ಚಿಕ್ಕರಾಯಪ್ಪ ಅಮಾನತುಆದೇಶ ರದ್ದು?
Team Udayavani, Jun 3, 2017, 11:16 AM IST
ಬೆಂಗಳೂರು: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದು ಪಡಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನೋಟು ಅಪಮೌಲ್ಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ.30ರಂದು ಚಿಕ್ಕರಾಯಪ್ಪ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು.ಈ ವೇಳೆ ಅಕ್ರಮ ಹಣ ಸಂಗ್ರಹವನ್ನು ಪತ್ತೆ ಹಚ್ಚಿದ್ದರು. ಇದು ಸಾಕಷ್ಟು ಚರ್ಚೆಗೆ ಒಳಗಾಗಿ ಕಟು ಟೀಕೆ ವ್ಯಕ್ತವಾದಾಗ ಸರ್ಕಾರ ಚಿಕ್ಕರಾಯಪ್ಪ ಅವರ ವಿರುದ್ಧ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿತ್ತು.
ಸರ್ಕಾರದ ನಿಯಮಾವಳಿ ಪ್ರಕಾರ ನೌಕರರ ಅಮಾನತು ಆದೇಶ 6 ತಿಂಗಳಿಗೆ ಸೀಮೀತವಾಗಿರುತ್ತದೆ. ಅಷ್ಟರೊಳಗೆ ವಿಚಾರಣೆ ನಡೆಸಿ ವರದಿ ನೀಡಬೇಕು. ನಿಗದಿತ ಸಮಯದಲ್ಲಿ ವರದಿ ನೀಡಲು ವಿಫಲವಾದಲ್ಲಿ ಸಹಜವಾಗಿಯೇ ಅಮಾನತು ಆದೇಶ ರದ್ದಾಗುತ್ತದೆ. ಚಿಕ್ಕರಾಯಪ್ಪ ಪ್ರಕರಣದಲ್ಲಿ ಸಹ ಸರ್ಕಾರ ಅವರನ್ನು ಅಮಾನತು ಮಾಡಿ ಆರು ತಿಂಗಳು ಆಗಿದ್ದರಿಂದ ಅವರ ಅಮಾನತು ಆದೇಶ ತೆರವುಗೊಂಡಿದೆ ಎಂದು ಹೇಳಲಾಗಿದೆ. ತಮ್ಮ ಮೇಲೆ ಯಾವುದೇ ಗುರುತರ ಆರೋಪಗಳನ್ನು ಸಾಬೀತು ಪಡಿಸಲು ತನಿಖಾ ಸಂಸ್ಥೆಗಳು ವಿಫಲವಾದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ರದ್ದು ಪಡಿಸಬೇಕೆಂದು ಚಿಕ್ಕರಾಯಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.