ನಿನ್ನಂಥ ಅಮ್ಮ ಇಲ್ಲ


Team Udayavani, Jun 1, 2017, 11:29 AM IST

Parvathamma-Rajakumar-(169).jpg

ಬಹುಶಃ ಪಾರ್ವತಮ್ಮ ರಾಜಕುಮಾರ್‌ ಮನಸ್ಸು ಮಾಡಿದ್ದರೆ ರಾಜಕೀಯ ಪ್ರವೇಶ ಮಾಡುವುದು ಕಷ್ಟವಿರಲಿಲ್ಲ. ಹಲವು ಪಕ್ಷದವರು ಅವರಿಗೆ ವಿಧಾನ ಪರಿಷತ್‌ ಸದಸ್ಯೆ ಸ್ಥಾನ ಕೊಡುವುದಕ್ಕೆ ಮುಂದಾಗಿದ್ದರಂತೆ. ಆದರೆ, ಪಾರ್ವತಮ್ಮನವರು ಯಾವತ್ತೂ ರಾಜಕೀಯದ ಬಗ್ಗೆ ಯೋಚಿಸಲಿಲ್ಲ. ಶಾಸಕ ಸ್ಥಾನವಲ್ಲ, ಕನ್ನಡ ಚಿತ್ರರಂಗದ ಯಾವುದೇ ಸಂಘ-ಸಂಸ್ಥೆಗಳ ಚುನಾವಣೆಗಳಲ್ಲೂ ಅವರು ಸ್ಪರ್ಧಿಸಲಿಲ್ಲ. ಕನ್ನಡ ಚಿತ್ರರಂಗದ ವಿಷಯಗಳಲ್ಲಿ ಅವರು ಸಕ್ರಿಯರಾಗಿದ್ದರು. ಚಿತ್ರರಂಗಕ್ಕೆ ಅಗತ್ಯವಿದ್ದ ಸಂದರ್ಭದಲ್ಲೆಲ್ಲಾ ಅವರು ಮುಂದೆ ನಿಲ್ಲುತ್ತಿದ್ದರು.

“ಪಾರ್ವತಮ್ಮ ಪರ್ವ ಇದ್ದಂತೆ. ಅವರ ಸಾಧನೆ ಅಗಾಧ. ಮೇಲ್ನೋಟಕ್ಕೆ ಅದು ಕಾಣಿಸದಿದ್ದರೂ, ಇಲ್ಲಿ ಸೇರಿರುವ ಜನರೇ ಅದಕ್ಕೆ ಸಾಕ್ಷಿ. ರಾಜ್‌ ಸಂಕಲ್ಪಕ್ಕೆ ಶಕ್ತಿಯಾಗಿದ್ದರು. ಡಾ.ರಾಜಕುಮಾರ್‌ ಅವರ ಪ್ರತಿಭೆಯನ್ನು ಉಪಯೋಗಿಸುವ ಕಾಲದಲ್ಲೇ ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ರಾಜ್‌ ಅವರ ಪ್ರತಿಭೆಯನ್ನು ಪ್ರಯೋಗಿಸಿದರು. ರಾಜಕುಮಾರ್‌ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲಬೇಕು.
– ಹಂಸಲೇಖ, ಸಂಗೀತನಿರ್ದೇಶಕ

ಚಿತ್ರೀಕರಣ ಸಮಯದಲ್ಲಿ ಸೆಟ್‌ಗೆ ಬರುತ್ತಿದ್ದ ಪಾರ್ವತಮ್ಮ ಊಟ ತರುತ್ತಿದ್ದರು. ಅದು ಕೇವಲ ರಾಜಕುಮಾರ್‌ಗೆ ಅಷ್ಟೇ ಅಲ್ಲ, ಅಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲರಿಗೂ ಊಟ ಬಡಿಸಿ, ತಿನಿಸಿ, ಜತೆಗೆ ಮಾತುಕತೆ ನಡೆಸುತ್ತಿದ್ದರು. ಈಗ ಹೃದಯ ಖಾಲಿ ಖಾಲಿಯಾಗಿದೆ. ಈ ಖಾಲಿ ಹೃದಯದಲ್ಲಿ ಮಾತುಗಳೇ ಬರುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಜಯಂತಿ, ಹಿರಿಯ ಕಲಾವಿದೆ

