ಮಂಗಳೂರು ನಗರದ ವಿವಿಧೆಡೆ ಕೃತಕ ನೆರೆ; ಸಂಚಾರ ಅಸ್ತವ್ಯಸ್ತ
Team Udayavani, Jun 6, 2017, 10:44 AM IST
ಮಂಗಳೂರು/ಉಡುಪಿ: ಮಂಗಳೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸೋಮವಾರ ಮಧ್ಯಾಹ್ನದ ಅನಂತರ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಕೃತಕ ನೆರೆ ಸೃಷ್ಟಿ ಯಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಂತು ಹೊಳೆಯಂತಾಗಿದ್ದು, ಜನ ಸಂಚಾರ ಅಸ್ತವ್ಯಸ್ತವಾಯಿತು.
ಅಲ್ಲಲ್ಲಿ ಕೃತಕ ನೆರೆ
ಮಧ್ಯಾಹ್ನದ ಬಳಿಕ ಧಾರಾಕಾರ ಮಳೆ ಸುರಿದಿದ್ದು ನಗರದ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಾಧಿತವಾಯಿತು. ಅಂಬೇಡ್ಕರ್ ವೃತ್ತದ ಬಳಿ ಮುಖ್ಯ ರಸ್ತೆಯಲ್ಲಿ ಸುಮಾರು 100 ಮೀಟರ್ ಉದ್ದಕ್ಕೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮೊಣ ಕಾಲಿನವರೆಗೆ ನೀರು ತುಂಬಿದ್ದು ಪ್ರಯಾ ಣಿಕರಿಗೆ ಬಸ್ ಹಿಡಿಯಲು ಸಾಧ್ಯ ವಾಗಲಿಲ್ಲ. ಬಸ್ ನಿಲ್ದಾಣಗಳ ಒಳಗೂ ನೀರು ನುಗ್ಗಿತ್ತು. ಕೆಲವು ದ್ವಿಚಕ್ರ ವಾಹನಗಳು ನೀರಿನಲ್ಲಿ ಬಾಕಿ ಯಾಗಿದ್ದು ಅವುಗಳನ್ನು ಅನಂತರ ತೆರವು ಮಾಡಲಾಯಿತು.
ತೊಕ್ಕೊಟ್ಟಿನಲ್ಲಿ ಸಂಚಾರ ಅಸ್ತವ್ಯಸ್ತ
ತೊಕ್ಕೊಟ್ಟು ಸರ್ಕಲ್ ಬಳಿಯೂ ಸಂಜೆ ಸುಮಾರು ಒಂದು ಗಂಟೆ ಕಾಲ ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನಗಳಿಗೆ ತೀರಾ ಸಮಸ್ಯೆ ಉಂಟಾಯಿತು. ಇಲ್ಲಿ ಹೆದ್ದಾರಿಯಲ್ಲಿ ಫ್ಲೆ „ಓವರ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿನಿರತ ಸ್ಥಳದಲ್ಲಿಯೇ ಕೃತಕ ನೆರೆ ಉಂಟಾಗಿದೆ.
ರಸ್ತೆಯಲ್ಲೇ ಹರಿದ ನೀರು
ಮಾರ್ನಮಿಕಟ್ಟೆ, ಅತ್ತಾವರ, ಹಂಪನಕಟ್ಟೆ, ಕಂಕನಾಡಿ, ಎಸ್.ಎಲ್. ಮಥಾಯಸ್ ರಸ್ತೆ ಮುಂತಾ ದೆಡೆ ರಸ್ತೆಯಲ್ಲಿ ನೀರು ನಿಂತಿ ದ್ದಲ್ಲದೇ ಪಕ್ಕದಲ್ಲಿದ್ದ ಅಂಗಡಿಗಳ ಒಳಗೂ ನೀರು ನುಗ್ಗಿತು. ನಂತೂರು, ಪಿವಿಎಸ್ ಮುಂತಾದೆಡೆ ರಸ್ತೆ ಮಧ್ಯೆ ಉಂಟಾಗಿರುವ ಹೊಂಡ ಮಳೆ ನೀರಿನಿಂದ ತುಂಬಿದ್ದರಿಂದ ತಿಳಿಯದೇ ವಾಹನಗಳು ಈ ಹೊಂಡಕ್ಕೆ ಇಳಿದ ಘಟನೆಯೂ ನಡೆಯಿತು.
ಮಳೆ ಹಿನ್ನೆಲೆ: ರಸ್ತೆ ಬ್ಲಾಕ್
ಕೃತಕ ನೆರೆಯಿಂದಾಗಿ ಹಂಪನಕಟ್ಟೆ ಯಿಂದ ಜ್ಯೋತಿ, ಪಿವಿಎಸ್- ಬಂಟ್ಸ್ ಹಾಸ್ಟೆಲ್-ಜ್ಯೋತಿ, ಕಂಕನಾಡಿ ಪ್ರದೇಶಗಳಲ್ಲಿ ಟ್ರಾಫಿಕ್ ಜಾಂ ಉಂಟಾಯಿತು. ವಾಹನ ಸವಾರರು ಗಂಟೆಗಟ್ಟಲೆ ಮಳೆಯಲ್ಲಿ ರಸ್ತೆ ಮಧ್ಯ ದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು.
ಇತರೆಡೆ ಕಡಿಮೆ ಮಳೆ
ಮಂಗಳೂರಿನಲ್ಲಿ ಮಳೆ ಇಷ್ಟೆಲ್ಲ ಅವಾಂತರ ಉಂಟು ಮಾಡಿದ್ದರೂ ಜಿಲ್ಲೆಯ ಇತರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಪುತ್ತೂರಿನಲ್ಲಿ ಉತ್ತಮ ಮಳೆಯಾಗಿದೆ. ಇಲ್ಲಿನ ಮುರದಲ್ಲಿ ಸಂಜೆ ವಿದ್ಯುತ್ ಕಂಬದ ಮೇಲೆ ಮರ ಉರುಳಿ ಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅನಂತರ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಬೆಳ್ತಂಗಡಿ ಯಲ್ಲಿ ಸಿಡಿಲು ಸಹಿತ ಮಳೆ ಸುರಿದಿದೆ. ಕಿನ್ನಿಗೋಳಿ, ಮೂಲ್ಕಿ, ಮೂಡಬಿದಿರೆ, ಬಂಟ್ವಾಳದಲ್ಲಿಯೂ ಉತ್ತಮ ಮಳೆ ಬಂದಿದೆ. ಕಾರ್ಕಳ, ಉಡುಪಿ, ಮಣಿಪಾಲ, ಬ್ರಹ್ಮಾವರ, ತೆಕ್ಕಟ್ಟೆ, ಮಲ್ಪೆ, ಪಡುಬಿದ್ರಿಯಲ್ಲಿ ಸಾಧಾರಣ ಮಳೆಯಾದರೆ, ಸುಳ್ಯ, ಸುರತ್ಕಲ್‌ನಲ್ಲಿ ಉತ್ತಮ ಸುರಿದಿದೆ.
ಹೆಬ್ರಿಯಲ್ಲಿ ಉತ್ತಮ ಮಳೆ ಯಾ ಯಿತು. ಶಿರ್ವದಲ್ಲಿ ಗುಡುಗು ಸಹಿತ ಭಾರೀ ಮಳೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.