ಸಕಾಲ ದುರ್ಬಲಗೊಳಿಸಲು ಹುನ್ನಾರ


Team Udayavani, Jun 5, 2017, 12:22 PM IST

ks-mathayi.jpg

ಬೆಂಗಳೂರು: ಸಾರ್ವಜನಿಕರು ಬಯಸುವ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸುವ “ಸಕಾಲ’ ಯೋಜನೆಯ ನಿರ್ದೇಶಕರೇ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದಾರೆಂದು ಸಕಾಲ ಆಡಳಿತಾಧಿಕಾರಿ ಕೆ.ಮಥಾಯಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸಕಾಲ ಯೋಜನಾ ನಿರ್ದೇಶಕರಾದ ಡಾ.ಕಲ್ಪನಾ ಅವರು ಯೋಜನೆಯ ತುರ್ತು ನಿಧಿ ದುರ್ಬಳಕೆ ಮಾಡಿಕೊಂಡಿದ್ದನ್ನು ಬಯಲಿಗೆಳೆದ ಕಾರಣಕ್ಕೆ ಅವರು ತಮ್ಮ ವಿರುದ್ಧ ದ್ವೇಷ ಸಾಧಿಸಲು ಯತ್ನಿಸಿದಂತಿದೆ ಎಂದು ಮಥಾಯಿ ದೂರಿದ್ದಾರೆ. ಜತೆಗೆ ತಾವು ಯೋಜನೆಯನ್ನು ಸದೃಢಗೊಳಿಸಲು ನಡೆಸಿದ ಪ್ರಯತ್ನದ ಬಗ್ಗೆ ಉಲ್ಲೇಖೀಸಿ, ಅದಕ್ಕೆ ವ್ಯತಿರಿಕ್ತವಾಗಿ ಯೋಜನೆಯನ್ನು ದುರ್ಬಲಗೊಳಿಸಲು ಅವರು ಹುನ್ನಾರ ನಡೆಸಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ. 

“ಸಕಾಲ’ ಯೋಜನೆಯ ಮಾಸಿಕ ಪ್ರಗತಿ ವರದಿ ನೀಡದಿರುವುದಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಥಾಯಿ ಅವರ  ಈ ಆರೋಪ ಚರ್ಚೆಗೆ ಗ್ರಾಸವಾಗಿದೆ. ತಾವು ಸಕಾಲ ಸದೃಢಗೊಳಿಸಲು ನಡೆಸಿದ ಪ್ರಯತ್ನ ಹಾಗೂ ಇದಕ್ಕೆ ವ್ಯತಿರಿಕ್ತವಾಗಿ ಯೋಜನಾ ನಿರ್ದೇಶಕರು ಕೈಗೊಂಡ ಕ್ರಮಗಳ ಬಗ್ಗೆ ಹೋಲಿಕೆ ರೂಪದಲ್ಲಿ ಮಥಾಯಿ ಮೇ 31ರಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

ಪತ್ರದ ಸಾರಾಂಶ: ಬಿಡಿಎ, ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಆಯುಕ್ತರ ಕಚೇರಿ ಸೇರಿ ಹಾಸನದ ನಾನಾ ಕಚೇರಿಗಳಿಗೆ ನಾನು ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದ್ದರೂ ಯೋಜನಾ ನಿರ್ದೇಶಕರಿಂದ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಮುಖ್ಯಮಂತ್ರಿ ಕಚೇರಿ ಹಾಗೂ ಕಾನೂನು ಸಚಿವರ ಸೂಚನೆ ಇದ್ದರೂ, ನನಗೆ ಮಂಜೂರಾಗಿದ್ದ ಗುತ್ತಿಗೆ ವಾಹನದ ಬಿಲ್‌ಅನ್ನು ಒಂಭತ್ತು ತಿಂಗಳಿನಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಕಡತವನ್ನು ಅನಗತ್ಯವಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ತಪಾಸಣೆ, ಪರಿಶೀಲನೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಆ ಮೂಲಕ ಮಾಫಿಯಾ ಕಾರ್ಯಾಚರಣೆ ಮಾದರಿಯಲ್ಲಿ ಸಕಾಲವನ್ನು ಬಂದ್‌ ಮಾಡುವ ಹುನ್ನಾರ ನಡೆಸಿದ್ದಾರೆ.