ಪಾರ್ವತಮ್ಮ ಲೆಜೆಂಡ್‌ಗಳಲ್ಲಿ ಲೆಜೆಂಡ್‌. ಅಂತಹ ಮಹಾನ್‌ ತಾಯಿ ಕನ್ನಡ ಚಿತ್ರರಂಗವನ್ನು ಗಟ್ಟಿಯಾಗಿಸುವಲ್ಲಿ ಕಾರಣರಾಗಿದ್ದಾರೆ. ಅವರನ್ನು ಕಳೆದುಕೊಂಡು ಚಿತ್ರರಂಗ ಅಕ್ಷರಶಃ ಬಡವಾಗಿದೆ
– ನಾಗಾಭರಣ, ನಿರ್ದೇಶಕ

ನಾನು ನಟಿಯಾಗುವುದಕ್ಕೆ ಕಾರಣ ವಜ್ರೆàಶ್ವರಿ ಕಂಪೆನಿ. ಆ ಕಂಪೆನಿ ಅವಕಾಶ ಕೊಟ್ಟಿದ್ದರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯ್ತು. ಎಲ್ಲಾ ಕ್ರೆಡಿಟ್‌ ಪಾರ್ವತಮ್ಮ ಅವರಿಗೆ ಸಲ್ಲಬೇಕು. ನನ್ನಂತೆ ಎಷ್ಟೋ ಹೊಸ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಬೆಳೆಸಿದ್ದಾರೆ. “ಸವ್ಯಸಾಚಿ’ ಮತ್ತು “ಓಂ’ ಸಿನಿಮಾ ಮಾಡಿ ನನ್ನಲ್ಲಿ ಧೈರ್ಯ ತುಂಬಿದವರೇ ಅವರು. ಲೀಡರ್‌ಶಿಪ್‌ ಮತ್ತು ಕಮ್ಯಾಂಡಿಂಗ್‌ ಅವರಲ್ಲಿತ್ತು. ಅವರನ್ನು ಬಿಟ್ಟರೆ, ಬೇರೆ ಯಾವ ಹೆಣ್ಣು ಮಗಳಲ್ಲೂ ಅಂತಹ ಕ್ವಾಲಿಟಿನೋಡಲು ಸಾಧ್ಯವಿಲ್ಲ. ಎಜುಕೇಷನ್‌ ಇರದಿದ್ದರೂ ಒಳ್ಳೇ ಜಾಣತನ ಅವರಲ್ಲಿತ್ತು. ಅವರಿಲ್ಲ ಅನ್ನೋದನ್ನು ಸಹಿಸಲಾಗುತ್ತಿಲ್ಲ.
– ಪ್ರೇಮ, ನಟಿ

ಪಾರ್ವತಮ್ಮ ಅವರನ್ನು ಮಡ್ರಾಸ್‌ನಲ್ಲಿದ್ದಾಗಿಂದಲೂ ಬಲ್ಲೆ. ಅವರೊಬ್ಬ ರಾಜ್‌ಕುಮಾರ್‌ ಪತ್ನಿ, ಸ್ಟಾರ್‌ ನಟರ ತಾಯಿ ಎನ್ನುವುದಕ್ಕಿಂತ ಹೆಚ್ಚಾಗಿ, ಚಿತ್ರರಂಗದವರ ಅಮ್ಮನಾಗಿಯೇ ಗುರುತಿಸಿಕೊಂಡವರು. ಅವರ ಮನೆಯಲ್ಲಿ ಆಗ ಸುಮಾರು 25 ಕ್ಕೂ ಹೆಚ್ಚು ಮಕ್ಕಳಿದ್ದರು. ಎಲ್ಲರನ್ನೂ ಒಂದೇ ರೀತಿಯಲ್ಲಿ ಸಾಕಿ, ಬೆಳೆಸಿದ ಕೀರ್ತಿ ಅವರದು. ಒಂದೇ ಶಾಲೆಯಲ್ಲಿ ಓದಿಸುವ ಮೂಲಕ ಯಾರಿಗೂ ಭೇದ-ಭಾವ ತೋರದ ಮಹಿಳೆಯಾಗಿ ಗಮನಸೆಳೆದವರು. ರಾಜ್‌ಕುಮಾರ್‌ ಯಶಸ್ಸಿನ ಹಿಂದೆ ಪಾರ್ವತಮ್ಮ ಇದ್ದರು. ರಾಜ್‌ಕುಮಾರ್‌ ಮಾಡುವ ಸಿನಿಮಾಗಳ ಕಥೆ ಆಯ್ಕೆಯಲ್ಲೂ ಪಾರ್ವತಮ್ಮ ಇರುತ್ತಿದ್ದರು. ಸಿನಿಮಾ ರಂಗಕ್ಕೆ ಅವರ ಕೊಡುಗೆ ಅಪಾರ.
– ಭಾರ್ಗವ, ಹಿರಿಯ ನಿರ್ದೇಶಕ

