ನೋಡ್ರಪ್ಪೋ ನೋಡ್ರಿ ಒಂಟೆತ್ತಿನ ನೇಗಿಲು


Team Udayavani, Jun 5, 2017, 3:45 AM IST

negilu.jpg

“ಒಂಟಿ ಎತ್ತಾದ್ರೆ ಬದುವಿನ ಬುಡದವರೆಗೆ ಉಳುಮೆ ಮಾಡಬಹುದು. ತಿರುಗುವಾಗ ಪಕ್ಕದವರ ತೋಟಕ್ಕೆ ಎತ್ತು ಇಳಿಯುವ ಸಮಸ್ಯೆ ಇಲ್ಲ’ ಎರಡೇ ವಾಕ್ಯದಲ್ಲಿ ಕುಮಾರ್‌ರವರು ತಮ್ಮ ಒಂಟೆತ್ತಿನ ನೇಗಿಲ ಮಹತ್ವವನ್ನು ಹೇಳಿಬಿಟ್ಟಿದ್ದರು ! ಎರಡು ಎತ್ತುಗಳ ಹೆಗಲ ಮೇಲೆ ನೊಗ ಜೋಡಿಸಿದ ಮೇಲೆ ಅವುಗಳ ಸಮತೋಲನ ಕಾಪಾಡುವುದೇ ಮುಖ್ಯ. ಗದ್ದೆಯ ಬದುವಿನ ಪಕ್ಕ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಪ್ರಯತ್ನಿಸಿದಲ್ಲಿ ಒಂದು ಎತ್ತು ಪಕ್ಕದ ಗದ್ದೆಗೆ ಇಳಿಯಲೇ ಬೇಕು. ಪಕ್ಕದ ಗದ್ದೆ ನಮ್ಮದೇ ಆಗಿದ್ದರೆ ಪರವಾಗಿಲ್ಲ. ಬೇರೆಯವರದ್ದಾಗಿದ್ದರೆ ಅವರ ಬೈಗುಳ ಕೇಳಿಸಿಕೊಳ್ಳಲು ತಯಾರಾಗಿರಬೇಕು. ಇನ್ನು ಅಲ್ಲಿಯೇ ಏನದರೂ ಬೆಳೆ ಇದ್ದರಂತೂ ಕಥೆ ಮುಗಿಯಿತು !

ಅದೂ ಕೂಡಾ ಅಕ್ಕಪಕ್ಕದ ಹೊಲ ಸಮತಟ್ಟಾಗಿದ್ದರೆ ಮಾತ್ರ ಸಾಧ್ಯ. ಒಂದು ವೇಳೆ ತಗ್ಗಿನಲ್ಲಿದ್ದರೆ ಒಂದು ಎತ್ತನ್ನು
ಇಳಿಸುವುದು ತ್ರಾಸ. ಎತ್ತರದಲ್ಲಿದ್ದರೆ ಏರಿಸುವುದು ಪ್ರಯಾಸ. ನೊಗದ ಇನ್ನೊಂದು ಬದಿಯಲ್ಲಿರುವ ಎತ್ತಿಗೆ ಘಾಸಿಯಾದಂತೆ ಉಳುಮೆ ಮಾಡುವುದು ಒಂದು ಅದ್ಭುತವಾದ ಕಲೆ. ಹೇಳಿಕೇಳಿ ಕುಮಾರ್‌ ಅವರದ್ದು ಮಂಡ್ಯ ಜಿಲ್ಲೆ. ಕಾಲುವೆ ನೀರು ಹರಿಸಿ ಭತ್ತ ಬೆಳೆಯುವ ಸಣ್ಣ ಸಣ್ಣ ಗದ್ದೆಗಳು. ಇಲ್ಲಿ ಉಳುವುದು ಕಷ್ಟ ಎಂದು ಟ್ರಾಕ್ಟರ್‌, ಟಿಲ್ಲರ್‌ಗಳು ಸುಳಿಯುವುದೇ ಇಲ್ಲ. ಎತ್ತುಗಳ ಅವಲಂಬನೆ ಅನಿವಾರ್ಯ. ಮದ್ದೂರು- ಬೆಸಗರಹಳ್ಳಿ ರಸ್ತೆಯಲ್ಲಿರುವ
ಕುಮಾರ್‌ರವರ ಊರು ರಾಂಪುರ ಕೂಡಾ ಇದಕ್ಕೇನೂ ಹೊರತಾಗಿಲ್ಲ.

