ಜ್ಞಾನ ಹೆಚ್ಚಾದಂತೆ ಶೋಷಣೆಯೂ ಹೆಚ್ಚಾಯ್ತು
Team Udayavani, Jun 9, 2017, 1:02 PM IST
ಮೈಸೂರು: ವೇದಗಳ ಕಾಲದಲ್ಲಿ ಸಮಾಜದಲ್ಲಿದ್ದ ಶೋಷಣೆಯನ್ನು ಜ್ಞಾನ ತೊಡಯಬೇಕಿತು. ಆದರೆ, ಅದೇ ಜ್ಞಾನವೇ ಹಲವು ವರ್ಗಗಳನ್ನು ಶೋಷಣೆಗೆ ಗುರಿ ಮಾಡಿದೆ ಎಂದು ಮೈಸೂರಿನ ರಮ್ಮನಹಳ್ಳಿ ಬಸವಧ್ಯಾನ ಮಂದಿರದ ಶರಣ ಬಸವಲಿಂಗಮೂರ್ತಿ ವಿಷಾದಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಲಿತ ವಚನಕಾರರ ಜಯಂತ್ಯುತ್ಸವ ಸಮಿತಿ ವತಿಯಿಂದ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತು ಸೃಷ್ಟಿಯಾದ ಸಂದರ್ಭದಲ್ಲಿ ಯಾವುದೇ ಜಾತಿ, ಧರ್ಮಗಳು ಇರಲಿಲ್ಲ. ಹೀಗಾಗಿ ವೇದ ಪೂರ್ವದಲ್ಲಿ ಜಾತಿ, ಧರ್ಮಗಳಿರಲಿಲ್ಲ. ಆದರೆ ಮಾನವನ ವಿಕಾಸವಾದಂತೆ ನಾವೆಲ್ಲರೂ ನಾಗರಿಕತೆಯತ್ತ ಮುಖ ಮಾಡಿದ್ದು, ಅದರಂತೆ ವೇದಗಳ ಕಾಲದ ನಂತರ ಅಕ್ಷರಸ್ಥರು ಹಾಗೂ ಅನಕ್ಷರಸ್ಥರೆಂಬ ಬೇಧ ಶುರುವಾಗಿ, ಜೀತ ಪದ್ಧತಿ ಆರಂಭಗೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇದ ಕಾಲದಲ್ಲಿ ಸಮಾಜದಲ್ಲಿದ್ದ ಶೋಷಣೆಯನ್ನು ಜ್ಞಾನ ಎಂಬುದು ತೊಡೆಯಬೇಕಾಗಿತ್ತು. ಆದರೆ, ಸಾರ್ವಜನಿಕವಾಗಬೇಕಿದ್ದ ಜ್ಞಾನ ಕೇವಲ ಉಳ್ಳವರ ಪರವಾಗಿ ಮಾತ್ರವೇ ಉಳಿದ ಪರಿಣಾಮ ಕೆಲವು ಸಮುದಾಯಗಳು ಶೋಷಣೆಗೆ ಗುರಿಯಾಗಬೇಕಾಯಿತು. ಅಲ್ಲದೆ ಅಕ್ಷರಸ್ಥರು ಹಾಗೂ ಪುರೋಹಿತರು ವೇದ, ಉಪನಿಷತ್ತನ್ನು ತಮಗೆ ಬೇಕಾದಂತೆ ಕರೆದುಕೊಂಡರು. ಇದರಿಂದಾಗಿ ಸಮಾಜದಲ್ಲಿ ಭೇದ ಭಾವಗಳು ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ವರ್ಣಗಳು ಸಹ ಸೃಷ್ಟಿಯಾಯಿತು ಎಂದರು.
ರಾಮಾನುಜಚಾರ್ಯರು ಶೋಷಿತರನ್ನು ಹರಿಜನರೆಂದು ಕರೆದು ದೀಕ್ಷೆ ನೀಡಿದರು, ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡಲಿಲ್ಲ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಎಲ್ಲಾ ಶೋಷಿತರನ್ನು ಒಗ್ಗೂಡಿಸಿದ ಪರಿಣಾಮ ಬಸವಣ್ಣನ ಕಾಲದಲ್ಲಿ 700ಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರಲ್ಲದೆ, ಶೂದ್ರರು ಸಹ ಸಾಹಿತ್ಯ ಕ್ರಾಂತಿ ಮಾಡಿದರು ಎಂದು ತಿಳಿಸಿದರು.
ಮೈಲ್ಯಾಕ್ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ವಚನಗಳು ಜನ ಸಾಮಾನ್ಯರಿಗೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ವಚನಕಾರರು ಇಂದಿಗೂ ಜನ ಮಾನಸದಲ್ಲಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯಕ್ಕಾಗಿ ವಚನಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದರು. ಆ ಮೂಲಕ ಹಲವು ವಚನಕಾರರು ತಮ್ಮ ಅನುಭವದಿಂದ ವಚನಗಳಿಂದ ಶ್ರಮದಿಂದ ಬದುಕುವ ವರ್ಗ, ಬಡವರ ಕಷ್ಟಗಳನ್ನು ಬಿಂಬಿಸಿದ್ದರು.
ಅಲ್ಲದೆ ಬಸವಣ್ಣ ಸೇರಿದಂತೆ ಹಲವು ವಚನಕಾರರು, ಅಂಬೇಡ್ಕರ್, ದೇವರಾಜ ಅರಸು ಸಮಾನತೆಯ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದರು. ಹೀಗಾಗಿ ಇವರುಗಳ ಜಯಂತಿಗಳಿಗೆ ರಜೆ ನೀಡುವುದು ಸರಿಯಲ್ಲ ಎಂದ ಅವರು, ಇದರ ಬದಲು ಜೀವನ ಸಂದೇಶಗಳನ್ನು ಪ್ರತಿಯೊಬ್ಬರಿಗೆ ತಲುಪಿಸಿದಾಗ ಮಾತ್ರವೇ ಅವರ ಜಯಂತಿ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಸಾಹಿತಿ ಪೊ›. ಕೆ.ಎಸ್.ಭಗವಾನ್, ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.