“ನಾನು ಚಿಕ್ಕವನಿದ್ದಾಗ ಅವರನ್ನು ಸಾಕಷ್ಟು ಸಲ ನೋಡಿದ್ದೆ. ಅಮ್ಮನ ಜತೆ ಮನೆಗೆ ಹೋಗಿ, ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದೆ. ಎಲ್ಲೋ ಒಂದು ಕಡೆ ಪ್ರೀತಿ ತೋರುತ್ತ, ಮಾತಾಡಿಸುತ್ತಿದ್ದರು. ನಾನಾಗಲಿ, ಅವರಾಗಲಿ, ಅಮ್ಮನಾಗಲಿ ನೋವಿದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲೇ ಬಾಂಧವ್ಯದಿಂದ ಮಾತಾಡುತ್ತಿದ್ದೆವು. ಆ ನೋವು ಕೇವಲ ಆತ್ಮಗಳಿಗಷ್ಟೇ ಅರ್ಥ ಆಗೋಕೆ ಸಾಧ್ಯ.’
– ವಿನೋದ್‌ರಾಜ್‌, ನಟ.

“ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಪರಿಸ್ಥಿತಿ ನೋಡಿ ಅಮ್ಮ ಆದಷ್ಟು ಬೇಗ ಮನೆಗೆ ಹಿಂದಿರುಗುತ್ತಾರೆ ಎಂಬು ಭಾವಿಸಿದ್ದೆ. ಆದರೆ, ಈಗ ನಾನು ಅವರನ್ನು ಈ ಸ್ಥಿತಿಯಲ್ಲಿ ನೋಡಬೇಕಾಯ್ತು. ಕನ್ನಡ ಚಿತ್ರರಂಗದ ತಾಯಿಯಾಗಿದ್ದವರನ್ನು ಕಳೆದುಕೊಂಡ ನೋವು ಎಲ್ಲರಿಗೂ ಇದೆ. ಅಣ್ಣಾವ್ರು ತಂದೆಯಾಗಿದ್ದರು. ಪಾರ್ವತಮ್ಮ ತಾಯಿ ಆಗಿದ್ದರು. ಈಗ ಇಬ್ಬರನ್ನೂ ನಾವು ಕಳೆದುಕೊಂಡು ಅನಾಥರಾಗಿದ್ದೇವೆ
– ತಾರಾ ನಟಿ

ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ಕೊಡುಗೆ ಅಪಾರವಾಗಿದೆ. ಒಬ್ಬ ಮಹಿಳೆಯಾಗಿ, ಅವರು ನಿರ್ಮಾಣ ಸಂಸ್ಥೆ, ವಿತರಣೆ ಕೆಲಸ ಹಾಗೂ ಪ್ರದರ್ಶನ ವಿಷಯದಲ್ಲೂ ಸೈ ಎನಿಸಿಕೊಂಡವರು. ಡಾ.ರಾಜಕುಮಾರ್‌ ಅವರ ಹಿಂದಿನ ಶಕ್ತಿಯಾಗಿದ್ದವರು. ರಾಜ್‌ ನಂತರದ ಸ್ಥಾನ ತುಂಬಿ, ಮಾರ್ಗದರ್ಶಕರಾಗಿದ್ದರು. ಮನೆಗೆ ಹೋದರೆ, ಮೊದಲು ಆತಿಥ್ಯ ನೀಡಿ, ಸೌಜನ್ಯವಾಗಿ ಮಾತಾಡಿಸುತ್ತಿದ್ದರು. ಪಾರ್ವತಮ್ಮ ಕನ್ನಡದ ದೊಡ್ಡ ಶಕ್ತಿ.
– ಟಿ.ಎನ್‌.ಸೀತಾರಾಂ, ನಿರ್ದೇಶಕ

ಪಾರ್ವತಮ್ಮ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಇಡೀ ಚಿತ್ರರಂಗಕ್ಕೇ ಅಮ್ಮ. ರಾಜ್‌ಕುಮಾರ್‌ ಅವರ ಹಿಂದೆ ಬೆಂಗಾವಲಾಗಿ ನಿಂತಿದ್ದರು. ಇಡೀ ಚಿತ್ರರಂಗದ ಸಮಸ್ಯೆಗಳನ್ನು ಪರಿಹರಿಸುತ್ತಾ ಬಂದವರು ಅವರು. ಅವರ ಸಾಧನೆಯಿಂದಲೇ ನಾವು ಇವತ್ತು ಆರಾಮವಾಗಿದ್ದೇವೆ. ಕೇವಲ ಅವರ ಕುಟುಂಬದ ಸದಸ್ಯರಿಗೆ ಮಾತ್ರವಲ್ಲದೇ, ಯಾರೇ ಹೊಸಬರು ಚಿತ್ರರಂಗಕ್ಕೆ ಬಂದರೂ ಅವರಿಗೆ ಪ್ರೋತ್ಸಾಹಹ ಕೊಡುತ್ತಿದ್ದರು. ನಾನು ಯಾವಾಗ ಹೋದರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಒಂದೊಂದು ಇಂಟರ್‌ವ್ಯೂ ಕೇಳಿದಾಗಲೂ ಅದರಿಂದ ನಾವು ಸ್ಫೂರ್ತಿಗೊಳ್ಳುತ್ತಿದ್ದೆವು. ಆ ಮಟ್ಟಿನ ಸಾಧನೆ ಮಾಡಿದ ಸಾಧಕಿ ಅವರು. ಕನ್ನಡತನ, ಭಾಷೆ ಬಂದಾಗ ಅಣ್ಣಾವ್ರನ್ನು ಹೇಗೆ ನಾವು ಸ್ಮರಿಸುತ್ತೇವೆಯೋ ಹಾಗೆ ಪಾರ್ವತಮ್ಮನವರನ್ನು ಸ್ಮರಿಸಬೇಕಾಗುತ್ತದೆ. ಅವರ ಕೊಡುಗೆ ಕೂಡಾ ದೊಡ್ಡದಿದೆ.
– ಯಶ್‌, ನಟ
 
ಇದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರಿಲ್ಲದೇ ನಾವೆಲ್ಲ ತಬ್ಬಲಿಗಳಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಸುಧಾರಾಣಿ, ನಟಿ

ಒಂದು ಹಳ್ಳಿ ಹೆಂಗಸು ಬಂದು ಎಲ್ಲಾ ರೀತಿಯಲ್ಲಿ ಸಾಮ್ರಾಜ್ಯ ಕಟ್ಟಿದ್ದು ಸುಲಭದ ಮಾತಲ್ಲ. ರಾಜ್‌ಕುಮಾರ್‌ ಅವರು ನಟನೆ, ಸಾಹಿತ್ಯ, ಹಾಡು, ಯೋಗ ಕಡೆ ಇದ್ದರೆ ಅವರ ಹಿಂದೆ ಇದ್ದ ಶಕ್ತಿ ಅದು ಪಾರ್ವತಮ್ಮ ರಾಜ್‌ಕುಮಾರ್‌. ಅವರು ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಿರ್ಮಾಣ, ವಿತರಣೆ, ಪ್ರದರ್ಶನ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಮಹಿಳೆ ಅವರು. 
– ಅಂಬರೀಶ್‌, ಹಿರಿಯ ನಟ