ಅಷ್ಟಕ್ಕೂ ಕುಮಾರ್‌ರವರು ಭತ್ತದ ಗದ್ದೆ ಉಳುಮೆಗೆಂದು ಒಂಟೆತ್ತು ನೇಗಿಲು ತಂದವರಲ್ಲ. ಅದೊಮ್ಮೆ ಮೈಸೂರು ಆಕಾಶವಾಣಿಯಲ್ಲಿ ಕೆ ಆರ್‌ ನಗರದ ವೇಣುಗೋಪಾಲ್‌ರವರ ಒಂಟೆತ್ತು ನೇಗಿಲಿನ ಯಶೋಗಾಥೆಯ ಸಂದರ್ಶನ ಪ್ರಸಾರ ಮಾಡಿದ್ದರು. ಅವರು ಅಡಿಕೆ ತೋಟ ಉಳುಮೆಗಾಗಿ ಈ ನೇಗಿಲು ಬಳಸುತ್ತಿದ್ದರು. ಅಡಿಕೆ ತೋಟದ ಸಾಲುಗಳ ಮಧ್ಯೆ ಎರಡು ಎತ್ತುಗಳು ಹೋಗುವಷ್ಟು ಅಂತರವಿಲ್ಲ. ಅದಕ್ಕಾಗಿ ಅವರು ಒಂಟೆತ್ತಿನ ನೇಗಿಲಿನ ಆಷ್ಕಾರ ಮಾಡಿದರು.

ರೇಡಿಯೋ ಕಾರ್ಯಕ್ರಮ ಕೇಳಿದ ನಂತರ ಕುಮಾರ್‌ ಕೆ ಆರ್‌ ನಗರಕ್ಕೆ ಹೋದರು. ವೇಣುಗೋಪಾಲ್‌ರವರಿಂದ ಒಂದು ಒಂಟೆತ್ತಿನ ನೇಗಿಲು ತಂದರು. ಇದು ಎಂಟು ವರ್ಷದ ಹಿಂದಿನ ಕಥೆ. ಆಗ ಆ ನೇಗಿಲಿಗೆ ಅವರು ಕೊಟ್ಟಿದ್ದು ಸಾವಿರದ ಎಂಟುನೂರು ರೂ.

“ನಾನು ನೇಗಿಲು ತಂದಿದ್ದು ಕಾಳು ಮೆಣಸಿನ ತೋಟ ಉಳುಮೆ ಮಾಡೋಕೆ’ ಅಂತ ವಿವರಿಸುತ್ತಾರೆ ಕುಮಾರ್‌. ಹೊಸದಾಗಿ ಸಿಲ್ವರ್‌ ಓಕ್‌ ಮರಗಳಿಗೆ ಕಾಳುಮೆಣಸು ನೆಟ್ಟ ಉತ್ಸಾಹ. ಒಂದು ಕಳೆ ಕೂಡಾ ಬೆಳೆಯಲು ಬಿಡಬಾರದು ಅನ್ನುವ ಹಠಕ್ಕೆ ಬಿದ್ದು ಉಳುಮೆಗಾಗಿ ಒಂಟೆತ್ತಿನ ನೇಗಿಲು ತಂದರು.

ಈಗ ಕಾಳುಮೆಣಸಿನ ತೋಟ ಉಳುವುದೇ ಇಲ್ಲ. ನೈಸರ್ಗಿಕ ಕೃಷಿ ಮಾಡುತ್ತೇನೆ. ಆದರೆ ಹಿಪ್ಪುನೇರಳೆ ತೋಟಕ್ಕೆ ಮಾತ್ರ ಒಂಟಿ ನೇಗಿಲಿನದ್ದೇ ಉಳುಮೆ. ನಾಲ್ಕಡಿ ಅಂತರದ ಸಾಲುಗಳು. ಗಿಡಗಳ ಮಧ್ಯೆ ಎರಡಡಿ ಅಂತರ. ಸಾಲಿನ ಉದ್ದ ಮತ್ತು ಅಡ್ಡ ಉಳುಮೆ ಮಾಡಲು ಸಾಧ್ಯ. ಹಸುವಿನ ಕಾಲಿಗೆ ಗಿಡ ತಗುಲಿ ಏಟಾಗುತ್ತದೆಯೆಂಬ ಭಯವಿಲ್ಲ. ಒಂದೇ ಹಸುವಾದ್ದರಿಂದ ಹುಶಾರಾಗಿ ಗಿಡ ತಪ್ಪಿಸಿಕೊಂಡು ಹೋಗುತ್ತದೆ ಎನ್ನುತ್ತಾರೆ ಕುಮಾರ್‌. ಹಾn ! ಹೇಳಲು ಮರೆತಿದ್ದೆ. ಕುಮಾರ್‌ ಅವರ ಈ ನೇಗಿಲು ಈಗ ಎಳೆಯುವುದು ಒಂಟಿ ಎತ್ತೂ ಕೂಡಾ ಅಲ್ಲ. ಒಂಟಿ ಹಸು. ಈ ಹಸು ಒಂದು ಟನ್‌ ತೂಕ ಎಳೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕುಮಾರ್‌.

– ಗಣಪತಿ ಭಟ್‌ ಹಾರೋಹಳ್ಳಿ

ಟಾಪ್ ನ್ಯೂಸ್

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.