ಉತ್ತರ ಪ್ರದೇಶದಲ್ಲಿ ತ್ರಿವಳಿ ಕೊಲೆ,ವ್ಯಾಪಾರಿ ಕುಟುಂಬ ಹಂತಕರಿಗೆ ಬಲಿ
Team Udayavani, Jun 7, 2017, 10:17 AM IST
ಸೀತಾಪುರ, ಉತ್ತರ ಪ್ರದೇಶ : ದರೋಡೆ ಯತ್ನವೆಂಬಂತೆ ಕಂಡು ಬಂದಿರುವ ಭೀಕರ ಪಾತಕ ಕೃತ್ಯವೊಂದರಲ್ಲಿ ಓರ್ವ ವ್ಯಾಪಾರಿ, ಆತನ ಪತ್ನಿ ಹಾಗೂ ಪುತ್ರನನ್ನು ಅಪರಿಚಿತ ಹಂತಕರು ಗುಂಡಿಕ್ಕಿ ಕೊಂದಿದ್ದಾರೆ.
ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಿನ್ನೆ ಮಂಗಳವಾರ ತಡ ರಾತ್ರಿ ನಡೆದಿರುವ ಈ ಕೊಲೆ ಕೃತ್ಯದಲ್ಲಿ ಹತರಾದವರನ್ನು ದವಸ-ಧಾನ್ಯಗಳ ವ್ಯಾಪಾರಿ ಸುನೀಲ್ ಜೈಸ್ವಾಲ್ 45, ಆತನ ಪತ್ನಿ ಕಾಮಿನಿ ಜೈಸ್ವಾಲ್ 42, ಮತ್ತು ಪುತ್ರ ರಿತಿಕ್ 14 ಎಂದು ಗುರುತಿಸಲಾಗಿದೆ.
ಈ ಪಾತಕ ಕೃತ್ಯವು ದರೋಡೆ ಯತ್ನವೆಂಬಂತೆ ಕಂಡು ಬರುತ್ತದೆ ಎಂದಿರುವ ಪೊಲೀಸ್ ಸುಪರಿಂಟೆಂಡೆಂಟ್ ಮೃಗೇಂದ್ರ ಸಿಂಗ್ ಅವರು, “ಹಂತಕರು ಸುನೀಲ್ ಅವರ ಮನೆಯನ್ನು ಪ್ರವೇಶಿಸಿ ಆತನನ್ನು ಗುಂಡಿಕ್ಕಿ ಸಾಯಿಸಿದಾಗ ಮಧ್ಯ ಪ್ರವೇಶಿಸಿದ ಆತನ ಪತ್ನಿ ಮತ್ತು ಮಗನನ್ನು ಕೂಡ ಹಂತಕರು ಗುಂಡಿಕ್ಕಿ ಕೊಂದಿದ್ದಾರೆ’ ಎಂದು ತಿಳಿಸಿದರು.
ಹಂತಕರ ಗುಂಡೇಟಿಗೆ ನೆಲಕ್ಕುರುಳಿದ ಎಲ್ಲ ಮೂವರು ಒಡನೆಯೇ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮನೆಯಲ್ಲಿನ ಸಿಸಿಟಿವಿ ಯಲ್ಲಿ ದಾಖಲಾದ ಚಿತ್ರಿಕೆಗಳನ್ನು ಇದೀಗ ಕ್ರೈಮ್ ಬ್ರಾಂಚ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದರಿಂದ ಹಂತಕರ ತ್ವರಿತ ಪತ್ತೆ ಸಾಧ್ಯವಾಗಬಹುದು ಎಂದು ಎಸ್‌ಪಿ ಮೃಗೇಂದ್ರ ಸಿಂಗ್ ಹೇಳಿದ್ದಾರೆ.
ತ್ರಿವಳಿ ಕೊಲೆಯ ಈ ಘಟನೆಯನ್ನು ಅನುಸರಿಸಿ ಜಿಲ್ಲಾ ವ್ಯಾಪಾರಿಗಳ ಸಂಘಟನೆಯು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿ ಬಂದ್‌ಗೆ ಕರೆ ನೀಡಿದೆಯಲ್ಲದೆ ಹಂತಕರನ್ನು ಬೇಗನೆ ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.