ಈ ಹಿಂದಿನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಶಾಲಿನಿ ರಜನೀಶ್‌, ಎಂ.ಲಕ್ಷ್ಮೀನಾರಾಯಣ್‌, ಎಂ.ವಿ.ಜಯಂತಿ, ಟಿ.ಕೆ.ಅನಿಲ್‌ಕ ಕುಮಾರ್‌ ಅವರ ಅಧಿಕಾರಾವಧಿಯಲ್ಲಿ ಸಕಾಲ ಆಡಳಿತಾಧಿಕಾರಿಗೆ ಕಾರು ಮಂಜೂರಾಗಿತ್ತು. ಆದರೆ ತಮಗೆ ಕಾರು ನೀಡಲು ಅಡ್ಡಿಪಡಿಸಿದ ಅಧಿಕಾರಿಯು ಈ ಹಿಂದೆ ತಾವು ಸಲ್ಲಿಸಿದ್ದ ಪಾಲಿಕೆಯ ಜಾಹೀರಾತು ಹಗರಣ ಸಂಬಂಧ ಪರೋಕ್ಷ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಮಾಸಿಕ ವರದಿ ಪ್ರಕಟಣೆಗೆ ನಿರಾಸಕ್ತಿ: ಸಕಾಲ ಯೋಜನೆಯ ಮಾಸಿಕ ಪ್ರಗತಿ ವಿವರ ಪ್ರಕಟಣೆಗೆ ಯೋಜನಾ ನಿರ್ದೇಶಕರು ನಿರಾಸಕ್ತಿ ತೋರಿದ್ದಾರೆ. ಇದು ಕ್ರಮೇಣ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನಕ್ಕೆ ಪುಷ್ಠಿ ನೀಡಿದಂತಿದೆ. ಹಾಗೆಯೇ ಸಕಾಲದ ಯಶಸ್ವಿ ಜಾರಿಗೆ ಸಂಬಂಧಪಟ್ಟಂತೆ ಬಳಸಬಹುದಾಗಿದ್ದ 2 ಕೋಟಿ ರೂ. ಅನುದಾನ ಬಳಸದೆ ಕೈತಪ್ಪುವಂತಾಗಿದ್ದು ಸಹ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನದ ಭಾಗದಂತಿದೆ.

ತುರ್ತು ನಿರ್ವಹಣೆಗೆಂದು ಕಾಯ್ದಿರಿಸಿದ್ದ ನಿಧಿಯಿಂದ (ಇಂಪ್ರಸ್ಟ್‌ ಅಮೌಂಟ್‌) ನಿಯಮಬಾಹಿರವಾಗಿ 75,890 ರೂ. ವೆಚ್ಚದಲ್ಲಿ ಯೋಜನಾ ನಿರ್ದೇಶಕರು ತಮ್ಮ ವೈಯಕ್ತಿಕ ಬಳಕೆಗಾಗಿ ದುಬಾರಿ ಐಪಾಡ್‌ ಖರೀದಿಸಿದ್ದಾರೆ. ಇದು ನಿಯಮಬಾಹಿರ ಎಂದು ತಿಳಿಸಿ ಅವರ ಸೂಚನೆಯಂತೆ ಮತ್ತೆ 20,000 ರೂ. ಹಣ ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೆ ತಮ್ಮ ವಿರುದ್ಧ ಪ್ರತಿಕಾರ ಮನೋಭಾವ ತೋರುತ್ತಿದ್ದಾರೆ. ಬಳಿಕ ಹಣ ಡ್ರಾ ಮಾಡುವ ಅಧಿಕಾರವನ್ನೇ ತಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.

ಯೋಜನೆಯ ಯಶಸ್ವಿ ಜಾರಿಗೆ ಅಗತ್ಯವಾದ ಮ್ಯಾನೇಜ್‌ಮೆಂಟ್‌ ಕನ್‌ಸಲ್ಟೆಂಟ್ಸ್‌, ಐಟಿ ಸಲಹೆಗಾರರು, ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗಿದೆ. ಈ ಬಗ್ಗೆ ಗಮನ ಸೆಳೆದದ್ದಕ್ಕೆ ತಮಗೆ ಅನಗತ್ಯವಾಗಿ ನೋಟಿಸ್‌ ನೀಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ತಪಾಸಣೆ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡದೆ ವಿಳಂಬ ಮಾಡುವ ಜತೆಗೆ ಯೋಜನೆಗೆ ಸಂಬಂಧಪಟ್ಟ ದೂರುಗಳ ಇತ್ಯರ್ಥಕ್ಕೂ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಕಾಲ ಸುಧಾರಣೆಗೆ ಸಲಹೆ: ಈ ಹಿಂದೆ ಯೋಜನಾ ನಿರ್ದೇಶಕರಾಗಿದ್ದ ಶಾಲಿನಿ ರಜನೀಶ್‌ ಅವರ ಅಧಿಕಾರಾವಧಿಯಲ್ಲಿದ್ದ ವಾತಾವರಣವನ್ನು ಮತ್ತೆ ತರಬೇಕಿದೆ. ಸಕಾಲ ಆಡಳಿತಾಧಿಕಾರಿಗಳಿಗೆ ತಕ್ಷಣವೇ ವಾಹನ ಮಂಜೂರು ಮಾಡಬೇಕು. ತಕ್ಷಣವೇ ವಾಹನ ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಸಬೇಕು. ಹಣ ಡ್ರಾ ಮಾಡುವ ಅಧಿಕಾರವನ್ನು ಮತ್ತೆ ಆಡಳಿತಾಧಿಕಾರಿಗಳಿಗೆ ನೀಡಬೇಕು. ಸಕಾಲದ ಯಶಸ್ವಿ ಕಾರ್ಯ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯನ್ನು ತ್ವರಿತವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. 

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.