ಅಮ್ಮಾವ್ರು ಇಲ್ಲ ಅನ್ನೋದನ್ನು ಊಹಿಸಿಕೊಳ್ಳಲು ಆಗಲ್ಲ. ಅವರ ಮೂಲಕ ನಾನು ಚಿತ್ರರಂಗಕ್ಕೆ ಬಂದವಳು. ನಾನು ಜೀವನಪೂರ್ತಿ ಅವರಿಗೆ ಚಿರಋಣಿ.
–  ಅನುಪ್ರಭಾಕರ್‌, ನಟಿ

ಅಮ್ಮ ಚಿತ್ರರಂಗದ ಮಹಾಶಕ್ತಿ. ಇಡೀ ಚಿತ್ರರಂಗಕ್ಕೆ ಸ್ಟ್ರೆಂಥ್‌ ಅವರು. ಇವತ್ತು ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕಾದ ದೊಡ್ಡ ನಷ್ಟ.
– ರವಿಶಂಕರ್‌, ನಟ

ನನಗೂ ರಾಜ್‌ಕುಟುಂಬಕ್ಕೂ 40 ವರ್ಷದ ನಂಟು. 80ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ ಮಹಾನ್‌ ಸಾಧಕಿ ಪಾರ್ವತಮ್ಮ. ಅವರು ಕೆಲವು ದಿನಗಳ ಹಿಂದೆ ಚೇತರಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಕೇಳಿ ಸಮಾಧಾನಪಟ್ಟಿದ್ದೆ. ಆದರೆ, ಈಗ ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳೋದು ಕಷ್ಟವಾಗುತ್ತಿದೆ.
– ಅನಂತಕುಮಾರ್‌, ಕೇಂದ್ರ ಸಚಿವ

ಪಾರ್ವತಮ್ಮ ಅವರು ಕೇವಲ ಚಿತ್ರರಂಗವನ್ನು ಮಾತ್ರ ಅಗಲಿಲ್ಲ, ಇಡೀ ಕರ್ನಾಟಕವನ್ನು ಅಗಲಿದ್ದಾರೆ. ಆ ದೇವತಾ ಮನುಷ್ಯನ ಹಿಂದಿನ ಶಕ್ತಿದೇವತೆ ಅವರು. ಸಾಮಾಜಿಕ ಕಳಕಳಿಯ ನಿರ್ಮಾಪಕಿಯಾಗಿ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಮಾತೃಸ್ವರೂಪಿಣಿಯಾದ ಅವರ ನಿಧನ ತುಂಬಲಾರದ ನಷ್ಟ.
– ಜಿ.ಪದ್ಮಾವತಿ, ಮೇಯರ್‌

ರಾಜ್‌ಕುಮಾರ್‌ ಹಿಂದಿನ ದೊಡ್ಡ ಶಕ್ತಿಯಾಗಿ ನಿಂತಿದ್ದವರು ಪಾರ್ವತಮ್ಮ. ಇಂದು ಅವರು ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಕೆ.ಜೆ.ಜಾರ್ಜ್‌, ಸಚಿವರು

ಅವರ ಪ್ರೀತಿ, ಸ್ನೇಹ, ಅವರು ಬದುಕನ್ನು ತೂಗಿಸಿಕೊಂಡು ಹೋದ ರೀತಿ ಎಲ್ಲರಿಗೂ ಮಾದರಿ. ವೃತ್ತಿ-ಪ್ರವೃತ್ತಿಯನ್ನು ಸರಿದೂಗಿಸಿಕೊಂಡು ಹೋದ ರೀತಿ ಅದ್ಭುತ.
– ಮಾಳವಿಕಾ, ನಟಿ

