ಪೂಜೆ ಸಾಮಗ್ರಿ, ಗಾಂಧಿ ಟೋಪಿ, ರಾಷ್ಟ್ರಧ್ವಜಕ್ಕೆ ತೆರಿಗೆ ಇಲ್ಲ
Team Udayavani, Jun 5, 2017, 3:45 AM IST
ನವದೆಹಲಿ: ಜು.1 ರಿಂದ ದೇವರ ಪೂಜೆ ಅಂಥಾ ದುಬಾರಿ ಏನೂ ಆಗಲ್ಲ. ಕೇಂದ್ರ ಜಿಎಸ್‌ಟಿ ಮಂಡಳಿ, ಪೂಜಾ ಸಾಮಗ್ರಿಗಳಿಗೆ ಯಾವುದೇ ತೆರಿಗೆ ವಿಧಿಸದೇ ಇರಲು ನಿರ್ಧರಿಸಿದ್ದು, ಹೀಗಾಗಿ ಈ ವಸ್ತುಗಳು ಅಗ್ಗವಾಗಿ ಸಿಗಲಿವೆ.
ಇದರ ಜತೆಗೆ, ಖಾದಿ ನೂಲು, ಗಾಂಧಿ ಟೋಪಿ, ರಾಷ್ಟ್ರಧ್ವಜಕ್ಕೂ ಯಾವುದೇ ತೆರಿಗೆ ಹಾಕದೇ ಇರಲು ನಿರ್ಧರಿಸಲಾಗಿದೆ. ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುತ್ತು, ಕೃತಕ ಆಭರಣ ಮತ್ತು ನಾಣ್ಯಗಳಿಗೆ ಶೇ.3 ರಷ್ಟು ತೆರಿಗೆ ಬೀಳಲಿದೆ.
ಧಾರ್ಮಿಕ ಸಂಸ್ಥೆಗಳಲ್ಲಿ ಮಾರಾಟವಾಗುವ ರುದ್ರಾಕ್ಷಿ, ಪಂಚಾಮೃತ, ತುಳಸಿ-ಕಾಂತಿ ಮಾಲೆ, ಪಂಚಗವ್ಯ, ಪವಿತ್ರ ದಾರ, ವಿಭೂತಿ ಮತ್ತು ಪಾದುಕೆಗಳಿಗೆ ತೆರಿಗೆ ಇಲ್ಲ. ಜತೆಗೆ ಗಂಧದ ತಿಲಕ, ಬ್ರಾಂಡೆಡ್ ಅಲ್ಲದ ಜೇನುತುಪ್ಪ, ಗೆಜ್ಜೆ ಬತ್ತಿ(ಹತ್ತಿಯಿಂದ ಮಾಡಿದ ಹಾರ)ಗೂ ಯಾವುದೇ ತೆರಿಗೆ ಇಲ್ಲ. ಆದರೆ ಧೂಪ, ಕಲ್ಲುಸಕ್ಕರೆ, ಬೆಂಡು-ಬತಾಸು, ಸಕ್ಕರೆ ರೂಪದ ಪ್ರಸಾದಕ್ಕೆ ಶೇ.5 ರಷ್ಟು ತೆರಿಗೆ ವಿಧಿಸಲಾಗಿದೆ. ಸಾವಿರ ರೂ.ಗಿಂತ ಕಡಿಮೆ ಇರುವ ಹೊದಿಕೆ, ಎಲ್ಲಾ ರೀತಿಯ ಟವೆಲ್‌ಗೆ ಶೇ.5 ಹಾಗೂ ಕಚೀìಫ್, ಸೊಳ್ಳೆ ಪರದೆ, ಬ್ಯಾಗು, ಸಾಕ್ಸ್‌ಗೂ ಶೇ.5 ರಷ್ಟು ತೆರಿಗೆ ಬೀಳಲಿದೆ. ಆದರೆ ಇದೇ ವಸ್ತುಗಳ ಬೆಲೆ 1000ಕ್ಕಿಂತ ಹೆಚ್ಚಾದರೆ ಶೇ.12 ರಷ್ಟು ತೆರಿಗೆ ಬೀಳಲಿದೆ. ಬೆಂಕಿಪೊಟ್ಟಣಕ್ಕೂ ಶೇ.5 ರಷ್ಟು ತೆರಿಗೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ
Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ
MUST WATCH
ಹೊಸ ಸೇರ್ಪಡೆ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.