ದೀರ್ಘ ಕಾಲದ ಕನಸು ಈಡೇರಿದೆ: ಶಾಸಕ ಬಾವಾ
Team Udayavani, Jun 5, 2017, 10:23 AM IST
ಸುರತ್ಕಲ್: ಜಾತಿ, ಮತ, ಧರ್ಮ, ಪಂಗಡ ಭೇದ ಮಾಡದೆ ಸರಕಾರಿ ಶಾಲೆಯಲ್ಲಿ ಕಲಿಯುವ ಪ್ರತಿ ಮಗುವಿಗೂ ಪುಸ್ತಕಗಳನ್ನು ಕೊಡುವ ಕನಸು ಈಡೇರಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.
ಅವರು ಸುರತ್ಕಲ್ ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆ ಹಾಗೂ ಚೊಕ್ಕಬೆಟ್ಟು ಎಂಜೆಎಂ ಸಭಾಂಗಣದಲ್ಲಿ ಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ಸುಮಾರು 52,86,000 ಲ.ರೂ. ಮೌಲ್ಯದ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ನನ್ನ ವಿಧಾನಸಭಾ ಕ್ಷೇತ್ರದ ಒಟ್ಟು 48,000 ಮಕ್ಕಳಿಗೆ ಸ್ವಂತ ಖರ್ಚಿ ನ ಲ್ಲಿ ಪುಸ್ತಕಗಳನ್ನು ಕೊಡುವ ಆಸೆ ಈಡೇರಿದೆ. ಇಂದು ಶ್ರೀಮಂತರ ಜತೆಗೆ ಮಧ್ಯಮ ಹಾಗೂ ಬಡವರ್ಗದ ಮಕ್ಕಳೂ ಅತ್ಯುನ್ನತ ರ್‍ಯಾಂಕ್ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಇವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇ ಕಾ ಗಿ ದೆ ಎಂದರು.
ಮನಪಾ ಸದಸ್ಯೆ ಪ್ರತಿಭಾ ಕುಳಾç ಮಾತನಾಡಿ, ಜನಸಾಮಾನ್ಯರಿಗಾಗಿ ತಮ್ಮ ಮನೆಬಾಗಿಲನ್ನು ಯಾವತ್ತೂ ತೆರೆದಿಡುವ ಜನಪ್ರತಿನಿಧಿಯಾಗಿ ಬಾವಾ ಹೊರಹೊಮ್ಮಿದ್ದಾರೆ. ಅವರು ಮುಂದಿನ ಬಾರಿ ಸಚಿವರಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಮಾಜಿ ಮೇಯರ್ ಗುಲ್ಜಾರ್ ಬಾನು, ಮಂಗಳೂರು ಉತ್ತರ ಮಹಿಳಾಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉತ್ತಮ್ ಆಳ್ವ, ಮನಪಾ ಸದಸ್ಯ ಕುಮಾರ್ ಮೆಂಡನ್, ವಿದ್ಯಾದಾಯಿನಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟ್ರಾವ್ ಸಂಚಾಲಕ ಜನಾರ್ದನ ರಾವ್, ಮುಖ್ಯೋಪಾಧ್ಯಾಯಿನಿ ಕುಸುಮಾ, ಕಾಂಗ್ರೆಸ್ ಮುಖಂಡ ರಮಾನಂದ ರಾವ್, ಯುವ ಕಾಂಗ್ರೆಸ್ ಮುಖಂಡ ಸೊಹೈಲ್ ಕಂದಕ್, ದೇವಕಿ, ಭಾಸ್ಕರ್, ರಾಜಾ ಬಂಗೇರ, ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.