ಸಂಯುಕ್ತಾ’ ಚಿತ್ರದಿಂದ ನನ್ನ ಮತ್ತು ರಾಜ್‌ಕುಟುಂಬದ ಸಂಬಂಧ ಆರಂಭವಾಯಿತು. 28 ವರ್ಷಗಳಲ್ಲಿ ನಾನು ಅವರ ಕುಟುಂಬದವಂತಿದ್ದೆ. ನನಗೆ ಅವಕಾಶ ಕೊಟ್ಟು, ಇವತ್ತಿನ ನನ್ನ ಈ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದು.
– ಅವಿನಾಶ್‌, ನಟ

ಅವರೊಂದು ದೊಡ್ಡ ಇನ್ಸಿಟಿಟ್ಯೂಶನ್‌. ಅವರು ಬಾಳಿದ ರೀತಿ ಎಲ್ಲರಿಗೂ ಮಾದರಿ.
– ಪೂಜಾಗಾಂಧಿ, ನಟಿ

ತಬ್ಬಲಿತನ ಕಾಡುತ್ತಿದೆ. ಚಿತ್ರರಂಗವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇನ್ನೊಂದು ಜನ್ಮ ಇದ್ರೆ ರಾಜ್‌-ಪಾರ್ವತಮ್ಮ ಮತ್ತೆ ಗಂಡ-ಹೆಂಡತಿಯಾಗಲಿ.
– ಸುಮಿತ್ರಾ, ಹಿರಿಯ ನಟಿ

ಅವರು ತಾಯಿ ಇದ್ದಂತೆ. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ.
– ಸಾಧುಕೋಕಿಲ, ನಟ

ಅಣ್ಣಾವ್ರು ಒಂದು ಶಕ್ತಿಯಾದರೆ ಅವರ ಹಿಂದಿ ಭಕ್ತಿ ಪಾರ್ವತಮ್ಮ. ಪಾರ್ವತಮ್ಮ ಅವರ ಬಗ್ಗೆ ಪಠ್ಯಪುಸ್ತಕ ತರಬೇಕು. ಚಿತ್ರರಂಗಕ್ಕೆ ಬರುವವರು ಅದನ್ನು ಓದಿಕೊಂಡರೆ ಒಳ್ಳೆಯ ಚಿತ್ರಗಳನ್ನು ಮಾಡಬಹುದು. 
– ಉಪೇಂದ್ರ, ನಟ

ಆತ್ಮಸ್ಥೈರ್ಯವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ ಪಾರ್ವತಮ್ಮ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಸುದೀಪ್‌

ಕನ್ನಡ ಚಿತ್ರರಂಗದ ಅಮ್ಮ ಅವರು. ಅವರನ್ನು ಕಳೆದುಕೊಂಡ ದುಃಖ ಕಾಡುತ್ತಿದೆ. 
– ಪ್ರೇಮ್‌, ನಟ

ನನ್ನ ಪ್ರತಿ ಸಿನಿಮಾವನ್ನು, ನಟನೆಯನ್ನು ಮೆಚ್ಚಿಕೊಳ್ಳುತ್ತಾ ನನ್ನ ಬೆಳವಣಿಗೆಗೆ ಸ್ಫೂರ್ತಿಯಾದವರು. ಏನೇ ಒಳ್ಳೆಯ ಕೆಲಸ ಮಾಡುವ ಮುನ್ನ ಅವರ ಆರ್ಶೀವಾದ ಪಡೆಯುತ್ತಿದ್ದೆ.
– ಉಮಾಶ್ರೀ, ನಟಿ, ಸಚಿವೆ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ನೀಡಿದ ನಿರ್ಮಾಪಕಿ. ಅಣ್ಣಾವ್ರ ಪರಿವಾರದ ಬೆನ್ನೆಲು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
– ದರ್ಶನ್‌, ನಟ

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

moksha Kushal recent photoshoot

Moksha Kushal: ಹಾಟ್‌ ಫೋಟೋಶೂಟ್‌ನಲ್ಲಿ ಮೋಕ್ಷಾ ಮಿಂಚು

Ramesh Aravind spoke about bhairadevi movie

Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್‌ ಅರವಿಂದ್‌

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

upendra

Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ

night road kannada movie

Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್‌ ರೋಡ್‌ʼ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.