ಎಚ್‌ಡಿಕೆ ಸಿಎಂ ಮಾಡುವ ದೇವೇಗೌಡರ ಕೊನೆ ಆಸೆ ಕೈಗೂಡಲ್ಲ
Team Udayavani, Jun 1, 2017, 12:51 PM IST
ಮುತ್ತಿನಮುಳಸೋಗೆ (ಪಿರಿಯಾಪಟ್ಟಣ ತಾ.): ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಲಿ, ಎಚ್.ಡಿ.ಕುಮಾರಸ್ವಾಮಿ ಏನೇ ಹೇಳಿಕೊಂಡು ತಿರುಗಲಿ, ಎಚ್.ಡಿ.ದೇವೇಗೌಡರು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಕೊನೆ ಆಸೆ ಎಂದರೂ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗೋಯ್ತು, ಜೇಬಲ್ಲಿ 150 ಸೀಟು ಇದೆ. ಮತದಾರರನ್ನು ಜೇಬಿಗೆ ಹಾಕಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಓಡಾಡ್ತಾವೆ° ಎಂದು ಯಡಿಯೂರಪ್ಪರ ಹಾವಭಾವವನ್ನು ಪ್ರದರ್ಶಿಸಿ ಟೀಕಿಸಿದರು.
ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿ, ಇನ್ನೈದು ವರ್ಷಕ್ಕೆ ನಿಮ್ಮ ಆರ್ಶೀವಾದ ಕೇಳಲು 2018ರಲ್ಲಿ ಬರುತ್ತೇವೆ. ಕಳೆದ ನಾಲ್ಕು ವರ್ಷಗಳಲ್ಲಿ ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆ ಈಗಾಗಲೇ ಈಡೇರಿಸಿದ್ದು, ಇನ್ನುಳಿದ ಒಂದು ವರ್ಷದಲ್ಲಿ ಇನ್ನೂ 10 ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.
ಐದು ಜನ ಮುಖ್ಯಮಂತ್ರಿಗಳ ಜತೆ ಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿ, 12 ಬಜೆಟ್ ಮಂಡಿಸಿದ್ದೇನೆ. ಬಜೆಟ್ ರೂಪಿಸುವಾಗ ಪ್ರಣಾಳಿಕೆಯನ್ನು ಪಕ್ಕದಲ್ಲಿಟ್ಟುಕೊಂಡೇ ಇರುತ್ತೇನೆ. ಆದರೆ, ಬೇರೆ ಪಕ್ಷಗಳು ಚುನಾವಣೆ ಮುಗಿದ ಕೂಡಲೇ ಪ್ರಣಾಳಿಕೆ ಕಸದಬುಟ್ಟಿಗೆ ಎಸೆಯುತ್ತಾರೆ ಎಂದು ಟೀಕಿಸಿದರು.
ಜನ ಒಳ್ಳೆಯ ಕೆಲಸ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಉಪ್ಪು ಕೊಟ್ಟವರನ್ನು ಮುಪ್ಪಿನ ತನಕ ನೆನೆಯಬೇಕು ಎಂಬ ಮಾತು ಹಳ್ಳಿಜನರಲ್ಲಿದೆ. ಹೀಗಾಗಿ 2018ರ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಜನತೆ ಕೆ.ವೆಂಕಟೇಶ್‌ಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಹಾಕಲಿಲ್ಲ. ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನನಗೂ ಸಿದ್ದರಾಮಯ್ಯಗೂ ಯುದ್ಧ ಎಂದು ಹೇಳಿದರೆ, ಯಡಿಯೂರಪ್ಪ ನಾವೀಗಾಗಲೇ ಗೆದ್ದಾಯ್ತು ವಿಜಯೋತ್ಸವ ಆಚರಣೆಗೆ ಹೋಗುತ್ತಿದ್ದೇವೆ ಎಂದಿದ್ದರು,
