ಕಬ್ಬನ್‌ಪಾರ್ಕ್‌ನ ಎಲ್ಲ ಗೇಟ್‌ಗಳಲ್ಲೂ ಸಂಚಾರಕ್ಕೆ ಆದೇಶ
Team Udayavani, Jun 9, 2017, 12:38 PM IST
ಬೆಂಗಳೂರು: ಕಬ್ಬನ್‌ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಪೊಲೀಸ್ ಇಲಾಖೆ ನಡುವೆ ಸಂಘರ್ಷ ನಡೆಯುತ್ತಿದೆ. ಉದ್ಯಾನದಲ್ಲಿ ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ತೋಟಗಾರಿಕೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇದರ ಬೆನ್ನಲ್ಲೇ ಪೊಲೀಸ್ ಇಲಾಖೆಯು “ಸಂರಕ್ಷಿತ ವ್ಯಕ್ತಿ’ಗಳ (ವಿವಿಐಪಿ) ನೆಪದಲ್ಲಿ ಯಾವುದೇ ಕಾರಣಕ್ಕೂ ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧಿಸಬಾರದು. ವಾಹನಗಳ ಸಂಖ್ಯೆ ದುಪ್ಪಟ್ಟು ಆಗಿದ್ದು, ವಿವಿಐಪಿ ವ್ಯಕ್ತಿಗಳ ಸುಗಮ ಸಂಚಾರಕ್ಕೆ ಉದ್ಯಾನದ ಎಲ್ಲ ದ್ವಾರಗಳನ್ನು ವಾರದ ಆರು ದಿನ ಮುಕ್ತಗೊಳಿಸಬೇಕು ಎಂದು ಪಟ್ಟುಹಿಡಿದಿದೆ. ಅಷ್ಟೇ ಅಲ್ಲ, ಈಗಾಗಲೇ ಈ ಸಂಬಂಧ ಅಧಿಸೂಚನೆ ಕೂಡ ಹೊರಡಿಸಿದೆ.
ಇದು ಎರಡೂ ಇಲಾಖೆಗಳ ನಡುವೆ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ. ನಗರದ ನೃಪತುಂಗ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕಬ್ಬನ್‌ಪಾರ್ಕ್‌ನಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಉದ್ಯಾನದಲ್ಲಿ ಶಬ್ದ ಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದಲ್ಲದೆ, ವಾಯು ಮಾಲಿನ್ಯದ ಪ್ರಮಾಣ ಕೂಡ ಮಿತಿ ಮೀರಿತ್ತು ಎನ್ನಲಾಗಿದೆ.
ಹೈಕೋರ್ಟ್, ಕೇಂದ್ರ ಗ್ರಂಥಾಲಯದ ಪ್ರದೇಶವು ನಿಶಬ್ದ ವಲಯವಾಗಿದ್ದು, ಹಗಲಿನಲ್ಲಿ ಶಬ್ದದ ಮಟ್ಟ 50 ಡಿಬಿ(ಎ) ಮತ್ತು ರಾತ್ರಿ ವೇಳೆ 40ಡಿಬಿ (ಎ) ಇರಬೇಕಿತ್ತು. ಆದರೆ, ಪ್ರಸ್ತುತ ಶಬ್ದದ ತೀವ್ರತೆ ನಿಗದಿತ ಮಟ್ಟಕ್ಕಿಂತ ಶೇ.29.4ಡಿಬಿ(ಎ) ಹೆಚ್ಚಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನ ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕಬ್ಬನ್ ಉದ್ಯಾನದ ಏಳು ಗೇಟುಗಳ ಪೈಕಿ ಹೈಕೋರ್ಟ್‌ನಿಂದ ಯುಬಿ ಸಿಟಿಯ ಕಡೆಗೆ ಹೋಗುವುದು ಹಾಗೂ ಯುಬಿ ಸಿಟಿ ಕಡೆಯಿಂದ ಉದ್ಯಾನದ ಒಳಗೆ ಬಂದು ಬಹುಮಹಡಿಗಳ ಕಟ್ಟಡದ ದ್ವಾರದ ಮುಖಾಂತರವೇ ನಿರ್ಗಮಿಸಬೇಕು. ಅಂದರೆ ಉದ್ಯಾನದ 4 ದ್ವಾರಗಳನ್ನು ಮಾತ್ರ ವಾಹನ ಸಂಚಾರಕ್ಕೆ ಮುಕ್ತ ಮಡಿಕೊಟ್ಟು, ಉಳಿದ 3 ದ್ವಾರಗಳಲ್ಲಿ ಶಾಶ್ವತವಾಗಿ ವಾಹನ ಸಂಚಾರ ನಿಷೇಧಿಸಲು ಅನುಮತಿ ನೀಡುವಂತೆ ತೋಟಗಾರಿಕೆ ಇಲಾಖೆ ಕೆಲವೇ ದಿನಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಪೊಲೀಸ್ ಇಲಾಖೆ ಆದೇಶ: ತೋಟಗಾರಿಕೆ ಇಲಾಖೆ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುವ ಮುನ್ನವೇ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಅವರು ಕಬ್ಬನ್‌ಪಾರ್ಕ್‌ನ ಏಳು ದ್ವಾರಗಳಲ್ಲೂ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಗೇಟ್ ತೆರೆಯಲು ಕಬ್ಬನ್‌ಪಾರ್ಕ್ ಸಂಚಾರ ಪೊಲೀಸರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಇರುವಂತೆ ಬೆಂಗಳೂರು ನಗರದಲ್ಲಿ 2009ರಲ್ಲಿ 24 ಲಕ್ಷ ಇದ್ದ ವಾಹನಗಳ ಸಂಖ್ಯೆ ಪ್ರಸ್ತುತ 67 ಲಕ್ಷ ಮೀರಿದೆ.
