‘ಬೀರೇಶ್ವರ’ನ ಮುಂದೆ ಕೊಟ್ಟ ಮಾತು ನಡೆಸಿಕೊಡಿ: ಸಿಎಂಗೆ ಅಂಬರೀಶ್
Team Udayavani, Jun 3, 2017, 5:15 PM IST
ಮೈಸೂರು : ಇಲ್ಲಿ ಶುಕ್ರವಾರ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ 4 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರು ವೇದಿಕೆಯಲ್ಲೇ ಟಾಂಗ್ ನೀಡಿದ ಘಟನೆ ನಡೆದಿದೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಕುರಿತಾಗಿನ ಸುಧೀರ್ಘ ಭಾಷಣದ ಬಳಿಕ ಭಾಷಣ ಆರಂಭಿಸಿದ ಅಂಬರೀಶ್ ಮೊದಲಿಗೆ ಮುಖ್ಯಮಂತ್ರಿಗಳಿಗೆ ಹೊಗಳಿದರು.
ಮುಖ್ಯಮಂತ್ರಿಗಳು ಸರ್ಕಾರದ ಸಾಧನೆಗಳನ್ನು, ಭಾಗ್ಯಗಳನ್ನು ಬಿಡಿಸಿ ಬಿಡಿಸಿ ಹೃದಯಕ್ಕೆ ಮುಟ್ಟುವಂತೆ ಹೇಳಿದ್ದಾರೆ. ನಿಮ್ಮ ಮತಕ್ಕೆ ನಮ್ಮ ಪ್ರತಿಫಲ ಎನ್ನುವ ಕುರಿತು ಸವಿವರವಾಗಿ ಹೇಳಿದ್ದಾರೆ. ನಾನು 230 ಸಿನಿಮಾ ಮಾಡಿದ್ದೇನೆ ಆದರೆ ಇಷ್ಟು ಮಾತಾಡಿಲ್ಲ. ನಿಷ್ಠೆ ಇದ್ರೆ ಮಾತ್ರ ಆ ತರ ಮಾತನಾಡಲು ಸಾಧ್ಯ ಎಂದರು.
ಬಳಿಕ ಅನ್ನ ಭಾಗ್ಯ .. ಕ್ಷೀರ ಭಾಗ್ಯ .. ರೈತರ ಸಾಲ ಮನ್ನಾ ಸೈಕಲ್.. ಗೂಡ್ಸು ..ಎಲ್ಲಾ ಹೇಳಿದ್ರು. ಆದ್ರೆ ನಾವು ಮಾಡಿದ ವಸತಿ ಇಲಾಖೆಯ ಸಾಧನೆಗಳ ಕುರಿತು ಒಂದು ಮಾತು ಹೇಳಿಲ್ಲ. 3 ಚಿನ್ನದ ಪದಕಗಳು ಇಲಾಖೆಗೆ ಬಂದಿವೆ. ನೀವು ಹೇಳದಿದ್ರೆ ತೊಂದರೆ ಇಲ್ಲ ಬಿಡಿ. ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಕೊನೆಗೆ ‘ಬೀರೇಶ್ವರ ದೇವರ ಮುಂದೆ ನೀಡಿದ ಮಾತು ನಡೆಸಿಕೊಡಿ’ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿ ಎಲ್ಲರ ಕುತೂಹಲಕ್ಕೆ ಕಾರಣವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.