ಬೆಂಗಳೂರಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಯೋಜನೆ: ಶಶಿಕಲಾ
Team Udayavani, Jun 1, 2017, 3:41 PM IST
ಹುಬ್ಬಳ್ಳಿ: ರಾಜ್ಯದಲ್ಲಿನ ಸಾಂಬಾರು ಪದಾರ್ಥಗಳ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಿಂದ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಯೋಜಿಸಲಾಗಿದೆ. ಅದಕ್ಕಾಗಿ 1.10ಕೋಟಿ ರೂ. ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಸಾಂಬಾರು ಪದಾರ್ಥಗಳನ್ನು ಬೆಳೆಯಲಾಗುತ್ತಿದ್ದರೂ ಹೊರ ರಾಜ್ಯದವರು ಅದನ್ನು ಖರೀದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಹಾಗೂ ನಮ್ಮ ರೈತರು, ಬೆಳೆಗಾರರು ಬೆಳೆದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮಂಡಳಿ ಮುಂದಾಗಿದೆ.
ಮಂಡಳಿಯ ಪ್ರಸ್ತಾವನೆಗೆ ಸರಕಾರ ಸ್ಪಂದಿಸಿದೆ ಎಂದರು. ಜೂನ್ 1ರಂದು ಕುಂದಗೋಳದಲ್ಲಿ ರೈತ ಉತ್ಪಾದಕ ಸಂಘದ ಸದಸ್ಯರಿಗೆ ಮೆಣಸಿನಕಾಯಿ ಬೀಜ ಉಚಿತವಾಗಿ ವಿತರಿಸಲಾಗುವುದು. ಸಂಘದಲ್ಲಿ 611 ಸದಸ್ಯರು ಹೆಸರು ನೋಂದಾಯಿಸಿದ್ದು, ಪ್ರತಿಯೊಬ್ಬರಿಗೆ ಅರ್ಧ ಕೆಜಿಯಂತೆ ಎಲ್ಲರಿಗೂ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೀಜ ವಿತರಿಸಲಾಗುವುದು.
20ರಂದು ಹಿರೇಕೆರೂರಿನಲ್ಲಿ ರೈತರ ಸಮಾವೇಶ ಆಯೋಜಿಸಲಾಗುವುದು. ಸಮಾವೇಶದಲ್ಲಿ ರೈತರಿಗೆ ಕೃಷಿ ಉತ್ಪನ್ನಗಳ ಬೆಳೆಗಳ ಬಗ್ಗೆ, ನಾಟಿ ಮಾಡುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಕುಂದಗೋಳದಲ್ಲಿ ಮೆಣಸಿನಕಾಯಿ ಸಂಸ್ಕರಣಾ ಘಟಕ ಆರಂಭಿಸಲಾಗುವುದು. ಅದರ ಪ್ರಕ್ರಿಯೆ ನಡೆದಿದೆ.
ಮೆಣಸಿನಕಾಯಿ ಬೆಳೆಯುವ ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾವಾರು ಮೆಣಸಿನಕಾಯಿ ಮೇಳ ಆಯೋಜಿಸಲು ಯೋಜಿಸಲಾಗಿದೆ ಎಂದರು. ಮಂಡಳಿಯು 2016-17ನೇ ಸಾಲಿನಲ್ಲಿ ಒಣಮೆಣಸಿನಕಾಯಿ ಮಿನಿ ಕಿಟ್ ಯೋಜನೆಯಡಿ 1000 ಫಲಾನುಭವಿ ರೈತರಿಗೆ ಮಿನಿ ಕಿಟ್ ವಿತರಿಸಲಾಗಿದೆ.
ಕೋಯ್ಲೋತ್ತರ ಯೋಜನೆಯಡಿ 100 ರೈತ ಫಲಾನುಭವಿಗಳಿಗೆ ತಾಡುಪಾಲು ವಿತರಿಸಲಾಗಿದೆ. ಯಾಂತ್ರೀಕರಣ ಯೋಜನೆಯಡಿ 51 ಸಾಂಬಾರು ಬೆಳೆ ರೈತ ಸಂಘಟನೆಗಳಿಗೆ ಸಹಾಯಧನ ವಿತರಿಸಲಾಗಿದೆ. ಸಂಸ್ಕರಣಾ ಘಟಕ ಯೋಜನೆಯಡಿ 15 ಸಾಂಬಾರು ಸಂಸ್ಕರಣಾ ಘಟಕಗಳಿಗೆ ಸಹಾಯಧನ ವಿತರಿಸಲಾಗಿದೆ ಎಂದರು.
