ಗಡುವು ಮುಗಿದಿದೆ, ಹಣ ಕೊಡದಿದ್ದರೆ ದಾಳಿ ಖಚಿತ
Team Udayavani, Jun 3, 2017, 12:48 PM IST
ಬೆಂಗಳೂರು: ತಿಂಗಳ ಹಿಂದಷ್ಟೇ 500 ಕೋಟಿ ಹಣದ ಬೇಡಿಕೆಯೊಂದಿಗೆ ವಿಪ್ರೋ ಕಂಪೆನಿಗೆ ಇ-ಮೇಲ್ ರವಾನಿಸಿ “ಬಯೋ ಬಾಂಬ್’ ಸ್ಫೋಟ ಮಾಡುವುದಾಗಿ ಬೆದರಿಸಿದ್ದ ದುಷ್ಕರ್ಮಿಳು ಈಗ ಮತ್ತೆ ಸಂದೇಶ ನೀಡಿದ್ದಾರೆ. “ಹಣ ನೀಡಲು ನಿಮಗೆ ನಾವು ಕೊಟ್ಟಿದ್ದ ಗಡುವು ಮುಗಿದಿದೆ. ಆದರೂ, ಇನ್ನು ಏಳು ದಿನ ಸಮಯ ನೀಡುತ್ತೇವೆ. ಅಷ್ಟರೊಳಗೆ 500 ಕೋಟಿ ರೂ.ಗಳನ್ನು ನಮ್ಮ ಖಾತೆಗೆ ಜಮೆ ಮಾಡಿ ಇಲ್ಲವೇ ದಾಳಿಗೆ ಸಿದ್ಧರಾಗಿ,’ ಎಂದು ಎಚ್ಚರಿಸಿದ್ದಾರೆ.
ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬೆಳ್ಳಂದೂರು ಠಾಣೆ ಪೊಲೀಸರು ಸೈಬರ್ ಪೊಲೀಸರ ನೆರವು ಪಡೆದು, ಈ ಮೇಲ್ ಎಲ್ಲಿಂದ ಬಂದದ್ದು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಬಂದಿದ್ದ ಮೇಲ್ ಮತ್ತು ಸದ್ಯ ಈಗ ಬಂದಿರುವ ಮೇಲ್ ಎರಡೂ ಸ್ವಿಜರ್‌ಲ್ಯಾಂಡ್‌ನಿಂದ ಬಂದಿವೆ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಇದರ ಜಾಡು ಹಿಡಿದು ಹೊರಟಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇ-ಮೇಲ್‌ನಲ್ಲಿ ಬಂದಿರುವ ಬೆದರಿಕೆ ಪತ್ರಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಕಂಪೆನಿಯ ಹಾಲಿ ಅಥವಾ ಮಾಜಿ ಉದ್ಯೋಗಿಗಳೇ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಆದರೆ, ಇ-ಮೇಲ್‌ನ ಐಪಿ ವಿಳಾಸ ಸ್ವಿಜರ್‌ಲ್ಯಾಂಡ್ ತೋರಿಸುತ್ತಿದೆ. ಈ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳು ಕಳುಹಿಸಿರುವ ಸಂದೇಶದಲ್ಲಿ “ಹಣ ಕಳುಹಿಸಲು ನಾವು ನೀಡಿದ ಗಡುವು ಮುಗಿದಿದೆ. ಆದರೂ ಹಣ ಜಮೆ ಮಾಡಲು ಹಿಂದೇಟು ಹಾಕುತ್ತಿದ್ದೀರಿ ಎಂದರೆ ನಮ್ಮ ಮಾತುಗಳನ್ನು ನೀವು ಗಂಭೀರವಾಗಿ ಪರಿಗಣಿಸಿಲ್ಲ ಎಂದರ್ಥ. ಇನ್ನು ಒಂದು ವಾರ ಕಾಲವಕಾಶ ಕೊಡುತ್ತೇವೆ. ಅಷ್ಟರಲ್ಲಿ ಹಣ ಕಳುಹಿಸದಿದ್ದರೆ ದಾಳಿ ನಡೆಸುವುದು ಖಚಿತ. ಎಲ್ಲರೂ ದಾಳಿಗೆ ಸಿದ್ಧರಾಗಿ,’ ಎಂದು ಎಂದು ಉಲ್ಲೇಖೀಸಿದ್ದಾರೆ.
ವಿಪ್ರೋಗೆ ಹೋಗುವ ಪ್ರತಿ ಪಾರ್ಸೆಲ್‌ಗಳೂ ಪರಿಶೀಲನೆ: ಮೇ .5ರಂದು ಕಂಪನಿಗೆ ಸಂದೇಶ ರವಾನಿಸಿದ್ದ ದುಷ್ಕರ್ಮಿಗಳು 500 ಕೋಟಿ ರೂ.ಗಳನ್ನು ಬಿಟ್‌ಕಾಯಿನ್ ಮೂಲಕ ನೀಡಬೇಕು. ಹಣ ನೀಡದಿದ್ದರೆ ಸರ್ಜಾಪುರದಲ್ಲಿರುವ ವಿಪ್ರೋ ಕಂಪನಿಯ ಮೇಲೆ ರಿಸಿನ್ ಎಂಬ ಜೈವಿಕ ವಿಷಕಾರಿ ತೈಲವನು °ಕ್ಯಾಂಟೀನ್ ಊಟದಲ್ಲಿ, ಟಾಯ್ಲೆಟ್ ಸೀಟ್ ಹಾಗೂ ಟಾಯ್ಲೆಟ್ ಪೇಪರ್‌ಗಳಿಗೂ ಅಂಟಿಸಲಾಗುತ್ತದೆ. ಅನುಮಾನವಿದ್ದರೆ 2 ಗ್ರಾಂ ತೈಲವನ್ನು ಕಚೇರಿಗೆ ಪಾರ್ಸಲ್ ಕಳುಹಿಸುತ್ತೇವೆ ಎಂದು ಮೇಲ್ ಕಳುಹಿಸಲಾಗಿತ್ತು. ಈ ಬೆದರಿಕೆಯ ಕಾರಣದಿಂದ ವಿಪ್ರೋ ಕಚೇರಿಗಳ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಸಂಸ್ಥೆಗೆ ಬರುವ ಪ್ರತಿ ಪಾರ್ಸಲ್‌ಗಳನ್ನು ಪೊಲೀಸರೇ ಪರಿಶೀಲಿಸಿ ಒಳಗಡೆ ಬಿಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.