ಪುಟ್ ಬಾತ್ ಸುಂಕ ವಸೂಲಿ ರದ್ದು ಮಾಡಿದ ಪುರಸಭೆ
Team Udayavani, Jun 3, 2017, 1:12 PM IST
ಎಚ್.ಡಿ.ಕೋಟೆ: ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನ ಪುರಸಭೆ ವ್ಯಾಪ್ತಿಯ ಆಡು-ಕುರಿ, ಕೋಳಿ, ಮೀನಿನ ಮಾಂಸ ಮಾರಾಟ ಮಾಡುವ ಹಕ್ಕುಗಳ ಸಾರ್ವಜನಿಕ ಬಹಿರಂಗ ಹರಾಜು ಪುರಸಭೆ ಆವರಣದಲ್ಲಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಬಹಿರಂಗ ಹರಾಜು ಪಟ್ಟಣದ ನಾಗರಿಕರು, ವ್ಯಾಪಾರಸ್ಥರಲ್ಲಿ ಬೆಳಗ್ಗೆಯಿಂದಲೇ ಬಹಳ ಕುತೂಹಲ ಹೆಚ್ಚಿಸಿತ್ತು, ಅದರೆ ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಾರಂಭವಾಗಿ ಮುಕ್ತಾಯ ಆಗುವವರೆಗೂ ಜನರು ನಿರೀಕ್ಷೆಗೆ ಅಚ್ಚರಿ ಮೂಡಿಸುವಂತಹ ಯಾವ ಬೆಳವಣಿಗೆಗಳು ಕಾಣದೇ ಕಳೆದ ಹಿಂದಿನ ವರ್ಷಗಳಂತೆಯೇ ಈ ಬಾರಿಯೂ ಒಳ ಒಪ್ಪದಂತೆಯೇ ಭಾಗಶಃ ಹರಾಜು ಪ್ರಕ್ರಿಯೆ ಮುಕ್ತಾಂುವಾದಂತೆ ಕಂಡು ಬಂತು.
ಸಂತೆ ಹರಾಜಾಗಲಿಲ್ಲ..? ಪುಟ್ ಬಾತ್ ಇಲ್ಲವೇ ಇಲ್ಲ…!: ಕಳೆದ ಐದಾರೂ ವರ್ಷಗಳ ಹಿಂದೆ 20 ಸಾವಿರದೊಳಗೆ ಹರಾಜಾಗುತ್ತಿದ್ದ ಸಂತೆ ಸುಂಕ ವಸೂಲಿ ಹರಾಜು, ಕಳೆದ ವರ್ಷ 32 ಸಾವಿರ ಮಿರಿತ್ತು, ಆದರೆ ಈ ಬಾರಿಯೂ ಸಂತೆ ಸುಂಕ ವಸೂಲಿ ಹಕ್ಕನ್ನು ಪಡೆಯಲು ಹೆಚ್ಚಿನ ಜನರು ಹರಾಜಿನಲ್ಲಿ ಬೀಡ್‌ನಲ್ಲಿ ಕಾಣಿಸಿಕೊಂಡರು ಕಳೆದ ವರ್ಷದ ಹರಾಜಿನಲ್ಲಿ ಮೊತ್ತವನ್ನು ಬೀಡ್‌ದಾರರು ದಾಟದ ಕಾರಣ ಸಂತೆ ಸುಂಕ ವಸೂಲಿ ಹರಾಜು ಮುಂದೂಡಲಾಯಿತು.
ಇನ್ನು ಕಳೆದ ವರ್ಷ ಸುಮಾರು 42 ಸಾವಿರ ರೂ.ಗೆ ಬೀಡ್ ಅಗುವ ಮೂಲಕ ಪಟ್ಟಣಿಗರು ಆಶ್ಚರ್ಯಪಡುವಂತೆ ಹರಾಜಾಗಿದ್ದ ಪುಟ್‌ಬಾತ್ ಸುಂಕ ವಸೂಲಿಯನ್ನು ಈ ಬಾರಿ ರದ್ದು ಮಾಡಲಾಗಿದೆ. ಕಾರಣ ಪಟ್ಟಣ ವ್ಯಾಪ್ತಿಯ ಅನೇಕ ಪುಟ್‌ಬಾತ್ ವ್ಯಾಪಾರಿಗಳು ದುಬಾರಿ ಅಡ್ವಾನ್ಸ್ ಹಣ ಬಾಡಿಗೆ ತೆತ್ತು ಪಟ್ಟಣದಲ್ಲಿ ಅಂಗಡಿ ನಡೆಸುವವರ ಅಂಗಡಿ ಮುಂಭಾಗವೇ ತಮ್ಮ ಪುಟ್‌ಬಾತ್ ಅಂಗಡಿಗಳನ್ನು ತೆರೆದು ಅವರಿಗೆ ತೊಂದರೆ ಕೊಡುತ್ತಿರುವುದೇ ಮುಖ್ಯ ಕಾರಣ ಎಂದು ವ್ಯಕ್ತವಾಗುತ್ತಿದೆ.
