ಸದಸ್ಯರಿಗೆ ವ್ಯಾಕರಣ ಪಾಠ ಮಾಡಿದ ಸಿಎಂ!

Team Udayavani, Jun 10, 2017, 10:55 AM IST

cm.jpg

ವಿಧಾನಸಭೆ: ಕನ್ನಡ ವ್ಯಾಕರಣದ ಸಂಧಿ ಎಂದರೇನು? ಎಷ್ಟು ಸಂಧಿಗಳಿವೆ? ಸಮಾಸ ಎಂದರೆ ಗೊತ್ತಿದೆಯೇ?
ಸಂಧಿ, ಸಮಾಸಗಳ ಬಗ್ಗೆ ನಿಮಗೆಷ್ಟು ಗೊತ್ತು? -ಈ ರೀತಿ ಸದನದಲ್ಲಿ ಶುಕ್ರವಾರ ಶಾಸಕರಿಗೆ ವ್ಯಾಕರಣ ಪಾಠ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದನವನ್ನು ನಗೆಗಡಲಲ್ಲಿ ತೇಲಿಸಿದರು. ತಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಕಲಿತ ಕನ್ನಡದ ವ್ಯಾಕರಣಗಳನ್ನು ವಿವರಿಸುತ್ತಾ ಇತರರಿಗೂ ಪಾಠ ಮಾಡಿದರು. ಇದಕ್ಕೆ ಕಾರಣವಾಗಿದ್ದು ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡುತ್ತಿರುವ ಬಗ್ಗೆ ಸಿಎಂ
ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದ್ದು.

“ಸರ್ಕಾರ ಕಳೆದ 10 ವರ್ಷದಲ್ಲಿ 10 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಇದೇ ವೇಳೆ ಎರಡೇ ವರ್ಷದಲ್ಲಿ
10 ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಕಳೆದ ನಾಲ್ಕು ವರ್ಷದಲ್ಲಿ 1.8 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೂ ಸರ್ಕಾರಿ ಶಾಲೆಯಲ್ಲಿ ಬರೀ 46 ಲಕ್ಷ ಮಕ್ಕಳು ಓದುತ್ತಿದ್ದರೆ, ಖಾಸಗಿ ಶಾಲೆಯಲ್ಲಿ 53 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಾದರೆ ಸರ್ಕಾರದ ಹಣ ವ್ಯಯವಾದಂತಲ್ಲವೇ? ಕನ್ನಡ ಶಾಲೆಗಳಿಗೆ ನಾವೇ ಮರಣ ಶಾಸನ ಬರೆದಂತಲ್ಲವೇ’ ಎಂದು ನಾರಾಯಣಸ್ವಾಮಿ ಹೇಳುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು.

ಇದನ್ನು ಗಮನಿಸಿದ ನಾರಾಯಣಸ್ವಾಮಿ, “ಮಾನ್ಯ ಮುಖ್ಯಮಂತ್ರಿಗಳೇ, ನೀವು ಅಹಿಂದದ ಪರವಾಗಿದ್ದೇನೆ ಎಂದು ಹೇಳುತ್ತೀರಿ. ಆದರೆ, ಅಹಿಂದ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನೇ ಮುಚ್ಚುತ್ತಿದ್ದೀರಲ್ಲಾ ಏಕೆ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ಏ ನಾರಾಯಣಸ್ವಾಮಿ, ನಿನ್ನ ಮಕ್ಕಳು ಯಾವ ಸ್ಕೂಲ್‌ನಲ್ಲಿ ಓದುತ್ತಾವಪ್ಪಾ ಎಂಬುದನ್ನು ಮೊದಲು ಹೇಳು’ ಎಂದು ಪ್ರಶ್ನಿಸಿದಾಗ ನಾರಾಯಣಸ್ವಾಮಿ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಹೀಗಾಗಿ ಮುಗುಳ್ನಗುತ್ತಲೇ ನಾರಾಯಣಸ್ವಾಮಿ ಕಾಲೆಳೆದ ಮುಖ್ಯಮಂತ್ರಿಗಳು, “ಬರೀ ಭಾಷಣ ಬಿಗಿಯಬೇಡ.ನಿನ್ನ ಮಕ್ಕಳನ್ನು ಇಂಗ್ಲಿಷ್‌ ಓದಲು ಬಿಟ್ಟು ಇಲ್ಲಿ ಭಾಷಣ ಬಿಗಿಯುತ್ತೀಯಾ? ಕೂತ್ಕೊಳ್ಳಯ್ಯ’ ಎಂದರು.

