ಅಲ್ಲು ಅರ್ಜುನ್ ಡಿಜೆ ಹಾಡಿನ ವಿರುದ್ಧ ಬ್ರಾಹ್ಮಣರು ಗರಂ !
Team Udayavani, Jun 5, 2017, 11:48 AM IST
ಹೈದರಾಬಾದ್ : ಅಲ್ಲು ಅರ್ಜುನ್ ಅಭಿಯನದ ಬಹುನಿರೀಕ್ಷಿತ ತೆಲುಗು ಡಿಜೆ ಚಿತ್ರದ ಹಾಡೊಂದರ ಸಾಲುಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಮುದಾಯದ ವಿರುದ್ಧ ಅವಹೇಳನಕಾರಿ ಸಾಲುಗಳು ಇರುವ ಹಿನ್ನಲೆಯಲ್ಲಿ ಬ್ರಾಹ್ಮಣ ಸಂಘಟನೆಗಳು ಸೆನ್ಸಾರ್‌ಗೆ ದೂರು ನೀಡಿವೆ.
ದುವ್ವಾಡ ಜಗನ್ನಾಥಂ (ಡಿಜೆ) ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ಗುಡಿಲೋ ಬಡಿಲೋ ಮಡಿಲೋ ವೋಡಿಲೋ..ಎಂಬ ಹಾಡಿನಲ್ಲಿ ಬ್ರಾಹ್ಮಣರ ಕುರಿತು ನಮಕಮ್ ಚಮಕಂ ಎಂಬ ವಿವಾದಿತ ಸಾಲುಗಳಿದ್ದು ಅದನ್ನು ತೆಗೆಯಬೇಕೆಂದು ಅಖೀಲ ಭಾರತ ಬ್ರಾಹ್ಮಣ ಪರಿಷತ್‌ನ ದ್ರೋಣಂ ರಾಜು ಶ್ರೀನಿವಾಸ ರಾವ್ ಅವರು ಸೆನ್ಸಾರ್ ಮಂಡಳಿ, ಸಚಿವರು ಮತ್ತು ಡಿಜಿಪಿಗೆ ನೀಡಿದ ದೂರಿನಲ್ಲಿ ಮನವಿ ಮಾಡಲಾಗಿದೆ.
ಇತ್ರೀಚಿನ ಚಿತ್ರದಲ್ಲಿ ಬ್ರಾಹ್ಮಣರು ಹಾಸ್ಯಕ್ಕೆ ವಸ್ತುವಾಗಿ ಹೋಗಿದ್ದು, ತುಂಬಾ ನಕಾರಾತ್ಮಕ ಮತ್ತು ಕಳಪೆಯಾಗಿ ಬಿಂಬಿಸಲಾಗುತ್ತಿದೆ. ಅವರು ಭಗವಾನ್ ಶಿವನ ಮಂತ್ರ ನಮಕಂ ಚಮಕಂನಿಂದ ಪದಗಳನ್ನು ತೆಗೆದುಕೊಂಡು ರೊಮ್ಯಾಂಟಿಕ್ ಹಾಡಿನಲ್ಲಿ ಬಳಸಿಕೊಂಡು ಅವಹೇಳನ ಮಾಡಿದ್ದಾರೆ. ನಾವು ಅದನ್ನು ಸಹಿಸುವುದಿಲ್ಲ ಎಂದು ಶ್ರೀನಿಸಾಸ್ ರಾವ್ ಕಿಡಿಕಾರಿದ್ದಾರೆ.
ಹರೀಶ್ ಶಂಕರ್ ನಿರ್ದೇಶನದ ಡಿಜೆ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜೂನ್ 23 ರಂದು ವಿಶ್ವಾದ್ಯಂತ ಬಿಡುಗಡೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.