ಮುಂಗಾರು ಬಿತ್ತನೆ ಕಾರ್ಯ ಚುರುಕು
Team Udayavani, Jun 9, 2017, 4:11 PM IST
ಚಿತ್ತಾಪುರ: ಮುಂಗಾರು ಮಳೆ ಈಗಾಗಲೇ ರಾಜ್ಯ ಪ್ರವೇಶಿಸಿದ್ದು, ಜೂ.6 ರಿಂದ ತಾಲೂಕಿಗೆ ಮಳೆ ಲಗ್ಗೆಯಿಟ್ಟಿದೆ. ಹೀಗಾಗಿ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದರೆ, ಕೃಷಿ ಇಲಾಖೆ ಅಗತ್ಯ ಬೀಜ ದಾಸ್ತಾನು ಮಾಡಿಕೊಂಡಿದೆ. ಬಿಸಿಲ ನಾಡು ಹಾಗೂ ತೊಗರಿ ಖಣಜ ಎಂದೇ ಖ್ಯಾತಿ ಪಡೆದ ತಾಲೂಕಿನ ರೈತರು ಈ ಬಾರಿಯಾದರೂ ಉತ್ತಮ ಮುಂಗಾರು ಮಳೆ ಸುರಿಯಲಿ.
ಎಲ್ಲರ ಬಾಳು ಹಸನಾಗಲಿ ಎಂಬ ಆಶಾಭಾವದೊಂದಿಗೆ ಮುಂಗಾರು ಬಿತ್ತನೆಗೆ ಜಮೀನುಗಳನ್ನು ಹದಗೊಳಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಮಳೆ ಅಭಾವದಿಂದ ಹತ್ತಿ ಬಿತ್ತನೆಯಲ್ಲಿ ಹಿನ್ನಡೆಯಾಗಿತ್ತು. ಕಳೆದ ವರ್ಷ 61,525 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಪೈಕಿ 54,883 ಹೆಕ್ಟೇರ್‌ನಲ್ಲಿ ತೊಗರಿ, 34 ಹೆಕ್ಟೇರ್ ಭತ್ತ, 1755 ಹೆಕ್ಟೇರ್ ಸಜ್ಜೆ, 222 ಹೆಕ್ಟೇರ್ ಹತ್ತಿ, 350 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು.
ಆದರೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಹೆಸರು, ಉದ್ದು ಬಿತ್ತನೆ ಹೆಚ್ಚಳವಾಗುವ ಸಾಧ್ಯತೆ ವ್ಯಕ್ತಪಡಿಸಿರುವ ಕೃಷಿ ಇಲಾಖೆ, ತೊಗರಿ ಬಿತ್ತನೆಯಲ್ಲಿ ಇಳಿಮುಖವಾಗುವ ಲೆಕ್ಕಾಚಾರದಲ್ಲಿದೆ. ನೆಟೆರೋಗ ಸೇರಿ ಬೆಲೆ ಕುಸಿತವೇ ಕಾರಣ ಎನ್ನಲಾಗುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 77, 525 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಿರೀಕ್ಷೆಯಿಟ್ಟುಕೊಂಡಿದೆ.
85 ಹೆಕ್ಟೇರ್‌ನಷ್ಟು ಭತ್ತ, 1750 ಹೆಕ್ಟೇರ್ ಸಜ್ಜೆ, 5700 ಹೆಕ್ಟೇರ್ ಹೆಸರು, 61525 ಹೆಕ್ಟೇರ್ ತೊಗರಿ, 840 ಹೆಕ್ಟೇರ್ ಸೂರ್ಯಕಾಂತಿ, 10 ಹೆಕ್ಟೇರ್ ನವಣೆ ಹಾಗೂ 15 ಹೆಕ್ಟೇರ್ ಔಡಲ ಬೆಳೆಯಬಹುದು ಎಂದು ನಿರೀಕ್ಷಿಸಿದೆ. 800 ಹೆಕ್ಟೇರ್‌ನಷ್ಟು ಸೋಯಾಬೀನ್, 250 ಹತ್ತಿ ಬಿತ್ತನೆಯಾಗುವ ಸಾಧ್ಯತೆಯಿದೆ. ಮುಂಗಾರಿಗೆ ಪೂರಕವಾಗುವಂತೆ 400 ಕ್ವಿಂಟಲ್ ತೊಗರಿ ಬೀಜ.
4 ತಳಿ ಭತ್ತವನ್ನು ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮದಿಂದ ಸಂಗ್ರಹಿಸಿದೆ. 400 ಕ್ವಿಂಟಲ್ ಟಿಎಸ್3ಆರ್ ತಳಿ ತೊಗರಿ, 250 ಕ್ವಿಂಟಲ್ ಶೈನಿಂಗ್ ತಳಿ ಹೆಸರು, 20 ಕ್ವಿಂಟಲ್ ಸಜ್ಜೆ, 10 ಕ್ವಿಂಟಲ್ ಸೂರ್ಯಕಾಂತಿ, 100 ಕ್ವಿಂಟಲ್ ಉದ್ದನ್ನು ಈಗಾಗಲೇ ಆರ್‌ಎಸ್‌ಕೆಗಳಲ್ಲಿ ಸಂಗ್ರಹಿಸಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಸರ್ಕಾರ ಅನುಮೋದಿಸಿದ ಸಂಸ್ಥೆಗಳಿಂದ ಬೀಜ ಪಡೆದು ರೈತರಿಗೆ ನೀಡಲಾಗುತ್ತದೆ.
ಈ ವರ್ಷ 85 ಹೆಕ್ಟೇರ್‌ನಲ್ಲಿ ಭತ್ತವನ್ನು ಕೂರಿಗೆ ಮೂಲಕ ಬಿತ್ತನೆ ಗುರಿ ಹೊಂದಲಾಗಿದೆ. ನೀರಾವರಿಯಾಶ್ರಿತ ಪ್ರದೇಶದಲ್ಲಿ ಕೂರಿಗೆಯಿಂದ ಬಿತ್ತನೆಗೆ ಮುಂದಾಗುವುದು ಸೂಕ್ತ. ರೈತರು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಮೊರೆ ಹೋಗದೆ, ಹಸಿರೆಲೆ ಹಾಗೂ ಸಾವಯುವ ಗೊಬ್ಬರ ಬಳಸಬೇಕು. ತೊಗರಿಯಲ್ಲಿ ಅಂತರ ಬೆಳೆಯಾಗಿ ತೃಣ ಧಾನ್ಯ ಬೆಳೆಯಲು ಜಾಗೃತಿ ಮೂಡಿಸಲಾಗುತ್ತಿದೆ.
ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಹೋಬಳಿ ಮಟ್ಟದಿಂದ ಕೃಷಿ ಅಭಿಯಾನ ಕೈಗೊಂಡು ರೈತರು ತೊಗರಿ ಬಿತ್ತನೆ ಬದಲಿಗೆ ಕಾಳು ಊರಲು ಪ್ರೋತ್ಸಾಹ, ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತದೆ ಕೃಷಿ ಇಲಾಖೆ.
* ಎಂ.ಡಿ. ಮಶಾಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.