ಲಾಹೋರ್ ಒಂಟೆಯ ಭವಿಷ್ಯ ಸುಳ್ಳಾಯಿತು!
Team Udayavani, Jun 6, 2017, 2:05 PM IST
ಲಾಹೋರ್: ವಿಶ್ವ ಮಟ್ಟದ ಕ್ರೀಡಾ ಪಂದ್ಯಾವಳಿಗಳ ವೇಳೆ ಪ್ರಾಣಿಗಳ ಮೂಲಕ “ಭವಿಷ್ಯ’ ತಿಳಿದುಕೊಳ್ಳುವುದು ಈಗೀಗ ಒಂದು ಫ್ಯಾಶನ್ನೇ ಆಗಿಹೋಗಿದೆ. ಚಾಣಕ್ಯ ಎಂಬ ಮೀನು, ಪೌಲ್ ಎಂಬ ಆಕ್ಟೋಪಸ್ ಈಗಾಗಲೇ ಈ ಯಾದಿಯಲ್ಲಿ ಕಾಣಿಸಿಕೊಂಡಿವೆ. ಈಗ ಪಾಕಿ ಸ್ಥಾನದ ಒಂಟೆಯ ಸರದಿ !
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಪತ್ರಕರ್ತನೋರ್ವ ಲಾಹೋರ್ ಮೃಗಾ ಲಯದಿಂದ ಒಂಟೆಯೊಂದರ ಮೂಲಕ ಭವಿಷ್ಯ ತಿಳಿಯುವ ಕೆಲಸಕ್ಕೆ ಇಳಿದಿದ್ದಾನೆ. ಆದರೆ ಈ ಒಂಟೆ ನುಡಿದ ಮೊದಲ ಭವಿಷ್ಯವೇ ಸುಳ್ಳಾಗಿದೆ. ರವಿವಾರದ ಭಾರತದೆದುರಿನ ಪಂದ್ಯದಲ್ಲಿ ಪಾಕ್ ಗೆಲ್ಲುತ್ತದೆಂಬುದು ಈ ಒಂಟೆಯ ಭವಿಷ್ಯವಾಗಿತ್ತು!
ಒಂಟೆಯ ಮುಂದೆ ಭಾರತ ಮತ್ತು ಪಾಕಿಸ್ಥಾನ ಹೆಸರಿನ ಭಿತ್ತಿಪತ್ರ (ಪ್ಲ್ರಾಕಾರ್ಡ್) ಹಿಡಿದಾಗ ಅದು ಪಾಕಿಸ್ಥಾನ ಹೆಸರಿನ ಭಿತ್ತಿಪತ್ರವನ್ನೇ ಆಯ್ಕೆ ಮಾಡಿತು. ಇದನ್ನು ನೋಡಿದ ಪಾಕ್ ಅಭಿಮಾನಿಗಳು “ಜೀತೇಗಾ ಭಾç ಜೀತೇಗಾ ಪಾಕಿಸ್ಥಾನ್ ಜೀತೇಗಾ…’ ಎಂದು ಬೊಬ್ಬಿರಿದು ಕುಣಿದದ್ದೇ ಕುಣಿದದ್ದು! ಇದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ಆನಂದಿಸಬಹುದಾಗಿದೆ.
ಈಗ ಒಂಟೆ ಫಲಿತಾಂಶ ಉಲ್ಟಾ ಹೊಡೆದಿದೆ. ಪಾಕ್ ಅಭಿಮಾನಿಗಳು ಕ್ರುದ್ಧರಾಗಿ ಆ ಒಂಟೆ ಹಾಗೂ ಪತ್ರಕರ್ತನನ್ನು ಹುಡುಕೊಂಡು ಹೋಗಿರಲೂಬಹುದು!
ಆದರೆ ಇಲ್ಲೊಂದು ಸಂಶಯವಿದೆ. ಆ ಒಂಟೆ ಗೆಲ್ಲುವ ತಂಡವನ್ನು ಆಯ್ದದ್ದೇ ಅಥವಾ ಸೋಲುವ ತಂಡವನ್ನೇ?!
ಅಂದಹಾಗೆ ಒಂಟೆ ಮೂಲಕ ಕ್ರಿಕೆಟ್ ಭವಿಷ್ಯ ಹೇಳಲು ಹೊರಟ ಆ ಪತ್ರಕರ್ತ ಸಾಮಾನ್ಯದವನೇನೂ ಅಲ್ಲ, ತನ್ನ ಆಕರ್ಷಕ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಿದ್ಯಮಾನಗಳಿಂದ ಹೆಚ್ಚು ಸುದ್ದಿಯಲ್ಲಿರುವ “ಜಿಯೋ ನ್ಯೂಸ್’ ವರದಿಗಾರ ಅಮೀನ್ ಹಫೀಜ್ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.