ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ವತಿಯಿಂದ ಚಿಣ್ಣರ ಬೇಸಿಗೆ ಶಿಬಿರ
Team Udayavani, Jun 9, 2017, 4:25 PM IST
ಮುಂಬಯಿ: ಸಯಾನ್‌ನ ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲದ ಯುವ ವಿಭಾಗದ ವತಿಯಿಂದ 7 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಮೂರು ದಿನಗಳ ಬೇಸಿಗೆ ಶಿಬಿರವನ್ನು ನೆರೂಲ್‌ನ ಹಿರಿಯ ನಾಗರಿಕರ ಆಶ್ರಯಧಾಮ “ಆಶ್ರಯ’ದಲ್ಲಿ ಆಯೋಜಿಸಲಾಗಿತ್ತು.
ಜೂ. 2 ರಂದು ಸಂಜೆ ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಸಹ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಯುವ ವಿಭಾಗದ ಸಂಚಾಲಕಿ ವಿನೋದಿನಿ ರಾವ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಬಾಲಕಲಾವೃಂದದವರು ಪ್ರಾರ್ಥನೆಗೈದರು. ಮಹಾಪೆಯಲ್ಲಿರುವ ವಾಮನ್ ಹೊಳ್ಳ ಅವರ “ಕಾಂಟೆಕ್ ಇನ್‌ಸ್ಟುÅಮೆಂಟ್’ ಕಾರ್ಖಾನೆಯ (ತೂಕ ಮಾಡುವ ಯಂತ್ರಗಳ ತಯಾರಿಕಾ ಕಾರ್ಖಾನೆ) ವೀಕ್ಷಣ ಕಾರ್ಯಕ್ರಮ ನಡೆಸಲಾಯಿತು.
ಬೆಳೆದು ಬದುಕು ರೂಪಿಸುತ್ತಾ ರಾಷ್ಟ್ರವನ್ನು ಕಟ್ಟಲು ಸನ್ನದ್ಧರಾಗುವ ಮಕ್ಕಳಲ್ಲಿ ಬರೇ ಶಿಕ್ಷಣಕ್ಕಿಂತ ಸಂಸ್ಕಾರ ತುಂಬುವ ಅಗತ್ಯವಿದೆ. ಅವರಲ್ಲಿ ಆಧುನಿಕ ಜೀವನವನ್ನು ಶಿಸ್ತು ಹಾಗೂ ಸ್ವಯಂಬದ್ಧವಾಗಿ ನಡೆಸುವ ಶಕ್ತಿ ತುಂಬುವ ಅಗತ್ಯವಿದೆ. ಎಲ್ಲಕ್ಕೂ ಮಿಗಿಲಾಗಿ ಪರಿಸರ ರಕ್ಷಣೆ, ಸಾಮರಸ್ಯದ ಸಮಬಾಳ್ವೆ, ಹಾಗೂ ಜೀವನೋಪಾಯದ ಅರಿವು ಮೂಡಿಸುವ ಅವಶ್ಯಕತೆ ಆಯಾ ಸಮಾಜಕ್ಕಿದೆ ಎಂದು ವಾಮನ್ ಹೊಳ್ಳ ಉಪಸ್ಥಿತ ಮಕ್ಕಳ ಪಾಲಕರಿಗೆ ಕಿವಿ ಮಾತುಗಳನ್ನಾಡಿದರು.
ಶಿಬಿರದಲ್ಲಿ ಶ್ರೀಮತಿ ಕುಲಕರ್ಣಿ ಅವರು ಸುಲಭ ಯೋಗ, ಸುನೀತಾ ರಾಮಕುಮಾರ್ ಅವರು ಜೀವನ ಮೌಲ್ಯಗಳು, ಎ. ಪಿ. ಕೆ ಪೋತಿ ಅವರು ವೇದಿಕ್ ಗಣಿತ, ಸಹನಾ ಭರದ್ವಾಜ್ ಅವರು ಕನ್ನಡ ಕಲಿಕೆ, ಸಹನಾ ಪೋತಿ ಅವರು ಭಜನೆ, ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ ಮತ್ತು ಪಿ. ಸಿ. ಎನ್. ರಾವ್ ಅವರು ಕರಕುಶಲ ವಸ್ತುಗಳ ತಯಾರಿ ಮುಂತಾದುವುಗಳ ವಿಚಾರವಾಗಿ ಮಕ್ಕಳನ್ನು ತರಬೇತುಗೊಳಿಸಿದರು.
ಜೂ. 4 ರಂದು ಸಂಜೆ ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬಂತೆ ಇಂತಹ ಮುದ್ದು ಮಕ್ಕಳಲ್ಲಿ ಅಹಂ ಎನ್ನುವುದನ್ನು ಮರೆಮಾಡಿಸಿ ಸ್ವಯಂ ನಿಲುವು ರೂಢಿಸಬೇಕಾಗಿದೆ. ಅವಾಗಲೇ ಅನ್ಯರನ್ನು ಅವಲಂಬಿಸದೆ ಸ್ವಂತಿಕೆಯಿಂದ ಬಾಳುವುದನ್ನು ತನ್ನಿಂದ ತಾನಾಗೇ ರೂಢಿಸಿಕೊಳ್ಳುತ್ತಾರೆ ಎಂದರು.
ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್ ಅವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸುತ್ತಾ ಮುಂದಿನ ಶಿಬಿರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸಿದರು. ಅಸೋಸಿಯೇಶನ್‌ನ ಉಪಸ್ಥಿತ ಪದಾಧಿಕಾರಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದ ಶಿಕ್ಷಕ ಶಿಕ್ಷಕಿಯರನ್ನು, ಕಾರಕರ್ತರನ್ನು ಅಭಿವಂದಿಸಿ ಗೌರವಿಸಿ ವಂದಿಸಿದರು. ಪ್ರೇಮಾ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿದರು. ವಿನೋದಿನಿ ರಾವ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.