ಸೂರಂಬೈಲು ಕನ್ನಡ ಮಾಧ್ಯಮ ಶಾಲೆಗೆ ಭವಿಷ್ಯದ ಚಿಂತೆ…!


Team Udayavani, Jun 8, 2017, 4:11 PM IST

0606kpk3.jpg

ಪುತ್ತೂರು : “ಒಂದನೇ ತರಗತಿಗೆ ಸೇರ್ಪಡೆ ಗೊಳ್ಳಲು 5 ವರ್ಷ 10 ತಿಂಗಳು ತುಂಬಬೇಕು’ ಈ ಕಡ್ಡಾಯ ನಿಯಮದಿಂದ ಕರ್ನಾಟಕ-ಕೇರಳ ಗಡಿಭಾಗದ ಶಾಲೆಯೊಂದು ಭವಿಷ್ಯದಲ್ಲಿ  ಮುಚ್ಚುವ ಶಾಲೆಗಳ ಪಟ್ಟಿಗೆ ಸೇರುವ ಭೀತಿಯಲ್ಲಿದೆ!

ಇಂತಹ ಆತಂಕ ಎದುರಿಸುತ್ತಿರುವುದು ಗಡಿ ಪ್ರದೇಶದ ಪಾಣಾಜೆ ಗ್ರಾಮದ ಸೂರಂಬೈಲು ಸರಕಾರಿ ಕನ್ನಡ ಮಾಧ್ಯಮ ಶಾಲೆ. ಹೊಸ ನಿಯಮ ಪರಿಣಾಮ 1ನೇ ತರಗತಿಗೆ ಏಕ ವಿದ್ಯಾರ್ಥಿ ಮಾತ್ರ ದಾಖಲಾತಿಗೆ ಅರ್ಹತೆ ಹೊಂದಿದ್ದಾನೆ. ಗ್ರಾಮದಲ್ಲಿ 5 ವರ್ಷದಾಟಿದ 6ಕ್ಕೂ ಅಧಿಕ ಮಕ್ಕಳಿದ್ದರೂ ಸೇರ್ಪಡೆಗೆ ನಿಯಮ ಅಡ್ಡಿಯೆನಿಸಿದೆ.

ಗಡಿನಾಡ ಶಾಲೆ
ಪಾಣಾಜೆ ಗ್ರಾಮದ ಆರ್ಲಪದವಿನಿಂದ 3 ಕಿ.ಮೀ. ದೂರದಲ್ಲಿ, ಏರು ಪ್ರದೇಶದಲ್ಲಿರುವ ಸೂರಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇರಳ- ಕರ್ನಾಟಕದ ಗಡಿ ಭಾಗದಲ್ಲಿದೆ. ಶಾಲೆಯಿಂದ ತುಸು ದೂರದಲ್ಲಿ ಕೇರಳ ರಾಜ್ಯಕ್ಕೆ ಸೇರಿದ ಸ್ವರ್ಗ ಪ್ರದೇಶವಿದೆ. ಗಡಿ ಗ್ರಾಮದ ವಿದ್ಯಾರ್ಥಿಗಳಿಗೆ ಈ ಶಾಲೆ ಉಪಯುಕ್ತವೂ ಹೌದು. 1959ರಲ್ಲಿ ಸ್ಥಾಪನೆಗೊಂಡ ಈ ಸರಕಾರಿ ಶಾಲೆಗೆ 58 ವರ್ಷ ಸಂದಿದೆ.

ಈ ಬಾರಿ ದಾಖಲಾತಿಗೆ ಹೊಸ ನಿಯಮ ಅಡ್ಡಿ ಉಂಟು ಮಾಡಿದೆ. ಬಹುತೇಕ ಶಾಲೆಗಳ ವ್ಯಾಪ್ತಿಯಲ್ಲಿ ಮಕ್ಕಳು ಇಲ್ಲ ಎಂಬ ಸಮಸ್ಯೆಯಿದ್ದರೆ, ಈ ಊರಲ್ಲಿ ಮಕ್ಕಳು ಇದ್ದರೂ, ಶಾಲೆಗೆ ಸೇರಿಸುವಂತಿಲ್ಲ. ಹಾಗಾಗಿ ಮಕ್ಕಳ ಹೆತ್ತವರು ಈ ನಿಯಮದಿಂದ ಮಕ್ಕಳನ್ನು ಸೇರಿಸಲಾಗದ ಸಮಸ್ಯೆಗೆ ಸಿಲುಕಿದ್ದಾರೆ. ಜತೆಗೆ ಭವಿಷ್ಯದಲ್ಲಿ ಮಕ್ಕಳು ಬಾರದೆ ಗಡಿನಾಡ ಶಾಲೆ ಮುಚ್ಚುವ ಆತಂಕವೂ ವ್ಯಕ್ತವಾಗಿದೆ.

ಮಕ್ಕಳ ಸಂಖ್ಯೆ ಕುಸಿತ
ಇಲ್ಲಿ 1ರಿಂದ 7ನೇ ತರಗತಿ ತನಕ ಒಟ್ಟು ಇರುವ ಮಕ್ಕಳ ಸಂಖ್ಯೆ-34. ಈ ಬಾರಿ ಒಂದನೇ ತರಗತಿ ಯಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಇದ್ದಾನೆ. 2ನೇ ತರಗತಿಯಲ್ಲಿ – 7, 3ನೇ ತರಗತಿಯಲ್ಲಿ-8, 4ನೇ ತರಗತಿಯಲ್ಲಿ -5, 5ನೇ ತರಗತಿಯಲ್ಲಿ- 3, 6ನೇ ತರಗತಿಯಲ್ಲಿ-4, 7ನೇ ತರಗತಿಯಲ್ಲಿ – 6 ವಿದ್ಯಾರ್ಥಿಗಳಿದ್ದಾರೆ. ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬಗಳ ಮಕ್ಕಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ದ್ದಾರೆ. 

ನಿಯಮ ಬದಲಾಯಿಸಿ 
ಹೊಸ ನಿಯಮದಿಂದ ಮಕ್ಕಳು ಶಾಲೆಗೆ ಸೇರುವ ಪರಿಸ್ಥಿತಿಯಿಲ್ಲ. ಮೊದಲೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ವಯಸ್ಸಿನ ಮಿತಿ ಕಡ್ಡಾಯ ಜಾರಿಯಿಂದ ಈ ಸಮಸ್ಯೆ ಇನ್ನಷ್ಟು ಉದ್ಭವಿಸಿದೆ. ಈ ಹಿಂದೆ ಇದ್ದಂತೆ 5 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದಾಖಲಾತಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸೂರಂಬೈಲು ಮೊದಲಾದ ಗಡಿನಾಡಿನ ಶಾಲೆಗಳು ಮುಚ್ಚುವ ಪಟ್ಟಿಗೆ ಸೇರಬಹುದು.
– ನಾರಾಯಣ ಪೂಜಾರಿ,
ಅಧ್ಯಕ್ಷರು, ಪಾಣಾಜೆ, ಗ್ರಾ.ಪಂ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.