ಲಂಕೆಗೆ ಕಾದಿದೆ ಆಫ್ರಿಕಾ ಟೆಸ್ಟ್
Team Udayavani, Jun 3, 2017, 4:28 PM IST
ಲಂಡನ್: ಈ ಪಂದ್ಯಾವಳಿಯ “ದುರ್ಬಲ ತಂಡ’ವೆಂದೇ ಲೇಬಲ್ ಅಂಟಿಸಿಕೊಂಡಿರುವ ಶ್ರೀಲಂಕಾ ಶನಿವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಎಬಿಡಿ ಸಾರಥ್ಯದ ಪ್ರಬಲ ದಕ್ಷಿಣ ಆಫ್ರಿಕಾ ಲಂಕೆಯ ಎದುರಾಳಿ. ಇದು “ಬಿ’ ವಿಭಾಗದ ಮೊದಲ ಪಂದ್ಯವೂ ಹೌದು.
ವಿಶ್ವದ ನಂಬರ್ ವನ್ ತಂಡವಾಗಿರುವ ದಕ್ಷಿಣ ಆಫ್ರಿಕಾ ಈ ಛಾತಿಗೆ ತಕ್ಕ ಪ್ರದರ್ಶನ ನೀಡುವ ಹುರುಪಿನಲ್ಲಿದೆ. ನಂಬರ್ ವನ್ ಏಕದಿನ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳನ್ನು ಹೊಂದಿರುವ ತಂಡವೂ ಇದಾಗಿದೆ. ಈ ಹೆಗ್ಗಳಿಕೆಗೆ ಪಾತ್ರರಾಗುವವರು ಎಬಿ ಡಿ ವಿಲಿಯರ್ ಮತ್ತು ಕಾಗಿಸೊ ರಬಾಡ. ಐಸಿಸಿ ಟಾಪ್-10 ಬ್ಯಾಟಿಂಗ್ ಹಾಗೂ ಬೌಲಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ ಆಫ್ರಿಕಾದ ಒಟ್ಟು 6 ಮಂದಿ ಕ್ರಿಕೆಟಿಟಿಗರಿದ್ದಾರೆಂಬುದೇ ಪ್ರತಿಷ್ಠೆಯ ಸಂಗತಿ. ಆದರೆ 7ನೇ ರ್‍ಯಾಂಕಿಂಗ್ ತಂಡ ವಾಗಿರುವ ಲಂಕೆಯ ಒಬ್ಬ ಆಟಗಾರ ಕೂಡ ಈ ಪಟ್ಟಿಯಲ್ಲಿಲ್ಲ ಎಂಬುದು ಇತ್ತಂಡಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ಸಾರುತ್ತದೆ.
ಇನ್ನೊಂದೆಡೆ ಶ್ರೀಲಂಕಾ, ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರ ಗಾಯದ ಚಿಂತೆಯಲ್ಲಿದೆ. ಮ್ಯಾಥ್ಯೂಸ್ ಸೇವೆ ಈ ಪಂದ್ಯಕ್ಕೆ ಲಭ್ಯವಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಕಸ್ಮಾತ್ ಅವರು ಆಡದೇ ಹೋದರೆ ಉಪ ನಾಯಕ ಉಪುಲ್ ತರಂಗ ತಂಡವನ್ನು ಮುನ್ನಡೆಸಲಿದ್ದಾರೆ.
ಇಲ್ಲಿ “ಚೋಕರ್’ ಅಲ್ಲ !
