ಆರಂಭಿಕ ವಹಿವಾಟಿನಲ್ಲಿ 34 ಅಂಕಗಳ ಮುನ್ನಡೆ ಪಡೆದ ಮುಂಬಯಿ ಶೇರು
Team Udayavani, Jun 5, 2017, 11:17 AM IST
ಮುಂಬಯಿ : ಹೂಡಿಕೆದಾರರು ಹಾಗೂ ವಹಿವಾಟುದಾರರು ಎಚ್ಚರಿಕೆ ನಡೆ ಇಟ್ಟಿರುವ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 34 ಅಂಕಗಳ ಮುನ್ನಡೆಯನ್ನು ಕಂಡಿದೆ.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 34.89 ಅಂಕಗಳ ಮುನ್ನಡೆಯೊಂದಿಗೆ 31,308.18 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 18.80 ಅಂಕಗಳ ಮುನ್ನಡೆಯೊಂದಿಗೆ 9,672.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಸನ್ ಫಾರ್ಮಾ ಸಿಪ್ಲಾ, ಬಿಎಚ್ಇಎಲ್, ಅದಾನಿ ಪೋರ್ಟ್, ಹೀರೋ ಮೋಟೋ ಕಾರ್ಪ್, ಭಾರ್ತಿ ಇನ್ಫ್ರಾಟೆಲ್, ಐಓಸಿ, ಇಂಡಿಯಾಬುಲ್ಸ್ ಹೌಸಿಂಗ್ ಮತ್ತು ಅರಬಿಂದೋ ಪಾರ್ಮಾ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದವು.
ಭಾರತೀಯ ಸೇವಾ ರಂಗದ ಸೂಚ್ಯಂಕಗಳು ಸುಧಾರಿಸಿರುವುದು, ಹೊಸ ಉದ್ಯಮಗಳಿಗೆ ಬಂಡವಾಳ ಹರಿದು ಬಂದಿರುವುದು , ಆರ್ಥಿಕ ಹಾಗೂ ಉದ್ಯೋಗ ಸ್ಥಿತಿಗತಿ ಸುಧಾರಿಸಿರುವುದು ಮುಂಬಯಿ ಶೇರು ಪೇಟೆಯ ಇಂದಿನ ಮುನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.