2017-18ನೇ ಸಾಲಿನಲ್ಲಿ 2000 ರೈತರಿಗೆ ಒಣಮೆಣಸಿನಕಾಯಿ ಬೀಜಗಳನ್ನು ಪ್ರತಿಯೊಬ್ಬರಿಗೆ ಅರ್ಧ ಕೆಜಿಯಂತೆ ವಿತರಿಸಲಾಗುತ್ತಿದೆ. 2000 ತಾಡುಪಾಲುಗಳನ್ನು ರೈತರಿಗೆ ವಿತರಿಸಲಾಗುವುದು. ಯಾಂತ್ರೀಕರಣ ಯೋಜನೆಯಡಿ ಸಹಾಯಧನಕ್ಕಾಗಿ ವಿವಿಧ ಜಿಲ್ಲೆಗಳಿಂದ ಮಂಡಳಿಗೆ 81 ಸಾಂಬಾರು ಬೆಳೆ ರೈತರು ಅರ್ಜಿ ಸಲ್ಲಿಸಿದ್ದು, ಇನ್ನು ಹೆಚ್ಚಿನ ರೈತರಿಗೆ ಸಹಾಯಧನ ಒದಗಿಸಲಾಗುವುದು.
ಸಾಂಬಾರು ಬೆಳೆಯುವ ಅನೇಕ ರೈತರು ಸಾಂಬಾರ ಬೆಳೆ ಸಂಸ್ಕರಣೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಯೋಜನೆಯಡಿ ರೈತರಿಗೆ ಗರಿಷ್ಠ 10ಲಕ್ಷ ರೂ. ಸಹಾಯಧನ ಒದಗಿಸಲಾಗುತ್ತಿದೆ ಎಂದರು. ಕೋಯ್ಲೋತ್ತರ ಯೋಜನೆಯಡಿ ಸಾಂಬಾರು ಬೆಳೆ ಒಣಗಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ತಾಡುಪಾಲುಗಳ ವಿತರಣೆ, ಯಾಂತ್ರೀಕರಣ ಯೋಜನೆಯಡಿ
-ಸಾಂಬಾರು ಬೆಳೆಗೆ ಬೇಕಾಗುವ ಯಂತ್ರೋಪಕರಣಗಳಿಗೆ ಸಹಾಯಧನ, ಒಣಮೆಣಸಿನಕಾಯಿ ಬೀಜಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಂಡಳಿಯ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ 78 ಕೋಟಿ ರೂ. ಮಂಜೂರು ಮಾಡುವಂತೆ ಕೋರಲಾಗಿದೆ. ಕೇಂದ್ರದ ಕೃಷಿ ಇಲಾಖೆ ಮನವಿಗೆ ಸ್ಪಂದಿಸಿ ಬಜೆಟ್‌ನಲ್ಲಿ 58 ಕೋಟಿ ರೂ. ಮೀಸಲಿಟ್ಟಿದೆ.
ಇಲಾಖೆಯ ಆಯುಕ್ತರಿಂದ ಆ ಹಣ ಬಿಡುಗಡೆಯಾಗುವುದು ಬಾಕಿ ಉಳಿದಿದೆ. ಮಂಡಳಿಯಲ್ಲಿ 7500 ಫಲಾನುಭವಿಗಳಿದ್ದಾರೆ. ರಾಜ್ಯ ಸರಕಾರ 3 ಕೋಟಿ ರೂ. ನೀಡಿದೆ. ಆ ಹಣವನ್ನು 3ಸಾವಿರ ಫಲಾನುಭವಿಗಳಿಗೆ ಹಂಚಲಾಗುವುದು. ಈ ವರ್ಷ 8ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕೆಂದು ಸರಕಾರಕ್ಕೆ ಕೋರಲಾಗಿದೆ ಎಂದರು. ಮಂಡಳಿ ಸದ್ಯ ಬಾಡಿಕೆ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸ್ವಂತ ಕಟ್ಟಡ ಹೊಂದುವ ಸಲುವಾಗಿ ಎಪಿಎಂಸಿಯಲ್ಲಿ ನಾಲ್ಕು ಎಕರೆ ಜಾಗ ಗುರುತಿಸಲಾಗಿದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಮಂಜೂರಾತಿ ಪಡೆದು, ಶೀಘ್ರ ಮಂಡಳಿಯ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಂಡಳಿಯ ಅಧಿಕಾರ ವಹಿಸಿಕೊಂಡ ಏಳು ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್ ಅಳವಡಿಸಲಾಗಿದೆ ಎಂದರು. ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಚ್. ಆರ್. ನಾಯ್ಕ, ಕೆಸಿಸಿಐ ಮಾಜಿ ಅಧ್ಯಕ್ಷ ವಸಂತ ಲದವಾ, ಪದ್ಮಾ ಪ್ರಕಾಶ, ಜ್ಯೋತಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.