ಬಲಾಬಲದ ಲೆಕ್ಕಾಚಾರದಲ್ಲಿ ಲಂಕೆಗಿಂತ ಎಬಿಡಿ ಪಡೆಯೇ ಬಹಳ ಮೇಲಿದೆ. ಅಷ್ಟೇ ಅಲ್ಲ, ಕಳೆದ ಜನವರಿಯಲ್ಲಿ ತನ್ನಲ್ಲಿಗೆ ಬಂದ ಶ್ರೀಲಂಕಾಕ್ಕೆ ಏಕದಿನ ಸರಣಿಯಲ್ಲಿ 5-0 ವೈಟ್‌ವಾಶ್ ಮಾಡಿದ ಹೆಗ್ಗಳಿಕೆ ಕೂಡ ದಕ್ಷಿಣ ಆಫ್ರಿಕಾದ್ದಾಗಿದೆ. ಹರಿಣಗಳ ಪಡೆ ಪ್ರವಾಸಿ ಆಸ್ಟ್ರೇಲಿಯ ವಿರುದ್ಧವೂ 5-0 ಕ್ಲೀನ್‌ಸಿÌàಪ್ ಸಾಧಿಸಿತ್ತೆಂಬುದನ್ನು ಮರೆಯುವಂತಿಲ್ಲ. ಆದರೆ “ಚಾಂಪಿಯನ್ಸ್ ಟ್ರೋಫಿ’ಗೂ ಕೆಲವೇ ದಿನಗಳ ಹಿಂದೆ ನಡೆದ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯನ್ನು ಎಬಿಡಿ ಪಡೆ 1-2 ಅಂತರದಿಂದ ಕಳೆದುಕೊಂಡಿತ್ತು. ದ್ವಿತೀಯ ಪಂದ್ಯದಲ್ಲಂತೂ ಮಿಲ್ಲರ್-ಮಾರಿಸ್ ಕ್ರೀಸಿನಲ್ಲಿದ್ದೂ ಅಂತಿಮ ಓವರಿನಲ್ಲಿ 7 ರನ್ ಗಳಿಸಲಾಗದೆ ಸೋತುಹೋಗಿತ್ತು. ನಿರ್ಣಾ ಯಕ ಘಟ್ಟದಲ್ಲಿ ಇಂಥ ಅನಿರೀಕ್ಷಿತ ಎಡವಟ್ಟು ಗಳನ್ನು ಮಾಡುವುದು ದಕ್ಷಿಣ ಆಫ್ರಿಕಾದ ಜಾಯಮಾನ. ಹೀಗಾಗಿ ಅದು “ಚೋಕರ್’ ಎಂಬ ಹಣೆಪಟ್ಟಿಯಿಂದ ಮುಕ್ತವಾಗಿಲ್ಲ.
ಆದರೆ ಚಾಂಪಿಯನ್ಸ್ ಟ್ರೋಫಿ ಕೂಟ ದಲ್ಲಿ ದಕ್ಷಿಣ ಆಫ್ರಿಕಾ ಈ ಅಪವಾದ ಹೊತ್ತಿಲ್ಲ ಎಂಬುದು ಉಲ್ಲೇಖನೀಯ. 1988ರ ಮೊದಲ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದೇ ದಕ್ಷಿಣ ಆಫ್ರಿಕಾ ಎಂಬುದನ್ನು ಮರೆಯುವಂತಿಲ್ಲ. ಆಗ ಇದು “ಐಸಿಸಿ ನಾಕೌಟ್ ಟೂರ್ನಮೆಂಟ್’ ಆಗಿತ್ತು. ವಿಜೇತ ತಂಡದ ನಾಯಕರಾಗಿದ್ದವರು ಹ್ಯಾನ್ಸಿ ಕ್ರೋನಿಯೆ. ಇದು ದಕ್ಷಿಣ ಆಫ್ರಿಕಾ ಜಯಿಸಿದ ಏಕೈಕ ಐಸಿಸಿ ಟ್ರೋಫಿ ಆಗಿದೆ.
ದಕ್ಷಿಣ ಆಫ್ರಿಕಾ ಸಾಕಷ್ಟು ಮಂದಿ “ವನ್‌ಡೇ ಸ್ಪೆಷಲಿಸ್ಟ್’ ಆಟಗಾರರನ್ನು ಹೊಂದಿರುವ ತಂಡ. ಬ್ಯಾಟಿಂಗ್ ವಿಭಾಗದಲ್ಲಿ ಆಮ್ಲ, ಡಿ ಕಾಕ್, ಡಿ ವಿಲಿಯರ್, ಮಿಲ್ಲರ್, ಡು ಪ್ಲೆಸಿಸ್, ಡ್ಯುಮಿನಿ; ಆಲ್‌ರೌಂಡರ್‌ಗಳಾದ ಮಾರಿಸ್, ಬೆಹದೀìನ್ ಅವರನ್ನು ಒಳಗೊಂಡಿದೆ. ಇವರು ನೈಜ ಆಟವಾಡಿದರೆ ಎದುರಾಳಿಗೆ ಕಂಟಕ ತಪ್ಪಿದ್ದಲ್ಲ.
