ಮಣಿಪಾಲ ವಿ.ವಿ.: ಹಸಿರು ವಿದ್ಯುತ್‌ಗೆ ಜೋಡಣೆ
Team Udayavani, Jun 7, 2017, 12:50 PM IST
ಉಡುಪಿ: ಮಣಿಪಾಲ ವಿ.ವಿ.ಯ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಅಳವಡಿಸಲಾದ ಸೌರ ಮೇಲ್ಛಾವಣಿಯನ್ನು ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕನಂಜಪ್ಪ ಮಂಗಳವಾರ ಉದ್ಘಾಟಿಸಿದರು. ಇದೂ ಸೇರಿದಂತೆ ಮಣಿಪಾಲ ವಿ.ವಿ.ಯ ಎಂಟು ಕಟ್ಟಡಗಳು ಸೌರ ಮೇಲ್ಛಾವಣಿ ಘಟಕಗಳನ್ನು ಹೊಂದಿದಂತಾಗಿದೆ.
ಮಣಿಪಾಲ ವಿ.ವಿ.ಯ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ ಶೇ.55ನ್ನು ಹಸಿರು ಮೂಲ ದಿಂದ ಸಂಗ್ರಹಿಸಿದಂತಾಗುತ್ತದೆ. ಹಸಿರು ಕ್ಯಾಂಪಸ್‌ನಲ್ಲಿ ವಿ.ವಿ.ಯು ದೇಶದಲ್ಲಿ ಎರಡನೆಯ ರ್‍ಯಾಂಕ್‌ನ್ನು ಪಡೆದಿದೆ.
“ಇದು ಸಹಜವಾಗಿ ಸಾಂಪ್ರದಾಯಿಕ ವಿದ್ಯುತ್ ಮೂಲದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕಾರ್ಬನ್
ಹೊರಸೂಸುವಿಕೆಯೂ ಕಡಿಮೆಯಾಗುತ್ತದೆ. ಇದೊಂದು ಮಹತ್ವದ ಸುಸ್ಥಿರ ಇಂಧನ ಬಳಕೆಗೆ ಮಾರ್ಗವಾಗಿದೆ’ ಎಂದು
ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಚಿಕ್ಕನಂಜಪ್ಪನವರೊಂದಿಗೆ ಸಂವಾದ ನಡೆಸುವಾಗ ತಿಳಿಸಿದರು. ಚಿಕ್ಕನಂಜಪ್ಪನವರು ವಿ.ವಿ. ತೆಗೆದುಕೊಂಡ ನಿರ್ಧಾರವನ್ನು ಶ್ಲಾ ಸಿದರು.
“ನಾವೀಗ ಸಾಂಪ್ರದಾಯಿಕ ಇಂಧನಮೂಲದಿಂದ ನವೀಕರಿಸಬಹುದಾದ ಇಂಧನಕ್ಕೆ ಆಂಶಿಕವಾಗಿ ಬದಲಾಗಿ
ದ್ದೇವೆ. 817 ಕಿಲೋವ್ಯಾಟ್ ಸಾಮರ್ಥ್ಯದ ಘಟಕದ ಉತ್ಪಾದನೆಯನ್ನು ವಾರ್ಷಿಕ 12 ಲಕ್ಷ ಯೂನಿಟ್ ಸ್ವ ಉಪಯೋಗಿ ಉತ್ಪಾದನಾ ಕೇಂದ್ರಕ್ಕೆ ಸಂಪರ್ಕಿಸಲಾಗಿದೆ’ ಎಂದು ವಿ.ವಿ. ಪರಿಸರ ಕಾರ್ಯನಿರ್ವಾಹಕ ಡೆರಿಕ್ ಜೋಶ್ವಾ ಹೇಳಿದರು.
“ಇದು 984 ಮೆಟ್ರಿಕ್ ಟನ್‌ಗೆ ಸಮನಾದ ಕಾರ್ಬನ್ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ, ವರ್ಷಕ್ಕೆ
25,320 ಮೆ.ಟನ್ ಕಾರ್ಬನ್ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ’ ಎಂದು ಕಾರ್ಯನಿರ್ವಾಹಕ ಎಂಜಿನಿ
ಯರ್ (ಎಲೆಕ್ಟ್ರಿಕಲ್), ಎನರ್ಜಿ ಲೀಡ್ ಆಡಿಟರ್ ಶ್ರೀಧರ ರಾವ್ ತಿಳಿಸಿದರು. “
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.