ಪೌರಕಾರ್ಮಿಕರಿಗೆ ಉಪಾಹಾರ ಪ್ರಸ್ತಾಪ ತಿರಸ್ಕಾರ
Team Udayavani, Jun 9, 2017, 3:52 PM IST
ಹುಬ್ಬಳ್ಳಿ: ಪಾಲಿಕೆಯ ಕಾಯಂ ಹಾಗೂ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ನಿತ್ಯ ಉಪಹಾರ ನೀಡಬೇಕೆಂಬ ಪ್ರಸ್ತಾವನೆ ತಿರಸ್ಕರಿಸಿದ ಪಾಲಿಕೆ ಸಾಮಾನ್ಯ ಸಭೆ, ಪೌರಕಾರ್ಮಿಕರಿಗೆ ಪ್ರಸ್ತುತದ ನಗದು ರೂಪದ ಸೌಲಭ್ಯ ಮುಂದುವರಿಸಬೇಕು. 20ರೂ. ಬದಲು ನಿತ್ಯ 25 ರೂ. ಗಳನ್ನು ನೇರವಾಗಿ ಪೌರ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ನಿರ್ಣಯಿಸಿತು.
ಪಾಲಿಕೆ ಪರಿಸರ ವಿಭಾಗದ ಅಧಿಕಾರಿ ಗಿರೀಶ ಪೌರಾಡಳಿತ ನಿರ್ದೇಶನ ಮೇರೆಗೆ ಪಾಲಿಕೆಯಲ್ಲಿನ 640 ಕಾಯಂ ಪೌರ ಕಾರ್ಮಿಕರು ಹಾಗೂ 1,888 ಹೊರಗುತ್ತಿಗೆ ಪೌರ ಕಾರ್ಮಿಕರು ಸೇರಿ ಒಟ್ಟು 2528 ಪೌರ ಕಾರ್ಮಿಕರಿಗೆ ನಿತ್ಯವೂ ಉಪಹಾರ ನೀಡಬೇಕು. ಇದಕ್ಕಾಗಿ ವಾರ್ಷಿಕ 1.84ಕೋಟಿ ರೂ.ಅಂದಾಜು ವೆಚ್ಚ ತಗುಲಲಿದೆ ಎಂದರು.
ಸದಸ್ಯರಾದ ಡಾ| ಪಾಂಡುರಂಗ ಪಾಟೀಲ, ವೀರಣ್ಣ ಸವಡಿ ಮಾತನಾಡಿ, ಇದು ವಾಸ್ತವಿಕವಾಗಿ ಸಾಧ್ಯವಾಗದು. ಉಪಾಹಾರ ಗುಣಮಟ್ಟ, ಸಕಾಲಕ್ಕೆ ಪೌರ ಕಾರ್ಮಿಕರು ಇದ್ದಲ್ಲಿ ಅದನ್ನು ತಲುಪಿಸುವುದು ಸಾಧ್ಯವಾಗದ ಮಾತು. ಕಳಪೆ ಉಪಹಾರ ನೀಡಿದರೆ ಮತ್ತೂಂದು ವಿವಾದಕ್ಕೆ ದಾರಿ ಮಾಡಿಕೊಡಲಿದೆ.
ಅದರ ಬದಲು ಪೌರ ಕಾರ್ಮಿಕರಿಗೆ ಪ್ರಸ್ತುತ ನೀಡುತ್ತಿರುವ 20 ರೂ. ಉಪಹಾರ ಭತ್ಯೆಯನ್ನು ಮುಂದುವರಿಸಿ ಅದನ್ನು 25 ರೂ.ಗೆ ಹೆಚ್ಚಿಸಿ ಎಂದರು. ಸದಸ್ಯರಾದ ಸುಭಾಸ ಶಿಂಧೆ, ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರು ಇನ್ನಿತರರು ಇದನ್ನು ಬೆಂಬಲಿಸಿದರು. ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರರ ಮೂಲಕ ಉಪಾಹಾರ ಭತ್ಯೆ ನೀಡದೆ ನೇರವಾಗಿ ಅವರ ಖಾತೆಗೆ ನೀಡಿ ಎಂದರು.
