ನದಿ ನೀರು ಕ್ಷೀಣ-ಜಾಕ್ವೆಲ್ ತಳಕ್ಕೆ ರಂಧ್ರ
Team Udayavani, Jun 1, 2017, 1:09 PM IST
ಹರಿಹರ: ನಗರಕ್ಕೆ ನೀರು ಪೂರೈಸುವ ಕವಲೆತ್ತು ಜಾಕ್ವೆಲ್ ರಂಧ್ರಗಳಿಗೆ ನದಿ ನೀರು ದೊರೆಯದ ಕಾರಣ ನಗರಸಭೆ ಅಧಿಕಾರಿಗಳು ಬುಧವಾರ ಜಾಕ್ವೆಲ್ನ ಕೆಳಭಾಗದಲ್ಲಿ ಹೊಸ ರಂಧ್ರ ಕೊರೆದು ಬಾವಿಗೆ ನೀರು ಹರಿಯುವಂತೆ ಮಾಡಿದರು.
ನದಿ ಪಾತ್ರದ ಜನವಸತಿ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆಂದು ಜಲಾಶಯದಿಂದ 15 ದಿನಗಳ ಹಿಂದೆ ತುಂಗಭಧ್ರ ನದಿಗೆ ನೀರು ಹರಿಸಲಾಗಿತ್ತು. ಆದರೆ ನೀರಿನ ಹರಿವು ಕ್ಷೀಣಿಸಿರುವ ಪರಿಣಾಮ ಮುಂಚಿನ ಎರಡು ರಂಧ್ರಗಳಿಗೆ ನೀರು ದೊರೆಯದಾಗಿ ಕಳೆದೆರಡು ದಿನಗಳಿಂದ ನಗರಕ್ಕೆ ನೀರು ಪೂರೈಸಲಾಗಿರಲಿಲ್ಲ.
ಬುಧವಾರ ಸಂಜೆ ಜಾಕ್ವೆಲ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್ ಮತ್ತಿತರರು, ಜಾಕ್ವೆಲ್ ರಂಧ್ರಗಳ ಕೆಳ ಮಟ್ಟದಲ್ಲಿ ನದಿ ನೀರು ಹರಿಯುತ್ತಿರುವುದನ್ನು ಗಮನಿಸಿ ಜಾಕ್ ವೆಲ್ನ ಗೋಡೆಯ ಆ ರಂಧ್ರಗಳಿಗಿಂತ ಕೆಳಭಾಗದಲ್ಲಿ ಹೊಸ ರಂಧ್ರ ಅಥವಾ ಪ್ರವೇಶದ್ವಾರ ಕೊರೆಸುವ ನಿರ್ಣಯ ಕೈಗೊಂಡರು.
ಅದರಂತೆ ತಕ್ಷಣ ನಗರಸಭೆ ಜೆಸಿಬಿ ವಾಹನ ತರಿಸಿ ಜಾಕ್ವೆಲ್ನ ಮುಂಚಿನ ರಂಧ್ರಗಳಿಗಿಂತ ಎರಡು ಅಡಿ ಕೆಳಭಾಗದಲ್ಲಿ ಹೊಸದಾಗಿ 2-3 ಅಡಿ ವ್ಯಾಸದ ರಂಧ್ರ ಕೊರೆಸಿದರು. ಕ್ಷಣಮಾತ್ರದಲ್ಲಿ ನದಿ ನೀರು ರಭಸವಾಗಿ ಜಾಕ್ ವೆಲ್ನೊಳಗೆ ಪುಟಿಯತೊಡಗಿತು. ಕೆಲ ಹೊತ್ತಿನಲ್ಲಿ ಮೋಟರ್ ಪಂಪ್ ಗಳು ನೀರೆತ್ತತೊಡಗಿದ್ದು, ಗುರುವಾರದಿಂದ ಮತ್ತೆ ನಗರದ ನೀರು ಪೂರೈಕೆ ಸುಗಮವಾಗಲಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಆಶಾ, ಕಳೆದ ಶನಿವಾರದಿಂದಲೇ ನೀರೆತ್ತುವುದು ಸ್ಥಗಿತಗೊಂಡಿದ್ದು, ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ವಿದ್ಯುತ್ ವ್ಯತ್ಯಯದ ನೆಪ ಹೇಳುತ್ತಿದ್ದರು. ಇಂಜಿನಿಯರ್ಗಳು ನದಿಯಲ್ಲಿ ನೀರಿಲ್ಲ ಎಂದಿದ್ದರು.
ಸ್ಥಳಕ್ಕೆ ಬಂದು ನೋಡಿದರೆ ಯಥೇತ್ಛ ನೀರು ಹರಿಯುತ್ತಿದ್ದರೂ ಜಾಕ್ವೆಲ್ ಸಿಗದ ಸಿ ಕಾರಣ ಕೆಳಗಡೆ ಹೊಸ ರಂಧ್ರ ಕೊರೆಸಲು ಸೂಚಿಸಿದೆ ಎಂದರು. ನಗರಸಭೆ ಸದಸ್ಯ ಸಿಗ್ಬತ್ ಉಲ್ಲಾ ಮಾತನಾಡಿ, 13 ವರ್ಷಗಳ ಹಿಂದೆ ಜಾಕ್ವೆಲ್ ನಿರ್ಮಿಸಿದ್ದು, ನೀರಿನ ಸೆಳವಿಗೆ ಮಣ್ಣು ಕೊಚ್ಚಿ ಹೋಗಿ ನದಿ ಆಳ ಹೆಚ್ಚಾಗಿರುವುದರಿಂದ ಜಾಕ್ವೆಲ್ ರಂಧ್ರಗಳು ಹರಿಯುವ ನೀರಿಗೆ ಸಿಗುತ್ತಿರಲಿಲ್ಲ.
ಅಧಿಕಾರಿಗಳು ಕೂಡಲೇ ಜಾಕ್ವೆಲ್ ಹೂಳು ತೆಗೆಸಬೇಕು. ಕಳೆದ 6 ತಿಂಗಳಿಂದ ಗ್ಯಾರೇಜ್ನಲ್ಲಿ ಬಿಟ್ಟಿರುವ ನಗರಸಭೆ ಜೆಸಿಬಿ ದುರಸ್ತಿಪಡಿಸಿ, ಖಾಸಗಿ ವಾಹನಕ್ಕೆ ಪಾವತಿಸುವ ಸಾರ್ವಜನಿಕ ಹಣ ಪೋಲು ಮಾಡುವುದನ್ನು ನಿಲ್ಲಿಸಬೇಕು ಎಂದರು. ಈ ಕುರಿತು ಏ.13ರಂದು “ನದಿಯಲ್ಲಿ ನೀರಿದ್ದರೂ ಜನತೆಗೆ ಲಭ್ಯವಿಲ್ಲ’ ಎಂಬ ಶೀರ್ಷಿಕೆಯಡಿ ಉದಯವಾಣಿ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.