ಹರಿಣಗಳ ಬೌಲಿಂಗ್ ಕೂಡ ವೈವಿಧ್ಯಮಯ. ರಬಾಡ, ಪಾರ್ನೆಲ್, ಫೆಲುಕ್ವಾಯೊ, ಮಾರ್ಕೆಲ್ ವೇಗದ ವಿಭಾಗ ನೋಡಿಕೊಂಡರೆ, ಸ್ಪಿನ್ನಿಗೆ ತಾಹಿರ್ ಮತ್ತು ಮಹಾರಾಜ್ ಇದ್ದಾರೆ.
ಸಂಕಟದಲ್ಲಿದೆ ಶ್ರೀಲಂಕಾ
ದೊಡ್ಡ ದೊಡ್ಡ ಸ್ಟಾರ್ ಆಟಗಾರರೆಲ್ಲ ನೇಪಥ್ಯಕ್ಕೆ ಸರಿದ ಬಳಿಕ ಇನ್ನೂ ಸಮರ್ಥ ತಂಡವೊಂದನ್ನು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿ ರುವ ತಂಡ ಶ್ರೀಲಂಕಾ. ಚಾಂಪಿಯನ್ಸ್ ಟ್ರೋಫಿ ಕೂಟಕ್ಕೆ ಬಂದಿಳಿದಿರುವ ತಂಡ ಕೂಡ ಇದಕ್ಕೆ ಹೊರತಲ್ಲ. ಬ್ಯಾಟಿಂಗ್ ಮೇಲೆ ಒಂದಿಷ್ಟು ವಿಶ್ವಾಸ ಇರಿಸಬಹುದಾದರೂ ಬೌಲಿಂಗ್ ಘಾತಕವಲ್ಲ. ಅಭ್ಯಾಸ ಪಂದ್ಯದಲ್ಲಿ ಲಂಕಾ ಪೇರಿಸಿದ 350 ಪ್ಲಸ್ ಮೊತ್ತವನ್ನು ಕಿವೀಸ್ ನಿರಾಯಾಸವಾಗಿ ಬೆನ್ನಟ್ಟಿತ್ತು.
ಪ್ರಧಾನ ವೇಗಿ ಲಸಿತ ಮಾಲಿಂಗ 2015ರ ನವಂಬರ್ ಬಳಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅವರ ಫಾರ್ಮ್ ಕೂಡ ಭರವಸೆದಾಯಕವಾಗಿಲ್ಲ. ಇದಕ್ಕೆ ಕಳೆದ ಐಪಿಎಲ್ ಪಂದ್ಯಾವಳಿಯೇ ಸಾಕ್ಷಿ. ಹಳಬ ನುವಾನ್ ಕುಲಶೇಖರ ಅಗತ್ಯವೇನಿತ್ತೋ ತಿಳಿಯದು. ಸ್ಪಿನ್ನರ್ ಲಕ್ಷಣ ಸಂದಕನ್ ಎಸೆತಗಳಲ್ಲಿ ವೈವಿಧ್ಯವಿದೆಯಾದರೂ ಇಂಗ್ಲೆಂಡ್ ಪಿಚ್‌ಗಳು ಸ್ಪಿನ್ನಿಗೆ ನೆರವು ನೀಡು ವುದು ಅಷ್ಟರಲ್ಲೆ ಇದೆ.
ಇವರೆಲ್ಲರಿಗೆ ಈಗಾಗಲೇ ನಿವೃತ್ತಿ ಯಾಗಿರುವ ಕುಮಾರ ಸಂಗಕ್ಕರ ಸ್ಫೂರ್ತಿ ಯಾಗಬೇಕಾದ ಅಗತ್ಯವಿದೆ. ಇಂಗ್ಲೆಂಡಿನಲ್ಲೇ ಸರ್ರೆ ಕೌಂಟಿ ಪರ ಆಡುತ್ತಿರುವ ಸಂಗಕ್ಕರ ಸತತ 5 ಶತಕ ಬಾರಿಸಿ ಮೆರೆದಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.