ಜಿಡಿಪಿ ಇಳಿಕೆಗೆ ನೋಟು ರದ್ದು ಕಾರಣ!
Team Udayavani, Jun 3, 2017, 3:45 AM IST
ಬೀಜಿಂಗ್: ಭಾರತದ ಜಿಡಿಪಿ ದರ ಶೇ.6.1ಕ್ಕೆ ಇಳಿಕೆ ಬಗ್ಗೆ ನೋಟು ರದ್ಧತಿಯೇ ಕಾರಣ ಎಂದು ಚೀನಾದ ಪತ್ರಿಕೆಯೊಂದು ಹೇಳಿದೆ.
ಮೊನ್ನೆಯಷ್ಟೇ ನಾಲ್ಕನೇ ತ್ತೈಮಾಸಿಕದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ನಿರೀಕ್ಷಿತ ಶೇ.7.1ರ ಬದಲಾಗಿ ಶೇ.6.1 ದಾಖಲಾಗಿದ್ದಾಗಿ ಹೇಳಲಾಗಿತ್ತು. ಇದರಿಂದ ಪರೋಕ್ಷವಾಗಿ ಚೀನಾ ಆರ್ಥಿಕತೆಯನ್ನು ಹಿಂದಿಕ್ಕುವ ಭಾರತದ ಯತ್ನಕ್ಕೆ ಸೋಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟು ಅಮಾನ್ಯವು ಜಿಡಿಪಿ ಮೇಲೆ ಬೀರಿದ ಪರಿಣಾಮದಿಂದ ಚೀನಾವೇ ಮುಂಚೂಣಿಯಲ್ಲಿರುವಂತೆ ಮಾಡಿದೆ. ಈ ಇಳಿಕೆ ಅತ್ಯಾಶ್ಚರ್ಯಕರವಾಗಿದ್ದು, ಪ್ರಧಾನಿ ಮೋದಿ ಅವರ ಅಪನಗದೀಕರಣದಂತಹ ಹಲವು ಸುಧಾರಣಾ ನೀತಿಯ ಫಲವಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಲೇವಡಿ ಮಾಡಿದೆ. ಅಲ್ಲದೇ ಭಾರತ ಚೀನಾ ಆರ್ಥಿಕತೆ ಆನೆ-ಡ್ರ್ಯಾಗನ್ ಹೋರಾಟದಂತಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿ ಆನೆ ಸೋತಿದೆ ಎಂದು ಅದು ಬಣ್ಣಿಸಿದೆ.
ಅಲ್ಲದೇ ಭಾರತ ಮಹತ್ವಾಕಾಂಕ್ಷೆಯ ಸುಧಾರಣೆಗಳನ್ನು ಮಾಡುವ ಮೊದಲು ಆರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಬೇಕಿದೆ. ಅಪನಗದೀಕರಣ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿದ್ದು ಈಗ ಗೋಚರವಾಗಿದೆ’ ಎಂದು ಅದು ಬೋಧನೆ ಮಾಡಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.8ಕ್ಕೆ ತಲುಪಲಿದೆ. ಶೇ.6.1ರ ದರ ಸಮಸ್ಥಾಯಿತ್ವದ್ದು. ವರ್ಷಾಂತ್ಯಕ್ಕೆ ಇದು ಶೇ.7.5ರಷ್ಟಾಗಲಿದ್ದು, ಮೋದಿ ಸರ್ಕಾರದ ಅವಧಿ ಮುಕ್ತಾಯದ ವೇಳೆ ಶೇ.8ರಷ್ಟಕ್ಕೆ ತಲುಪಲಿದೆ. ಚೀನಾ ಜಿಡಿಪಿ ದರವೇನೂ ಭಾರೀ ಮುಂದೆ ಹೋಗಿಲ್ಲ. ಅದು ಶೇ.6.9ರಷ್ಟಿದೆ.
– ಅರವಿಂದ ಪನಗಾರಿಯಾ,
ನೀತಿ ಆಯೋಗದ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.