Operation Blue Star ವರ್ಷಾಚರಣೆ: ಖಾಲಿಸ್ಥಾನ್ ಜಿಂದಾಬಾದ್ ಘೋಷಣೆ
Team Udayavani, Jun 6, 2017, 11:57 AM IST
ಅಮೃತಸರ : ಆಪರೇಶನ್ ಬ್ಲೂ ಸ್ಟಾರ್ ನ 33ನೇ ಸ್ಮರಣ ವರ್ಷಾಚರಣೆ ಪ್ರಯುಕ್ತ ಇಂದು ಮಂಗಳವಾರ ಇಲ್ಲಿನ ಸ್ವರ್ಣ ಮಂದಿರದಲ್ಲಿ ಜಮಾಯಿಸಿದ ಭಾರೀ ಸಂಖ್ಯೆಯ ಸಿಕ್ಖರು “ಖಾಲಿಸ್ಥಾನ್ ಜಿಂದಾಬಾದ್, ಖಾಲಿಸ್ಥಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು.
ಸಿಕ್ಖ ಧರ್ಮದ ಐದು ಅತ್ಯಂತ ಪ್ರಮುಖ ಪವಿತ್ರ ತಾಣಗಳಲ್ಲಿ ಒಂದಾಗಿರುವ ಸ್ವರ್ಣ ಮಂದಿರದಲ್ಲಿಂದು ಸೇರಿದ ನೂರಾರು ಸಿಕ್ಖರು “ಖಾಲಿಸ್ಥಾನ್ ಜಿಂದಾಬಾದ್ ‘ ಎಂಬ ಘೋಷಣೆ ಕೂಗುವುದನ್ನು ಕಾಣಿಸುವ ವಿಡಿಯೋ ಚಿತ್ರಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಇಂಟರ್‌ನೆಟ್‌ನಲ್ಲಿ ಹಾಕಿದೆ.
“ಖಾಲಿಸ್ಥಾನ’ ಎಂಬ ಪ್ರತ್ಯೇಕ ಸಿಕ್ಖ ರಾಷ್ಟ ವನ್ನು ಸ್ಥಾಪಿಸುವ, ಸಿಕ್ಖ ಉಗ್ರ, ಪ್ರತ್ಯೇಕತಾವಾದಿ ನಾಯಕ, ಸಂತ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ 33 ವರ್ಷಗಳ ಹಿಂದೆ “ಸ್ವರ್ಣ ಮಂದಿರ’ವನ್ನೇ ತನ್ನ ಕಾರಸ್ಥಾನವನ್ನಾಗಿ ಮಾಡಿಕೊಂಡು ಭಾರತ ಸರಕಾರದ ವಿರುದ್ಧ ನಡೆಸುತ್ತಿದ್ದ ಹಿಂಸಾತ್ಮಕ ಸಶಸ್ತ್ರ ಆಂದೋಲನ ಪರಾಕಾಷ್ಠೆಗೆ ಏರಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೈನಿಕರನ್ನು ನುಗ್ಗಿಸಿ ಸಿಕ್ಖ ಉಗ್ರರನ್ನು ಮುಗಿಸಿ ಬಿಡುವ “ಆಪರೇಶನ್ ಬ್ಲೂಸ್ಟಾರ್’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದರು.
ಅಲ್ಲಿಯ ಬಳಿಕ ವರ್ಷಂಪ್ರತಿ ಈ ದಿನದಂದು ಸಿಕ್ಖರು “ಆಪರೇಶನ್ ಬ್ಲೂ ಸ್ಟಾರ್’ ಸ್ಮರಣ ವರ್ಷಾಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ.
#WATCH Amritsar: 'Khalistan Zindabad' slogans raised in Golden Temple on Operation Bluestar anniversary pic.twitter.com/dKnSgQQBbA
— ANI (@ANI_news) June 6, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.