ಅಮಾನವೀಯ.:ಸ್ಟ್ರೆಚರ್ ಸಿಗದೆ ರೋಗಿಯನ್ನು ನೆಲದಲ್ಲೇ ಎಳೆದೊಯ್ದ ಪತ್ನಿ
Team Udayavani, Jun 2, 2017, 10:30 AM IST
ಶಿವಮೊಗ್ಗ: ಮಾನವೀಯತೆ ಮರೆತ ಇನ್ನೊಂದು ನಾಚಿಕೆಗೇಡಿನ ಘಟನೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದ್ದು, ತೀವ್ರ ಅನಾರೋಗ್ಯಕ್ಕೀಡಾದ ವೃದ್ಧ ಪತಿಯನ್ನು ಸಾಗಿಸಲು ಸ್ಟ್ರೆಚರ್ ಸಿಗದೆ ನೆಲದಲ್ಲೇ ಎಳೆದೊಯ್ದ ಘಟನೆ 3 ದಿನಗಳ ಹಿಂದೆ ನಡೆದಿದ್ದು ತಡವಾಗಿ ಇದೀಗ ವಿಡಿಯೋ ಸಮೇತ ಬಹಿರಂಗವಾಗಿದೆ.
9 ದಿನಗಳ ಹಿಂದೆ ಅಸ್ತಮಾ ಮತ್ತು ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಮೀರ್ ಸಾಬ್ ಎನ್ನುವ ವ್ಯಕ್ತಿಗೆ ವೈದ್ಯರು ಎಕ್ಸ್ರೇ ನಡೆಸಲು ಬರೆದಿದ್ದರು. ಎಕ್ಸ್ರೇ ಮಾಡಿಸುವಲ್ಲಿ ಸಾಗಿಸಲು ಸಿಬಂದಿಗಳ ನೆರವು ಕೇಳಿದಾಗ ಯಾರೊಬ್ಬರು ನೆರವು ನೀಡಲಲ್ಲ ಎಂದು ಪತ್ನಿ ಫಾಮಿದಾ ಹತಾಶರಾಗಿ ಬೇರೆ ದಾರಿ ಕಾಣದೆ ಪತಿ ಅಮೀರ್ರನ್ನು ನೇಲದ ಮೇಲೆ ಹಾಕಿ ದರದರನೆ ಎಳೆದೊಯ್ದಿದ್ದಾರೆ.
ಅಸಾಹಾಯಕವಾಗಿ ಎಳೆದೊಯ್ಯುವಾಗಲು ಯಾವೋಬ್ಬ ಸಿಬಂದಿಯೂ ನೆರವಿಗೆ ಬಂದಿಲ್ಲ ಎನ್ನಲಾಗಿದ್ದು, ಕೊನೆಯಲ್ಲಿ ಅಸ್ಪತ್ರೆಯಲ್ಲಿದ್ದವರು ನೆರವಿಗೆ ಬಂದಿದ್ದಾರೆ ಎಂದು ಫಾಮಿದಾ ಹೇಳಿದ್ದಾರೆ.
ಆಸ್ಪತ್ರೆಯ ಸಿಬಂದಿಗಳು ಬೇಜವಾಬ್ದಾರಿತನ ತೋರುತ್ತಾರೆ,ಯಾರಿಗೂ ಸ್ಪಂದಿಸುವುದಿಲ್ಲ. ಸಹಾಯಕ್ಕೆ ನೆರವಾಗುವುದಿಲ್ಲ ಎಂದು ಮಾಧ್ಯಮಗಳಲ್ಲಿ ಹಲವರು ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ವತಿಯಿಂದ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಲಾಗಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಇದು ನಾಚಿಕೆಗೇಡಿನ ಸಂಗತಿ ಯಾಗಿದ್ದು, ಈ ಬಗ್ಗೆ ವರದಿ ಪಡೆಯುತ್ತೇನೆ ಎಂದಿದ್ದಾರೆ.
ಆಸ್ಪತ್ರೆಯ ಸಿಬಂದಿಗಳು ಮತ್ತು ವೈದ್ಯಾಧಿಕಾರಿಗಳು ನಾವು ಸೂಕ್ತ ಸ್ಪಂದನೆ ನೀಡಿದ್ದು ಆಕೆಯೇ ಎಳೆದೊಯ್ದಿದ್ದಾರೆ ಎಂದಿದ್ದಾರೆ.
ಈ ಘಟನೆಯನ್ನು ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರಿಂದ ಆಸ್ಪತ್ರೆಯಲ್ಲಿನ ಇನ್ನಷ್ಟು ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ.
ಮೂವರ ಅಮಾನತು
ಘಟನೆಗೆ ಸಂಬಂಧಿಸಿ ಮೂವರು ಸಿಬಂದಿಗಳನ್ನು ಅಮಾನತು ಮಾಡಿ ಆಸ್ಪತ್ರೆಯ ಡೀನ್ ಡಾ. ಸುಶೀಲ್ಕುಮಾರ್ ಆದೇಶ ನೀಡಿದ್ದಾರೆ. ಸ್ಟಾಫ್ ನರ್ಸ್ಗಳಾದ ಜ್ಯೋತಿ, ಚೈತ್ರಾ ಮತ್ತು ಗ್ರೂಪ್ ಡಿ ನೌಕರೆ ಸುವರ್ಣಮ್ಮ ಅವರು ಅಮಾನತಾದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.