ಕಾಂಗ್ರೆಸ್ ಸದಸ್ಯ ಪ್ರಕಾಶ ಕ್ಯಾರಕಟ್ಟಿ ಮಾತ್ರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತುಮಕೂರು ಇನ್ನಿತರ ಕಡೆಗಳಲ್ಲಿ ಪೌರ ಕಾರ್ಮಿಕರಿಗೆ ಉಪಾಹಾರ ನೀಡಲಾಗುತ್ತದೆ. ಇಲ್ಲಿಯೂ ಪೌರ ಕಾರ್ಮಿಕರಿಗೆ ನೀಡಬೇಕು. ಆಯಾ ವಾರ್ಡ್‌ಗೆ ತಲುಪಿಸುವುದು ಕಷ್ಟದ ಕೆಲಸವೇನಲ್ಲ ಎಂದರಲ್ಲದೆ, ಗುತ್ತಿಗೆ ಕಾರ್ಮಿಕರಿಗೆ ನೇರವಾಗಿ ಉಪಾಹಾರ ಭತ್ಯೆ ನೀಡಲು ಅವಕಾಶ ಇಲ್ಲ ಅದನ್ನು ಗುತ್ತಿಗೆದಾರರ ಮೂಲಕವೇ ನೀಡಬೇಕು ಎಂದರು.
ಇದಕ್ಕೆ ಡಾ| ಪಾಂಡುರಂಗ ಪಾಟೀಲ ಸೇರಿದಂತೆ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಇದು ವೇತನವಲ್ಲ ಪಾಲಿಕೆಯಿಂದ ಸಿಗುವ ಉಪಾಹಾರ ಭತ್ಯೆ ಆಗಿರುವುದರಿಂದ ನೇರವಾಗಿ ಗುತ್ತಿಗೆ ಕಾರ್ಮಿಕರಿಗೆ ನೀಡಲು ಅವಕಾಶವಿದೆ ಎಂದರು. ಪೌರ ಕಾರ್ಮಿಕರಿಗೆ ಉಪಹಾರ ನೀಡುವ ಬದಲು ನಿತ್ಯ 25 ರೂ.ನಂತೆ ಪೌರ ಕಾರ್ಮಿಕರಿಗೆ ಮಾಸಿಕವಾಗಿ ಹಣ ನೀಡಬೇಕು ಎಂದು ಆದೇಶಿಸಿದರು.
ಪೀಠದೆದರು ಧರಣಿ: ವಲಯ ಕಚೇರಿಗಳ ಸುಮಾರು 6 ಸಹಾಯಕ ಆಯುಕ್ತರನ್ನು ವರ್ಗಾಯಿಸಿದ್ದನ್ನು ಖಂಡಿಸಿ ಪಕ್ಷಾತೀತವಾಗಿ ಸದಸ್ಯರು ಮಹಾಪೌರರ ಪೀಠದೆದರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸದಸ್ಯರು ಪೀಠದೆದರು ಕೆಲ ನಿಮಿಷ ಧರಣಿ ಕೈಗೊಂಡರು.
ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯ ಗಣೇಶ ಟಗರಗುಂಟಿ ವಿಷಯ ಪ್ರಸ್ತಾಪಿಸಿ, ಮಳೆಗಾಲ ಆರಂಭವಾಗುತ್ತಿದ್ದು, ಇಂತಹ ಸಮಯದಲ್ಲಿ ಅಧಿಕಾರಿಗಳನ್ನು ವರ್ಗಾಯಿಸಿ ಅನುಭವ ಇಲ್ಲದ ಹೊಸಬರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಅನೇಕ ಸದಸ್ಯರು ಇದನ್ನು ಬೆಂಬಲಿಸಿದರು. ಸದಸ್ಯರು ಮಹಾಪೌರರ ಪೀಠದೆದುರು ತೆರಳಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಹಾಪೌರ ಡಿ.ಕೆ.ಚವ್ಹಾಣ ಮಳೆಗಾಲ ಮುಗಿಯುವರೆಗೆ ಇದ್ದ ಅಧಿಕಾರಿಗಳನ್ನೇ ಮುಂದುವರಿಸಿ, ಹೊಸ ಅಧಿಕಾರಿಗಳನ್ನು ಅವರ ಜತೆಯಲ್ಲೇ ಕಾರ್ಯ ನಿರ್ವಹಿಸಲು ಬಿಡಬೇಕು ಎಂದು ಹೇಳಿದರಾದರೂ ಇದಕ್ಕೆ ಅನೇಕ ಸದಸ್ಯರು ಆಕ್ಷೇಪ ತೋರಿದರು. ಕೊನೆಗೆ ಪಾಲಿಕೆ ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
MUST WATCH
ಹೊಸ ಸೇರ್ಪಡೆ
BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್
1st ODI: ಇಂಗ್ಲೆಂಡ್ ವಿರುದ್ಧ ವಿಂಡೀಸ್‌ಗೆ 8 ವಿಕೆಟ್ ಜಯ
Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.