ತನ್ನಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಯನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಿರುವ ತ್ರೋಬಾಲ್‌ ತರಬೇತುದಾರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ್‌ ಬಲ್ಲಾಳ್‌ ಅವರ ಕಠಿನ ಪರಿಶ್ರಮದ ತರಬೇತಿನಿಂದಾಗಿ ತಾನು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಪ್ರತಿನಿಧಿಸಲು ಸಾಧ್ಯವಾಯಿತು ಎಂದು ಅಭಿಮಾನದಿಂದ ನೆನೆಯುತ್ತಾ ಕೃತಜ್ಞತೆ ಸಲ್ಲಿಸುತ್ತಿರುವ ದೀಪಿಕಾ ಸದಾ ಪ್ರೋತ್ಸಾಹಿಸಿದ ತನ್ನ ತಂದೆ ತಾಯಿ, ಹೆತ್ತವರು, ಸಹಪಾಠಿಗಳಿಗೆ, ಹೈಯರ್‌ ಸೆಕೆಂಡರಿ ವಿಭಾಗದ ಪ್ರಾಧ್ಯಾಪಕ ಸತೀಶ್‌ ವೈ, ಶಾಲಾ ಸಿಬಂದಿಗಳಾದ ಬಾಲಕೃಷ್ಣ ಎಸ್‌. ಹರೀಶ್‌ ಎನ್‌. ಇವರಿಗೂ ಕೃತಜ್ಞತೆ ಹೇಳುತ್ತಿದ್ದಾಳೆ.

– ರಾಮಚಂದ್ರ ಬಲ್ಲಾಳ್‌

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.