ಎಳೆಯರ ಚಿತ್ರಕ್ಕೆ ಶೇ.50 ರಿಯಾಯಿತಿ
Team Udayavani, Jun 4, 2017, 3:54 PM IST
ಕೆಲವು ಸಿನಿಮಾಗಳು ಆಗಾಗ ಅಂಥದ್ದೊಂದು ಸುದ್ದಿ ಮಾಡುತ್ತವೆ. ಈಗ ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದ “ಎಳೆಯರು ನಾವು ಗೆಳೆಯರು’ ಚಿತ್ರ ಈಗ ಹೊಸದ್ದೊಂದು ಸುದ್ದಿಗೆ ಕಾರಣವಾಗಿದೆ.
ಚಿತ್ರವನ್ನು ನೋಡಿರುವ ಬಹುತೇಕ ಮಂದಿ, ಎಳೆಯರ ಅಭಿನಯವನ್ನು ಕೊಂಡಾಡಿದ್ದಾಗಿದೆ. ಈಗ ಹೊಸ ವಿಷಯವೆಂದರೆ, ಚಿತ್ರತಂಡ, ಇಂತಹ ಚಿತ್ರ ಎಲ್ಲಾ ಮಕ್ಕಳಿಗೂ ತಲುಪಬೇಕು ಎಂಬ ಉದ್ದೇಶದಿಂದ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶೇ.50 ರ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಸಜ್ಜಾಗಿದೆ. ಅಂದಹಾಗೆ, ಈ ಶೇ.50 ರ ರಿಯಾಯಿತಿ ದರ, ಮಲ್ಟಿಪ್ಲೆಕ್ಸ್ಗೆ ಅನ್ವಯಿಸುವುದಿಲ್ಲ. ಈ ಸಿನಿಮಾವನ್ನು ಮಕ್ಕಳು ನೋಡಬಹುದಾದ ಅಂಶಗಳನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಈ ಸಿನಿಮಾ ತಲುಪಬೇಕು ಎಂಬ ಉದ್ಧೇಶ ಇಟ್ಟುಕೊಂಡಿರುವ ನಿರ್ಮಾಪಕರು, ವಿದ್ಯಾರ್ಥಿಗಳಿಗೆ ಶೇ.50 ರ ರಿಯಾಯಿತಿ ದರದಲ್ಲಿ ಟಿಕೆಟ್ ವಿತರಿಸಲು ಮುಂದಾಗಿದ್ದಾರೆ.
ಅಂದಹಾಗೆ, ಮಲ್ಟಿಪ್ಲೆಕ್ಸ್ ಹೊರತುಪಡಿಸಿ, ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಸೋಮವಾರದಿಂದ ಗುರುವಾರದವರೆಗೆ ಈ ವಿಶೇಷ ರಿಯಾಯಿತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಗುರುತಿನ ಪತ್ರವನ್ನು ಟಿಕೆಟ್ ಕೌಂಟರಿನಲ್ಲಿ ತೋರಿಸಿ, ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಚಿತ್ರದಲ್ಲಿ ತುಷಾರ್, ಮಹೇಂದ್ರ, ಸೂರಜ್, ನಿಹಾಲ್, ತೇಜಸ್ವಿನಿ, ಪುಟ್ಟರಾಜು, ಅಚಿಂತ್ಯ, ಅಭಿಷೇಕ್, ಅಮೋಘ…, ಮಹತಿ ಮತ್ತಿತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.