ನಗರದ ರಸ್ತೆಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳನ್ನು ನಿರ್ವಹಿಸುತ್ತಿವೆ. ಅಲ್ಲದೆ ವಿಧಾನಸೌಧದ ಸುತ್ತಮುತ್ತಲಿನ ವಿಐಪಿಗಳ ಓಡಾಟಕ್ಕೆ ಅಡಚಣೆ ಆಗದಂತೆ ಸುಗಮ ಸಂಚಾರ ಕಲ್ಪಿಸಲು ಕಬ್ಬನ್‌ಉದ್ಯಾನದಲ್ಲಿ ಲಭ್ಯವಿರುವ ಎಲ್ಲ ಗೇಟ್‌ಗಳ ಮೂಲಕ ಸಂಚಾರಕ್ಕೆ ಅನುಮತಿ ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಕಬ್ಬನ್ ಉದ್ಯಾನದೊಳಕ್ಕೆ ವಾಹನ ಸಂಚಾರ ನಿರ್ಬಂಧಿಸಿ ಹೊರಡಿಸಲಾಗಿದ್ದ ಇಲ್ಲಿಯವರೆಗಿನ ಎಲ್ಲಾ ಅಧಿಸೂಚನೆಗಳನ್ನು ಬದಿಗಿಟ್ಟು ಉದ್ಯಾನದಲ್ಲಿ ವಾಹನ ಪ್ರವೇಶಕ್ಕೆ ಆದೇಶಿಸಿರುವುದಾಗಿ ಉಲ್ಲೇಖೀಸಲಾಗಿದೆ.
ಏಕಾಏಕಿ ಆದೇಶ: ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಎಲ್ಲ ಗೇಟ್ ಮುಕ್ತಗೊಳಿಸುವಂತೆ ಪೊಲೀಸ್ ಆಯುಕ್ತರು ನೀಡಿರುವ ಆದೇಶದ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕಿಂಚಿತ್ತು ಮಾಹಿತಿಯೂ ಇರಲಿಲ್ಲ. ಬುಧವಾರ ಸಂಜೆ ಏಕಾಏಕಿ ಪೊಲೀಸ್ ಅಧಿಕಾರಿಗಳು ಕಬ್ಬನ್‌ಪಾರ್ಕ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಈ ಆದೇಶ ಪತ್ರ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಬ್ಬನ್‌ಪಾರ್ಕ್‌ನಲ್ಲಿ ಪ್ರತಿ ಭಾನುವಾರ ಮತ್ತು ತಿಂಗಳ ಎರಡನೇ ಶನಿವಾರ ಸೇರಿದಂತೆ ರಾಷ್ಟ್ರೀಯ ಮೂರು ಹಬ್ಬಗಳ ಸಂದರ್ಭದಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂದು ಕಳೆದ 2 ವರ್ಷಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿತ್ತು. ಆ ಆದೇಶವನ್ನೇ ಇಲ್ಲಿಯವರೆಗೆ ಪಾಲಿಸಿಕೊಂಡು ಬರಲಾಗುತ್ತಿದೆ. ಈ ನಡುವೆ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಉದ್ಯಾನದಲ್ಲಿ 24 ಗಂಟೆಗಳ ಕಾಲ ಅವಕಾಶ ನೀಡಬೇಕು ಎನ್ನುವ ವಿಚಾರದಲ್ಲಿಯೇ ಪೊಲೀಸ್ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ನಡುವೆ ತಿಕ್ಕಾಟ ನಡೆದಿತ್ತು.
ಶಬ್ಧ ಮಾಲಿನ್ಯದ ಪರಿಮಾಣ ಅಳತೆ: ನೃಪತುಂಗ ರಸ್ತೆ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಕಬ್ಬನ್‌ಪಾರ್ಕ್‌ನಲ್ಲಿ ಅವಕಾಶ ನೀಡಿದ್ದ ಸಂದರ್ಭದಲ್ಲಿ ಏ.12ರಿಂದ 18ರವರೆಗಿನ ಶಬ್ದ ಮಾಲಿನ್ಯದ ಪ್ರಮಾಣ ಎಷ್ಟಿತ್ತು ಎಂಬುದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾಖಲಿಸಿದೆ. ಏ.16ರಂದು ಭಾನುವಾರ ಕನಿಷ್ಠ 61.5ಡಿಬಿ(ಎ)ರಷ್ಟು ದಾಖಲಾಗಿದ್ದರೆ, ಏ.17ರಂದು 66.6ಡಿಬಿ(ಎ)ದಾಖಲಾಗಿದೆ. ಸಾಮಾನ್ಯವಾಗಿ ದಿನದಲ್ಲಿ 50ಡಿಬಿ(ಎ) ಸಾಮಾನ್ಯ ಮಟ್ಟವಾಗಿರುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶದ ಬಗ್ಗೆ ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಇಲಾಖೆ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಗಿದ್ದು, ಜೂ.10 ಅಥವಾ 11ರಂದು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ಪಿ.ಸಿ.ರೇ, ಆಯುಕ್ತರು, ತೋಟಗಾರಿಕೆ ಇಲಾಖೆ.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.