ವ್ಯಾಕರಣ ಪಾಠ ಮತ್ತು ಸಂಧಿ: ಮಾತು ಮುಂದುವರಿಸಿದ ಸಿದ್ದರಾಮಯ್ಯ, “ಕನ್ನಡ ಭಾಷೆ ಉಳಿಯಬೇಕು. ಮೊದಲು ಶಾಲೆಯಲ್ಲಿ ಒಳ್ಳೆಯ ವ್ಯಾಕರಣ ಹೇಳ್ತಿದ್ರು. ಈವತ್ತಿನ ಮಕ್ಕಳಿಗೆ ವ್ಯಾಕರಣವೇ ಗೊತ್ತಿಲ್ಲ. ನಮಗೆಲ್ಲ 1956ರಲ್ಲಿ ನಮ್ಮ ಮೇಷ್ಟ್ರು ಕಲಿಸಿದ್ದ ಕನ್ನಡ ವ್ಯಾಕರಣ ಇಂದಿಗೂ ನೆನಪಿದೆ’ ಎನ್ನುತ್ತಲೇ, “ಮತ್ತೆ ಸಂಧಿ ಎಂದರೇನು? ಎಷ್ಟು ಸಂಧಿಗಳಿವೆ ‘ ಎಂದು ನಾರಾಯಣಸ್ವಾಮಿ ಅವರಿಗೆ ಪ್ರಶ್ನೆ ಹಾಕಿದರು. ಜತೆಗೆ ನಾರಾಯಣಸ್ವಾಮಿ ಅವರ ಹಿಂದೆ ಕುಳಿತಿದ್ದ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಕುರಿತು, “ನೀವು ಎಂಬಿಬಿಎಸ್‌ ಅಲ್ವಾ? ಸಮಾಸ ಅಂದ್ರೆ ಗೊತ್ತಾ’ ಎಂದು ಪ್ರಶ್ನಿಸಿದರು. ಇದಕ್ಕೆ ನಾರಾಯಣಸ್ವಾಮಿ ಮತ್ತು ಅಶ್ವತ್ಥನಾರಾಯಣ ಅವರು ಮುಗುಳ್ನಕ್ಕರೇ ವಿನಃ ಪ್ರತಿಕ್ರಿಯೆ ನೀಡಲಿಲ್ಲ.

