ಬೇರೆ ಪಕ್ಷದೊಂದಿಗೆ ನಡಹಳ್ಳಿ ಲವ್ ಮ್ಯಾರೇಜ್ ಆದರೆ?
Team Udayavani, Jun 8, 2017, 10:58 AM IST
ವಿಧಾನಸಭೆ: ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರನ್ನು ಕಾಂಗ್ರೆಸ್ ಹೊರದಬ್ಬಿತೇ ಅಥವಾ ಅವರಾಗಿಯೇ ಬೇರೆ ಪಕ್ಷದವರೊಂದಿಗೆ ಲವ್ ಮ್ಯಾರೇಜ್ ಮಾಡಿಕೊಂಡರೇ?. ಈ ಪ್ರಶ್ನೆ ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.
ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಎ.ಎಸ್.ಪಾಟೀಲ್ ನಡಹಳ್ಳಿ, ಕೃಷ್ಣಾಕೊಳ್ಳದ ಕಾಮಗಾರಿಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀಡುವುದಾಗಿ ಕೂಡಲಸಂಗಮದಲ್ಲಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿದ್ದಷ್ಟೇ ಬಂತು. ಕಾಯಿ ಒಡೆಯಲೂ ಇಲ್ಲ, ಹಣವೂ ಬರಲಿಲ್ಲ. ಇದನ್ನು ಹೇಳಿದ ನನ್ನನ್ನು ಪಕ್ಷದಿಂದ ಹೊರದಬ್ಬಿದರು ಎಂದು ಹೇಳಿದರು.
ನಾವೇನು ಹೊದಬ್ಬಿಲ್ಲ: ಈ ಸಂದರ್ಭದಲ್ಲಿ ನಡಹಳ್ಳಿ ಅವರನ್ನು ಬೆಂಬಲಿಸಿದ ಗೋವಿಂದ ಕಾರಜೋಳ, ನೀವು ಸತ್ಯ ಹೇಳಿದ್ದಕ್ಕೆ ಹೊರದಬ್ಬಿದರು. ಈ ಸರ್ಕಾರ ಎಲ್ಲಾ ಕೆಲಸವನ್ನು ಹೇಳಿದಂತೆ ಮಾಡಿದೆ ಎಂದು ಸುಳ್ಳು ಹೇಳಿದರೆ ಗೌರವ ಕೊಡುತ್ತಿದ್ದರು ಎಂದು ಹೇಳಿದಾಗ, ನಾವೇನೂ ನಡಹಳ್ಳಿಯವರನ್ನು ಹೊರದಬ್ಬಿಲ್ಲ. ಅವರೇ ಬೇರೆ ಪಕ್ಷದೊಂದಿಗೆ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಮೇಲೆ (ಕಾಂಗ್ರೆಸ್) ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ವಿನಯ್ ಕುಲಕರ್ಣಿ ತಿರುಗೇಟು ನೀಡಿದರು. ಹೀಗಾಗಿ ಶಾಸಕ ನಡಹಳ್ಳಿ ಅವರನ್ನು ಕಾಂಗ್ರೆಸ್ ಹೊರದಬ್ಬಿತೇ ಅಥವಾ ಅವರೇ ಬೇರೆ ಪಕ್ಷದೊಂದಿಗೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆಯೇ ಎಂಬ ಚರ್ಚೆ ಆರಂಭವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.