ತನಿಖೆಯ ಬಳಿಕ ಸೂಕ್ತ ಕ್ರಮ: ಜಿಲ್ಲಾಧಿಕಾರಿ
Team Udayavani, Jun 5, 2017, 10:16 AM IST
ಮಂಗಳೂರು: ಬಾರ್ಜ್ ಮುಳುಗಡೆ ಘಟನೆಯಲ್ಲಿ ಕಂಪೆನಿ ಕಡೆಯಿಂದ ಯಾವುದೇ ದೋಷಗಳಿವೆಯೇ ಎಂಬ ಬಗ್ಗೆ ತನಿಖೆಯ ಬಳಿಕವೇ ತಿಳಿದು ಬರಬೇಕಾದ್ದರಿಂದ, ಈ ಬಗ್ಗೆ ತನಿಖೆ ಮಾಡಿಸಿ ಎಡಿಬಿ ಹಾಗೂ ತಾಂತ್ರಿಕ ತಜ್ಞರಿಂದ ವರದಿ ಪಡೆದುಕೊಳ್ಳುತ್ತೇವೆ. ಬಾರ್ಜ್ ಮುಳುಗಡೆ ಯಲ್ಲಿ ತಾಂತ್ರಿಕ ಕಾರಣ ಗಳಿದ್ದು, ಗುತ್ತಿಗೆದಾರರು ಇದಕ್ಕೆ ಪ್ರಮುಖ ಕಾರಣ ವೆಂದಿದ್ದರೆ ಜಿಲ್ಲಾಡಳಿತದ ವತಿ ಯಿಂದ ಸೂಕ್ತ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ತಿಳಿಸಿದ್ದಾರೆ.
ರವಿವಾರ ಉದಯವಾಣಿಯ ಜತೆ ಮಾತನಾಡಿದ ಅವರು, ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣ ಕಾರ್ಯಕ್ಕಾಗಿ ಎಡಿಬಿ ಯೋಜನೆ ಯವರು ಬಾರ್ಜ್ ಮಾಲಕತ್ವದ ಕಂಪೆನಿಗೆ ಕೆಲಸ ವಹಿಸಿಕೊಟ್ಟಿದ್ದು, ಇದು 25ಕ್ಕೆ ಮುಗಿ ದಿದೆ. ತಮ್ಮ ಕೆಲಸ ಮುಗಿದ ಮೇಲೆ ಗುತ್ತಿಗೆ ಪಡೆದು ಕೊಂಡವರು ಮುಂಬಯಿಗೆ ಹಿಂತಿರುಗ ಬೇಕು. ಅದು ಸಮುದ್ರ ಮಾರ್ಗ ದಲ್ಲೇ ತೆರಳು ವವರಾದ್ದರಿಂದ ಇಷ್ಟು ದಿನದೊಳಗೆ ತೆರಳಬೇಕು ಎನ್ನುವ ನಿಯಮ ಗಳಿಲ್ಲ. ಆದರೂ ಎಡಿಬಿಯವರಿಂದ ವರದಿ ಪಡೆಯು ತ್ತೇವೆ. ಅದರಲ್ಲೇನಾದರೂ ಕಾಮಗಾರಿ ಮುಗಿದ ಬಳಿಕ ಹೋಗುವಲ್ಲಿ ವಿಳಂಬ ವಾಗಿದೆ, ಇಷ್ಟು ದಿನಗಳಲ್ಲಿ ಹೋಗ ಬೇಕಿತ್ತು ಎಂಬ ನಿಯಮಗಳಿದ್ದರೆ ನಾವು ಕ್ರಮ ಕೈಗೊಳ್ಳು ತ್ತೇವೆ. ಇಲ್ಲಿಯವರೆಗೆ ಯಾಕಿ ದ್ದರು ಎಂಬುದೆಲ್ಲವೂ ತನಿಖೆಯ ಬಳಿಕವೇ ತಿಳಿದುಬರುತ್ತದೆ ಎಂದರು.
ಇಂಧನ ತೆರವಿಗೆ ಕ್ರಮ
ಮುಳುಗುತ್ತಿರುವ ಬಾರ್ಜ್‌ನ ಇಂಧನ ವನ್ನು ತೆರವು ಮಾಡುವ ದೃಷ್ಟಿಯಿಂದ ತಂಡ ಮಾಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಸಹಾಯಕ ಆಯುಕ್ತ, ಎಡಿಬಿ ಯೋಜನೆ ಎಂಜಿನಿಯರ್, ಡಿಐಜಿ ಹೋಂ ಗಾರ್ಡ್ ಅವರು ಸೋಮವಾರ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಿ ಇಂಧನ ತೆರವು ಮಾಡಲು ಹಾಗೂ ರಕ್ಷಣೆ ಮಾಡಲು ಜಿಲ್ಲಾಡಳಿತದಿಂದ ಯಾವುದೇ ಸಹಾಯ ಬೇಕಾ ದಲ್ಲಿ ಕೇಳಲಾಗುತ್ತದೆ. ಗುತ್ತಿಗೆದಾರರು ಇಂಧನ ತೆರವು ಮಾಡದಿದ್ದರೆ, ಜಿಲ್ಲಾಡಳಿತ ಮಾಡಿಸಿ ಅದರ ವೆಚ್ಚವನ್ನು ಕಂಪೆನಿಯಿಂದಲೇ ಪಡೆದುಕೊಳ್ಳಲಿದೆ ಎಂದರು.
ಕಾರ್ಮಿಕರಿಗೆ ಸಂಬಂಧಪಟ್ಟಂತೆ ಕಂಪೆನಿಯಿಂದ ಏನಾದರೂ ಬರಬೇಕೆಂದಿದ್ದಲ್ಲಿ ನಾವು ಅವರ ಪರವಾಗಿ ಕೇಳಬಹುದು. ಈ ನಿಟ್ಟಿನಲ್ಲಿ ಕಂಪೆನಿಯವರನ್ನೇ ಕರೆಸಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.