ಆದರೆ, ನಾನು ಯಾರನ್ನೂ ವೈಯಕ್ತಿಕ ಟೀಕೆ ಮಾಡಲಿಲ್ಲ. ನಿಮ್ಮ ಎಲ್ಲ ಕೆಲಸ ಮಾಡಿದ್ದೇನೆ. ಗೆಯ್ಯೋ ಎತ್ತಿಗೆ ಹುಲ್ಲು ಹಾಕಿ, ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ ಎಂದಷ್ಟೇ ನಾನು ಕೇಳಿದ್ದು, ಯಡಿಯೂರಪ್ಪ ಉಪ ಚುನಾವಣೆಗಾಗಿ ಒಂದು ತಿಂಗಳು ಕ್ಯಾಂಪ್ ಹಾಕಿದ್ದರು, ಆದರೂ ಎರಡು ಕ್ಷೇತ್ರದ ಜನತೆ ನಮ್ಮ ನಿರೀಕ್ಷೆಗಿಂತ ಹೆಚ್ಚು ಮತ ನೀಡಿದರು ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ಈ ಮಾತು ಹೇಳಬಾರದು, ಆದರೂ ಹೇಳುತ್ತಿದ್ದೇನೆ ಎಂದು ಚುನಾವಣಾ ಭಾಷಣಕ್ಕೆ ಪೀಠಿಕೆ ಹಾಕಿದವರು, ಕೆಲಸ ಮಾಡಿದವರಿಗೆ ಕೂಲಿ ಮಾಡಬೇಕಾಗುತ್ತದೆ. ಕೆ.ವೆಂಕಟೇಶ್‌ರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜಕಲ್ಯಾಣದ ಕೆಲಸದ ಜತೆಗೆ ಅಭಿವೃದ್ಧಿ ಕಾರ್ಯವನ್ನೂ ಮಾಡುತ್ತಿದ್ದಾರೆ. ಅವರಲ್ಲಿ ಬಡವರಿಗೆ ಸ್ಪಂದಿಸುವ ಹೃದಯವಿದೆ. ಆದರೂ 20 ವರ್ಷ ಮುಖ್ಯಮಂತ್ರಿಯಾಗಿ ಅವರನ್ನು ಇಡೋಕಾಗಲ್ಲ. ಮುಂದಿನ ಒಂದು ವರ್ಷದಲ್ಲಿ ಚುನಾವಣೆ ಬರುತ್ತೆ. ಕ್ಷೇತ್ರದ ಜನ ವಿವೇಚನಾಯುತವಾಗಿ ನಿರ್ಣಯ ಕೈಗೊಳ್ಳಿ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಶಾಸಕ ವೆಂಕಟೇಶ್ ತಾಲೂಕಿನಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಬಾಬೂ ಜಗಜೀವನ್ ರಾಮ್ ಭ ವನಗಳಿಗೆ ಹೆಚ್ಚುವರಿ ಹಣ ಕೇಳಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಹಣ ಕೊಡುತ್ತೇನೆ. ಆದರೆ ಅವರ ಕೈಬಿಡಬೇಡಿ ಎಂದು ಹೇಳಿದರು.
ಶಾಸಕ ವೆಂಕಟೇಶ್ ಮಾತನಾಡಿ, ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದು ತಮಗೆ ಖುಷಿಕೊಟ್ಟಿದೆ. ನನ್ನನ್ನು ಮಂತ್ರಿ ಮಾಡಿದ್ದರು ಇಷ್ಟು ಸಂತೋಷ ವಾಗುತ್ತಿರಲಿಲ್ಲ. ಮುಂದಿನ ತಲೆಮಾರು ನೆನೆಯುವಂತಹ ಕಾರ್ಯಕ್ರಮ ಇದು. ಚುನಾವಣೆ ವೇಳೆಗೆ ಕೆರೆಗಳಿಗೆ ನೀರು ಬಿಟ್ಟರೆ ಅಷ್ಟೇ ಸಾಕು, ಪೈಪ್‌ಲೈನ್ ಹಾಕಲು ರೈತರು ಜಮೀನು ಬೇಗ ಬಿಟ್ಟು ಕೊಟ್ಟರೆ ಕೆಲಸವೂ ಬೇಗ ಆಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.