ಈ ವೇಳೆ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ, “ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರು ಸಂಧಿ ಎಂದರೇನು ಎಂದು ಕೇಳಿದ್ದಕ್ಕೆ ನನ್ನ ಸಹಪಾಠಿ ಪುಟ್ಟಸ್ವಾಮಿ ಎಂಬಾತ, ನಮ್ಮ ಮತ್ತು ನಮ್ಮ ದೊಡ್ಡಪ್ಪನ ಮನೆ ನಡುವೆ ಹಾದು ಹೋಗಲು ಇರುವ ಕಿರಿದಾದ ಓಣಿಯೇ ಸಂಧಿ ಎಂದು ಹೇಳಿದ್ದ’ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ನಂತರ ಹಾಸ್ಯದೊಂದಿಗೆ ವ್ಯಾಕರಣ ಪಾಠ ಮಾಡಿದ ಮುಖ್ಯಮಂತ್ರಿಗಳು, “ಅಕ್ಷರಗಳು ಎಡಬಿಡದೆ ಸೇರುವುದಕ್ಕೆ ಸಂಧಿ ಎನ್ನುತ್ತಾರೆ. ಮೂರು ಪ್ರಮುಖ ಸಂಧಿಗಳಿವೆ. ಸವರ್ಣದೀರ್ಘ‌ ಸಂಧಿ, ಗುಣಸಂಧಿ ಮತ್ತು ಲೋಪ ಸಂಧಿ. ಲೋಪ ಸಂಧಿ ಎಂದರೆ, ಈಗೇನು ನೀನು ಇಲ್ಲಿ ಬಂದು ನಿಂತಿಯಲ್ಲ ಅದುವೇ’ ಎಂದು ನಾರಾಯಣಸ್ವಾಮಿ ಅವರನ್ನು ಛೇಡಿಸಿದಾಗ
ಮತ್ತೆ ಸದನದಲ್ಲಿ ನಗೆಯ ಅಲೆ ಉಕ್ಕಿತು. ನಂತರ ಮಾತನಾಡಿದ ಬಿಜೆಪಿ ಸದಸ್ಯರಾದ ಸುರೇಶಗೌಡ, ನಾರಾಯಣಸ್ವಾಮಿ, “ನಾವು ಭಾಷಾ ಮಾಧ್ಯಮ ನೀತಿ ಅಥವಾ ಇಂಗ್ಲಿಷ್‌ನ ವಿರೋಧಿಗಳಲ್ಲ.

ಆದರೆ, ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಏಕೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ? ಸರ್ಕಾರಿ ಶಾಲೆಗಳಿಗೆ ಮಕ್ಕಳೇಕೆ ಬರುತ್ತಿಲ್ಲ ಎಂದಷ್ಟೇ ನಮ್ಮ ಪ್ರಶ್ನೆ’ ಎಂದಾಗ, “ಆಯ್ತು ಮಾತು ಮುಂದುವರಿಸಿ’ ಎಂದು ಸಿದ್ದರಾಮಯ್ಯ ಸುಮ್ಮನಾದರು.

ಸಂದಿ ಹೊಕ್ಕಿದ್ದಕ್ಕೆ ಸಿಎಂ ಆದ್ರಿ: ಪುಟ್ಟಣ್ಣಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ವ್ಯಾಕರಣ ಪಾಠ ಮಾಡಿ ಸಂಧಿಗಳ ಬಗ್ಗೆ ವಿವರಣೆ ನೀಡಿ ಮುಗಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್‌.ಪುಟ್ಟಣ್ಣಯ್ಯ, “ಸಿದ್ದರಾಮಯ್ಯನವರೇ ನೀವು
ಎಲ್ಲಾ ಸಂದಿಗಳನ್ನು ಹೊಕ್ಕು ಬಂದಿದ್ದಕ್ಕೆ ಮುಖ್ಯಮಂತ್ರಿಯಾಗಿದ್ದೀರಿ’ ಎಂದು ಚಟಾಕಿ ಹಾರಿಸಿದರು. ಅದಕ್ಕೆ ಸಿದ್ದರಾಮಯ್ಯ, “ರೀ ಪುಟ್ಟಣ್ಣಯ್ಯ, ನೀವೂ ಎಲ್ಲಾ ಸಂದಿಗಳನ್ನು ಹೊಕ್ಕುಬನ್ನಿ. ನೀವೂ ಮುಖ್ಯಮಂತ್ರಿಗಳಾಗಬಹುದು..’ ಎಂದಾಗ, “ಅಯ್ಯೋ, ನಾವು ರೈತರ ಸಂದಿಯಲ್ಲಿ ಸಿಲುಕಿದ್ದೇವೆ. ನಮಗೆ ಬೇರೆ ಸಂದಿಗಳು ಆಗಿಬರುವುದಿಲ್ಲ ಬಿಡಿ’ ಎಂದು ಪುಟ್ಟಣ್ಣಯ್ಯ ಹೇಳಿದರು.

ಟಾಪ್ ನ್ಯೂಸ್

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.