ಈ ವಿಚಾರವಾಗಿ ಕೆಲ ಪುಟ್‌ಬಾತ್ ವ್ಯಾಪಾರಿಗಳನ್ನು ಪ್ರಶ್ನಿಸಿದರೆ ನಾವು ಸುಂಕ ಕಟ್ಟುತ್ತಿಲ್ವಾ ಎಂದು ಉಡಾಫೆಯಾಗಿ ವರ್ತಿಸುತ್ತಿದ್ದರಿಂದ ಮತ್ತು ಸ್ವತ್ಛತೆಗೂ ಪುಟ್‌ಬಾತ್ ವ್ಯಾಪಾರಿಗಳಿಂದ ತೊಂದರೆ ಕಂಡುಬಂದ ಹಿನ್ನೆಲೆ ಪುರಸಭೆಗೆ ಆದಾಯದ ಮೂಲವಾಗಿದ್ದ ಪುಟ್‌ಬಾತ್ ಸುಂಕ ವಸೂಲಿ ಹರಾಜನ್ನೇ ರದ್ದುಪಡಿಸಲಾಗಿದೆ.
ಇನ್ನುಳಿದಂತೆ ವಾಣಿಜ್ಯ ಸಂಕೀರ್ಣಗಳ ಹರಾಜನ್ನು ಮುಂದೂಡಲಾಗಿದ್ದು ನಿಖರ ಕಾರಣ ತಿಳಿದು ಬಂದಿಲ್ಲ, ಆದರೆ ಸರ್ಕಾರ ಈ ವರ್ಷದಿಂದ ಬಾಡಿಗೆಗೆ ಕರಾರಿನ ಅವಧಿಯನ್ನು 11 ತಿಂಗಳಿಗೆ ಬದಲಾಗಿ 12 ವರ್ಷಕ್ಕೆ ಏರಿಸಿರುವುದರಿಂದ ವಾಣಿಜ್ಯ ಸಂಕೀರ್ಣ ಹರಾಜಿನಲ್ಲಿ ದೊಡ್ಡ ಲಾಬಿ ನಡೆಸುವುದಕ್ಕಾಗಿ ಇಲ್ಲಿನ ಕೆಲವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಹಿರಂಗ ಹರಾಜಿನಲ್ಲಿ ಆಡು-ಕುರಿ, ಕೋಳಿ, ಮೀನಿನ ಮಾಂಸ ಮಾರಾಟ ಮಾಡುವ ಹಕ್ಕುಗಳು ಸೇರಿದಂತೆ ಕಲ್ಲುದಿಂಡು (ಕಾಮಗಾರಿ ಸಂದರ್ಭ ವಶಪಡಿಸಿಕೊಂಡ ಸೈಜ್ ಕಲ್ಲುಗಳನ್ನು) ಹರಾಜು ಮಾಡಲಾಯಿತು. ಪುರಸಭೆ ಉಪಾಧ್ಯಕ್ಷೆ ಸುಮಾ ಸಂತೋಷ್, ಸದಸ್ಯರಾದ ಪುಟ್ಟಬಸವನಾಯ್ಕ, ಉಮಾಶಂಕರ್, ಅನ್ಸಾರ್ ಅಹಮದ್, ತೋಟದ ರಾಜಣ್ಣ, ತಾಜ್, ವಿವೇಕ್, ಅನಿಲ್, ಮುಖಂಡರಾದ ಗೋವಿಂದಚಾರಿ, ಚೆಲುವನಾಯ್ಕ, ದಿನೇಶ್, ಮಹೇಶ್, ಲಾಟರಿ ನಾಗರಾಜು, ಅಧಿಕಾರಿಗಳಾದ ಸುರೇಶ್, ತೇಜಸ್ವಿನಿ, ನರಸೀಪುರ ಪರಮೇಶ್, ವೀಣಾ, ವಾಟರ್ ನಾಗನಾಯ್ಕ, ಮಟಕೆರೆ ಕೃಷ್ಣ ಇನ್ನಿತರರು ಇದ್ದರು.
ಆಡು-ಕುರಿ, ಕೋಳಿ, ಮೀನಿನ ಮಾಂಸ ಮಾರಾಟ ಮಾಡುವ ಹಕ್ಕುಗಳ ಪಡೆದಿರುವ ವ್ಯಾಪಾರಸ್ಥರು ಮಾಂಸದ ತ್ಯಾಜ್ಯವನ್ನು ನದಿಗೆ ಅಥವಾ ಹೊರಗೆ ಬಿಸಾಡುವಂತಿಲ್ಲ. ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ಹಾಕಬೇಕು ತಪ್ಪಿದಲ್ಲಿ ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡಲಾಗುವುದು .
-ಹೆಚ್.ಸಿ.ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.